Sara Tendulkar Photo Gallery : ಸಚಿನ್ ತೆಂಡೂಲ್ಕರ್ ಮಗಳ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ನೋಡಿ ಇಂಟರಸ್ಟಿಂಗ್ ಸಂಗತಿಗಳು!

Sun, 08 Aug 2021-4:54 pm,

ಸಾರಾ ತೆಂಡೂಲ್ಕರ್ ಒಮ್ಮೆ ಸಂದರ್ಶನವೊಂದರಲ್ಲಿ ರಣವೀರ್ ಸಿಂಗ್ ತನ್ನ ಸೆಲೆಬ್ರಿಟಿ ಕ್ರಶ್ ಎಂದು ಹೇಳಿದ್ದರು. ರಣವೀರ್ ಸಿಂಗ್ ಅವರ ಸೂಪರ್ ಹಿಟ್ ಮೂವಿ ಬಾಜಿರಾವ್ ಮಸ್ತಾನಿ ಅವರ ನೆಚ್ಚಿನ ಚಿತ್ರ ಎಂದು ಹೇಳಿದ್ದಾರೆ.

ಸಾರಾ ತೆಂಡುಲ್ಕರ್ ಭಾರತದ ಅತ್ಯಂತ ಜನಪ್ರಿಯ ಸೆಲೆಬ್ರಿಟಿ ಮಕ್ಕಳಲ್ಲಿ ಒಬ್ಬರು. ಭಾರತೀಯ ಕ್ರಿಕೆಟ್ ತಂಡವು 'ಸಹಾರಾ ಕಪ್' ಗೆದ್ದ ನಂತರ ಸಾರಾ ಹುಟ್ಟಿದ್ದು ಹಾಗಾಗಿ ಸಚಿನ್ ತೆಂಡೂಲ್ಕರ್ ಈ ಹೆಸರನ್ನು  ಇಟ್ಟಿದ್ದಾರೆ ಎಂದು ಹೇಳಲಾಗಿದೆ.

ಸಾರಾ ತೆಂಡೂಲ್ಕರ್ ಲಂಡನ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ.

ಸಾರಾ ತನ್ನ ತಂದೆ ಸಚಿನ್ ತೆಂಡೂಲ್ಕರ್‌ಗೆ ತುಂಬಾ ಆಪ್ತರಾಗಿದ್ದು, ಇಬ್ಬರೂ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಸಚಿನ್ ಅವರ ಬಯೋಪಿಕ್, ಸಚಿನ್: ಎ ಬಿಲಿಯನ್ ಡ್ರೀಮ್ಸ್ ನ ಪ್ರಥಮ ಪ್ರದರ್ಶನದಲ್ಲಿ ಸಾರಾ ಭಾವನಾತ್ಮಕ ಭಾಷಣ ಮಾಡಿದರು.

ಸಾರಾ ತೆಂಡೂಲ್ಕರ್ ಶಾಹಿದ್ ಕಪೂರ್ ಜೊತೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ ಎಂದು ಕೆಲವು ವರದಿಗಳು ಹರಿದಾಡುತ್ತಿದ್ದವು. ಇದಕ್ಕೆ ಸಚಿನ್ ತೆಂಡೂಲ್ಕರ್ ಸಂದರ್ಶನವೊಂದರಲ್ಲಿ ಈ ವರದಿಗಳು ಆಧಾರರಹಿತವಾಗಿವೆ ಮತ್ತು ಸಾರಾ ನಾವು ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link