Farmers Tractor Parade: ಹಿಂಸಾತ್ಮಕ ರೂಪ ತಳೆದ ರೈತರ ಪ್ರತಿಭಟನೆ, ಇಲ್ಲಿವೆ ಚಿತ್ರಗಳು

Tue, 26 Jan 2021-3:04 pm,

ಆಕ್ರೋಶಗೊಂಡ ರೈತರು ದೆಹಲಿಯ ಐಟಿಒ ತಲುಪಿದ್ದಾರೆ. ಇಲ್ಲಿ ಪೊಲೀಸರು ಮತ್ತು ರೈತರ ನಡುವೆ ಘರ್ಷಣೆ ನಡೆದಿದೆ. ಐಟಿಒನಲ್ಲಿ ನಿಲ್ಲಿಸಿದ್ದ ಪೊಲೀಸ್ ವಾಹನಗಳನ್ನು ರೈತರು ಹಾನಿಗೊಳಿಸಿದ್ದಾರೆ. ಸುದ್ದಿ ಸಂಸ್ಥೆ ಐಎಎನ್ ಪ್ರಕಾರ, ರೈತರು ಸಹ ಇಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಗಣರಾಜ್ಯೋತ್ಸವದ (Republic Day 2021) ಮೆರವಣಿಗೆಯನ್ನು ಗಮನದಲ್ಲಿಟ್ಟುಕೊಂಡು, ಐಟಿಒ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಮತ್ತು ಕಟ್ಟುನಿಟ್ಟಾದ ಭದ್ರತಾ ವ್ಯವಸ್ಥೆಗಳನ್ನು ಜಾರಿಗೆ ತರಲಾಗಿದೆ. ಆದರೆ ರೈತರಿಂದ ಎಲ್ಲ ವ್ಯವಸ್ಥೆಗಳನ್ನು ಉಲ್ಲಂಘಿಸಿ ದಾಂಧಲೆಗೆ ಇಳಿದಿದ್ದಾರೆ ಎನ್ನಲಾಗಿದೆ.  

ರೈತರಲ್ಲಿ ಹೆಚ್ಚಾಗುತ್ತಿರುವ ಆಕ್ರೋಶದ ಹಿನ್ನೆಲೆ ದೆಹಲಿ ಮೆಟ್ರೋ ರೈಲು ನಿಗಮ  (Delhi Metro Rail Corporation), ಇಂದ್ರಪ್ರಸ್ಥ ಸೇರಿದಂತೆ ಗ್ರೀನ್ ಲೈನ್ ನ ಎಲ್ಲ ಮೆಟ್ರೋ ಸ್ಟೇಷನ್ ಗಳನ್ನು ಬಂದ್ ಮಾಡಿದೆ. ITO ಮೆಟ್ರೋ ಸ್ಟೇಷನ್ ಅನ್ನು ಕೂಡ DMRC ಬಂದ್ ಮಾಡಿದೆ.

ದೆಹಲಿ ಮೆಟ್ರೋ ಶಾಮಪುರ್ ಬಾದಲಿ, ರೋಹಿಣಿ ಸೆಕ್ಟರ್ 18/19, ಹೈದರ್ ಪುರ್ ಬಾದಲಿ, ಜಹಾಂಗೀರ್ ಪುರಿ, ಆದರ್ಶ ನಗರ್, ಆಜಾದ್ ಪುರ್, ಮಾಡೆಲ್ ಟೌನ್, GTB ನಗರ್, ವಿಶ್ವವಿದ್ಯಾಲಯ, ವಿಧಾನಸಭೆ ಹಾಗೂ ಸಿವಿಲ್ ಲೈನ್ ಮೆಟ್ರೋ ಸ್ಟೇಷನ್ ಗಳ ಮೇಲೆ ಸಾರ್ವಜನಿಕರ ಎಂಟ್ರಿ ಹಾಗೂ ಓಡಾಟ ಎರಡನ್ನು ಕೂಡ ಬಂದ್ ಮಾಡಿದೆ.

