`Reserve Bank` ಬಳಿಕ `Kailasa`ಗೆ ವಿಮಾನ ಸೇವೆ ಆರಂಭಿಸಿದ ನಿತ್ಯಾನಂದ

Fri, 18 Dec 2020-6:53 pm,

ಲೈಂಗಿಕ ಕಿರುಕುಲ್ ಅಆರೋಪ ಎದುರಿಸುತ್ತಿರುವ ನಿತ್ಯಾನಂದ ಭಾರತದಿಂದ ಸುಮಾರು 1600 ಕಿಲೋಮೀಟರ್ ದೂರದಲ್ಲಿ ತನ್ನದೇ ಆದ ದೇಶ ನಿರ್ಮಾಣ ಮಾಡಿದ್ದಾನೆ. ಲ್ಯಾಟಿನ್ ಅಮೇರಿಕಾದ ಇಕ್ವೆಡಾರ್ ಹತ್ತಿರ ತನ್ನದೇ ಆದ ರಾಷ್ಟ್ರ ನಿರ್ಮಿಸಿದ್ದಾನೆ. ಸಂಸ್ಕ್ರತ, ಇಂಗ್ಲಿಷ್ ಹಾಗೂ ತಮಿಳು ಭಾಷೆ ಈ ದೇಶದ ಭಾಷೆಗಳಾಗಿವೆ ಎನ್ನಲಾಗಿದೆ.

ಎ. ರಾಜಶೇಖರನ್ ಅಲಿಯಾಸ್ ಸ್ವಾಮಿ ನಿತ್ಯಾನಂದ್ ಜಿ ಮಹಾರಾಜ್ ತನಗಾಗಿ ಹೊಸ ಪ್ರಪಂಚವನ್ನು ಸೃಷ್ಟಿಸಿದ್ದಾನೆ . ಕೈಲಾಸ ಬಗ್ಗೆ, ವೆಬ್‌ಸೈಟ್ ಗಳಲ್ಲಿ ಇದು ವಿಶ್ವದ ಏಕೈಕ ಹಿಂದೂ ರಾಷ್ಟ್ರ ಎಂದು ಹೇಳಲಾಗಿದೆ. ಅಲ್ಲಿ ಅದು ತನ್ನದೇ ಆದ ಪ್ರಧಾನ ಮಂತ್ರಿ, ಕ್ಯಾಬಿನೆಟ್, ಕಾನೂನು, ಸಂವಿಧಾನ ಮತ್ತು ಸೈನ್ಯವನ್ನು ಹೊಂದಿರುತ್ತದೆ. ಇದರೊಂದಿಗೆ, ತುಳಿತಕ್ಕೊಳಗಾದ ಹಿಂದೂಗಳಿಗೆ ಆಶ್ರಯ ನೀಡಲು ಪ್ರತ್ಯೇಕ ದೇಶವನ್ನು ರಚಿಸಿದ್ದೇನೆ ಎಂದು ಮೋಸಗಾರ ಬಾಬಾ ನಿತ್ಯಾನಂದ ಹೇಳಿದ್ದಾನೆ.

ಯಾವುದೇ ಹಿಂದೂ ಇಲ್ಲಿ ಪೌರತ್ವ ಪಡೆಯಬಹುದು ಎಂದು ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಹಿಂದೂ ಧರ್ಮದ ಜನರು, ತಮ್ಮ ಜಾತಿಯನ್ನು ಲೆಕ್ಕಿಸದೆ,  ಇಲ್ಲಿ ಸುರಕ್ಷಿತ ಆಶ್ರಯ ಪಡೆಯಬಹುದು. ಅವರು ಇಲ್ಲಿಗೆ ಬರಬಹುದು. ಈಕ್ವೆಡಾರ್ ಬಳಿಯ ಈ ದ್ವೀಪವನ್ನು ಖರೀದಿಸಿರುವನಿತ್ಯಾನಂದ ಅದನ್ನು ಕೈಲಾಸಾ ರಾಷ್ಟ್ರವನ್ನಾಗಿಸಿದ್ದಾನೆ.  ಹಾಗೆಯೇ ಇಲ್ಲಿರುವ ರಾಷ್ಟ್ರೀಯ ಪ್ರಾಣಿ ನಂದಿ ಬುಲ್, ರಾಷ್ಟ್ರೀಯ ಮರ ಆಲದ ಮರ ಮತ್ತು ರಾಷ್ಟ್ರೀಯ ಹೂವು ಕಮಲ ಎಂದು ತಮ್ಮ ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾನೆ.

ಜೈಲಿನಲ್ಲಿರಬೇಕಾದ ಈ ಅಪರಾಧಿ ತನ್ನನ್ನು ತಾನು ಶಿವನ ಅವತಾರವೆಂದು ಕರೆದುಕೊಳ್ಳುತ್ತಾನೆ. ಪರಾರಿಯಾದ ನಿತ್ಯಾನಂದ ದೇಶದಿಂದ ಓಡಿಹೋಗಿದ್ದು, ಈಗ ತನ್ನ ಜಾಲವನ್ನು ವಿದೇಶದಲ್ಲಿ ಹರಡಲು ಯೋಜಿಸಿದ್ದಾನೆ. ನಿತ್ಯಾನಂದ ಅತ್ಯಾಚಾರ ಮತ್ತು ಅಪಹರಣದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾನೆ. ಅವನು ಎರಡು ಬಾರಿ ಜೈಲಿಗೂ ಸಹ ಹೋಗಿದ್ದಾನೆ. ಕೈಲಾಸವನ್ನು ತನ್ನ ದೇಶ ಎಂದು ಬಣ್ಣಿಸುವ ನಿತ್ಯಾನಂದ, ಅದು ತನ್ನದೇ ಆದ ಧ್ವಜವನ್ನು ಹೊಂದಿದ್ದು, ಅದರ ಮೇಲೆ ನಿತ್ಯಾನಂದ ಚಿತ್ರವಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link