Free ಸಿಗುತ್ತಿದೆ Netflix ಹಾಗೂ Amazon Prime ಚಂದಾದಾರಿಕೆ ! ಹೇಗೆ ಅಂತಿರಾ?
1. Jioನ ಈ ಪ್ಲಾನ್ಸ್ ಗಳ ಜೊತೆಗೆ ಉಚಿತ ಚಂದಾದಾರಿಕೆ - ಒಂದು ವೇಳೆ ನೀವೂ ಕೂಡ ಜಿಯೋ ಗ್ರಾಹಕರಾಗಿದ್ದರೆ. ಇಲ್ಲಿದೆ ನಿಮಗೊಂದು ಸಂತಸದ ಸುದ್ದಿ. ಜಿಯೋನ ಕೆಲ ಪೋಸ್ಟ್ ಪೇಡ್ ಪ್ಲಾನ್ ಗಳ ಮೇಲೆ Netflix ಹಾಗೂ Amazon Prime ಚಂದಾದಾರಿಕೆ ಉಚಿತವಾಗಿ ನೀಡಲಾಗುತ್ತಿದೆ. ಜಿಯೋನ ರೂ.399, ರೂ.599 , ರೂ.799, 899 ಹಾಗೂ 1499 ರೂ.ಗಳ ಪೋಸ್ಟ್ ಪೇಡ್ ಪ್ಲಾನ್ ಗಳ ಜೊತೆಗೆ Netflix ಹಾಗೂ Amazon Prime ಗಳ ಉಚಿತ ಚಂದಾದಾರಿಕೆ (Free Subscription) ಸಿಗುತ್ತದೆ.
2. Viನ ಈ ಪ್ಲಾನ್ಗಳಲ್ಲಿಯೂ ಕೂಡ ಉಚಿತವಾಗಿ ಸಿಗುತ್ತದೆ ಚಂದಾದಾರಿಕೆ - 91 Mobiles ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ Vi ಕೂಡ ತನ್ನ ಪೋಸ್ಟ್ ಪೇಡ್ ಪ್ಲಾನ್ ಗಳ ಜೊತೆಗೆ Netflix ಹಾಗೂ Amazon Prime ಗಳ ಉಚಿತ ಚಂದಾದಾರಿಕೆ ನೀಡುತ್ತದೆ. ಮಾಹಿತಿಯ ಪ್ರಕಾರ ಈ ಕಂಪನಿಯ 1099 ಪ್ಲಾನ್ ಜೊತೆಗೆ ನಿಮಗೆ Netflix ಹಾಗೂ Amazon Prime ಚಂದಾದಾರಿಕೆ ಕೂಡ ನೀಡಲಾಗುತ್ತದೆ.
3.Airtel ಕೂಡ ನೀಡುತ್ತದೆ ಚಂದಾದಾರಿಕೆ - Airtelನ ಯಾವುದೇ ಪ್ಲಾನ್ ನಲ್ಲಿ ನಿಮಗೆ ನೆಟ್ ಫ್ಲಿಕ್ಸ್ ಉಚಿತ ಚಂದಾದಾರಿಕೆ ನೀಡುವುದಿಲ್ಲ. ಆದರೆ ಏರ್ಟೆಲ್ ನ ರೂ.499 ಪ್ಲಾನ್ ಜೊತೆಗೆ ನಿಮಗೆ ಅಮೆಜಾನ್ ಪ್ರೈಮ್ ಚಂದಾದಾರಿಕೆ ಉಚಿತವಾಗಿ ನೀಡುತ್ತದೆ
4. ನೆಟ್ ಫ್ಲಿಕ್ಸ್ ಚಂದಾದಾರಿಕೆಯ ಬೆಲೆ ಎಷ್ಟು? - ಮಾಹಿತಿ ಪ್ರಕಾರ ನೆಟ್ ಫ್ಲಿಕ್ಸ್ ಒಟ್ಟು ನಾಲ್ಕು ಪ್ಲಾನ್ ಗಳ ಕೊಡುಗೆ ನೀಡುತ್ತದೆ. ನೀವು ಕೇವಲ ರೂ.199 ನೀಡಿ ನೆಟ್ ಫ್ಲಿಕ್ಸ್ ಚಂದಾದಾರಿಕೆ ಪಡೆಯಬಹುದು. ಇದಲ್ಲದೆ 499 ರೂ. ಹಾಗೂ 649ರೂ. ಪ್ಲಾನ್ ಗಳು ಕೂಡ ಇವೆ. Netflix Premium Plan ಬೆಲೆ ರೂ.799 ಆಗಿದೆ.
5.Amazon Prime ಬೆಲೆ ಎಷ್ಟು? - ನೀವು ಕೇವಲ ರೂ.129 ಪಾವತಿಸಿ Amazon Prime ಮಾಸಿಕ ಚಂದಾದಾರಿಕೆ ಪಡೆಯಬಹುದು. ಇದನ್ನೇ ನೀವು ಒಂದು ವರ್ಷದ ಅವಧಿಗಾಗಿ ಖರೀದಿಸಿದರೆ ನೀವು ಕೇವಲ ರೂ.999 ಪಾವತಿಸಬೇಕು.