ದೆಹಲಿ-ಗಾಜಿಯಾಬಾದ್ ಅನ್ನು ಸಂಪರ್ಕಿಸುವ ಗಾಜಿಪುರ ಗಡಿಯಲ್ಲಿ ರೈತರು ಪೊಲೀಸ್ ಬ್ಯಾರಿಕೇಡ್ಗಳನ್ನು ಉಲ್ಲಂಘಿಸಿದ್ದಾರೆ. ಈ ವೇಳೆ ಪೊಲೀಸರು ಅಶ್ರುವಾಯು ಗುಂಡುಗಳನ್ನೂ ಸಿಡಿಸಿ, ಲಾಠಿಚಾರ್ಜ್ ನಡೆಸಿದ್ದಾರೆ.. ದೆಹಲಿಯ ಟಿಕ್ರಿ ಗಡಿಯಲ್ಲಿ ರೈತರು ಬ್ಯಾರಿಕೇಡ್‌ಗಳನ್ನು ಉಲ್ಲಂಘಿಸಿದ ನಂತರ, ಪೊಲೀಸರು ಅವರೊಂದಿಗೆ ಮಾತುಕತೆಗೆ ಮುಂದಾದರು ಕೂಡ ರೈತರು ನಿಂತಿಲ್ಲ.  ಈ ಸಂದರ್ಭದಲ್ಲಿ ಮುಂದೆ ಸಾಗದಂತೆ ಪೊಲೀಸರು ರೈತರಿಗೆ ಮನವಿ ಮನವಿ ಮಾಡಿದ್ದಾರೆ.

ದೆಹಲಿಯ ಸಿಂಧು ಗಡಿ, ಟಿಕ್ರಿ ಮತ್ತು ಗಾಜಿಪುರ ಗಡಿಯಲ್ಲಿ ಪೊಲೀಸರ ಬ್ಯಾರಿಕೇಡ್‌ಗಳನ್ನು ಮುರಿದ ರೈತರು ಬಳಿಕ ದೆಹಲಿ ಗಡಿಗೆ ನುಗ್ಗಿದ್ದಾರೆ. ಮುಕರ್ಬಾ ಚೌಕ್‌ನಲ್ಲಿ (Mukarba Chowk) ರೈತರು ಪೊಲೀಸರ ಭದ್ರತಾ ವ್ಯವಸ್ಥೆಯನ್ನು  ಹಾಳುಮಾಡಲು ಯತ್ನಿಸಿದ್ದಾರೆ.

ದೆಹಲಿಯ ಪಾಂಡವ್ ನಗರ ಬಳಿಯ ದೆಹಲಿ-ಮೀರತ್ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ರೈತರು ಪೊಲೀಸರ ಅಡೆತಡೆಗಳನ್ನು ತೆಗೆದು ಹಾಕಿದ್ದಾರೆ. ದೆಹಲಿಯ ಸಿಂಧೂ ಗಡಿಯಲ್ಲಿ ರೈತರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸೆಲ್ ಗಳನ್ನು ಸಿಡಿಸಿದ್ದಾರೆ.  ಸಿಂಧೂ ಗಡಿಯಲ್ಲಿರುವ ಸಂಜಯ್ ಗಾಂಧಿ ಟ್ರಾನ್ಸ್ಪೋರ್ಟ್ ನಗರದಲ್ಲಿ ಪೊಲೀಸರು ಮತ್ತು ರೈತರ ನಡುವೆ ಘರ್ಷಣೆ ನಡೆದ ಕುರಿತು ವರದಿಯಾಗಿದೆ.

ದೆಹಲಿಯ ಹೊರತಾಗಿ, ದೇಶದ ಇತರ ಭಾಗಗಳಿಂದ ಟ್ರಾಕ್ಟರ್ ಪರೇಡ್ ಸುದ್ದಿಗಳೂ ಕೂಡ ಬರಲಾರಂಭಿಸಿವೆ. ಕರ್ನಾಲ್ ಬೈಪಾಸ್‌ನಲ್ಲಿ ಆಕ್ರೋಶಗೊಂಡ ರೈತರು ಪೊಲೀಸರು ನಿರ್ಮಿಸಿದ್ದ ಭದ್ರತಾ ವ್ಯವಸ್ಥೆಯನ್ನು ಉಲ್ಲಂಘಿಸಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link