WhatsApp ಮಾಡುತ್ತಿರುವ ಈ ದೊಡ್ಡ ಬದಲಾವಣೆಯನ್ನು ಸ್ವೀಕರಿಸಲು ನೀವೂ ಸಿದ್ಧರಾಗಿ
ವಾಟ್ಸ್ ಆಪ್ ಅಪ್ಡೇಟ್ ಗಳನ್ನು ಟ್ರ್ಯಾಕ್ ಮಾಡುವ ಬ್ಲಾಗ್ WABetaInfo ನಲ್ಲಿ ಪ್ರಕಟಗೊಂಡ ಮಾಹಿತಿಯ ಪ್ರಕಾರ WhatsApp ಇತ್ತೀಚೆಗಷ್ಟೇ ತನ್ನ ನೂತನ ಅಪ್ಡೇಟ್ ಬಿಡುಗಡೆಗೊಳಿಸಿದೆ. WhatsApp Web ವರ್ಶನ್ 2.20.206.19 ಹಾಗೂ iOS 2.20.130 ಪ್ಲೇ ಸ್ಟೋರ್ ಗಳಿಗೆ ಬಿಡುಗಡೆಯಾಗಿವೆ. ಈ ನೂತನ ಅಪ್ಡೇಟ್ ಪ್ರಕಾರ ಇನ್ಮುಂದೆ ವಾಟ್ಸ್ ಆಪ್ ನಿಮಗೆ ಜಾಹೀರಾತುಗಳನ್ನು ಕೂಡ ತೋರಿಸಲಿದೆ.
ಜಾಹೀರಾತುಗಳ ಕುರಿತು WhatsApp ಇದುವರೆಗೆ ಯಾವುದೇ ಅಧಿಕೃತ ಮಾಹಿತಿಯನ್ನು ಪ್ರಕಟಿಸಿಲ್ಲ. ಆದರೆ ಟೆಕ್ ಬ್ಲಾಗ್ ಪ್ರಕಾರ, ಶೀಘ್ರದಲ್ಲಿಯೇ ಸಂಸ್ಥೆ ತನ್ನ ಲೇಟೆಸ್ಟ್ ಅಪ್ಡೇಟ್ ಹಾಗೂ ಸೂಚನೆಗಳ ಬಗ್ಗೆ ಬಳಕೆದಾರರಿಗೆ ಮಾಹಿತಿ ನೀಡಲಿದೆ ಎನ್ನಲಾಗಿದೆ.
ದೊರೆತ ಮಾಹಿತಿಯ ಪ್ರಕಾರ ಜಾಹೀರಾತುಗಳಿಗಾಗಿ ವಾಟ್ಸ್ ಆಪ್ ನಿಮಗೆ ಯಾವುದೇ ರೀತಿಯ ಸಂದೇಶ ಕಳುಹಿಸುವುದಿಲ್ಲ. ಆದರೆ, ಕಂಪನಿ ಆಪ್ ನಲ್ಲಿ ಜಾಹೀರಾತುಗಳನ್ನು ಬಿತ್ತರಿಸಲಿದೆ. ಈ ಜಾಹೀರಾತುಗಳು ನಿಮ್ಮನ್ನು ಎಕ್ಸ್ಟರ್ನಲ್ ಸೈಟ್ ಗೂ ಕೂಡ ಕೊಂಡೊಯ್ಯಬಹುದು.
ಶೀಘ್ರದಲ್ಲಿಯೇ ಕಂಪನಿ ಹೊಸ ನಿಯಮಗಳು ಮತ್ತು ಗೌಪ್ಯತಾ ನೀತಿ ನವೀಕರಣಗಳನ್ನು ಪ್ರಕಟಿಸಲಿದೆ ಎನ್ನಲಾಗಿದೆ. ಹೊಸ ಅಪ್‌ಡೇಟ್‌ನಲ್ಲಿ ಈ ನೀತಿ ನಿಯಮಗಳಿಗೆ ಯಾವುದೇ ಬಳಕೆದಾರರು ಒಪ್ಪಿಗೆ ನೀಡದಿದ್ದರೆ, ಅಂತವರ ವಾಟ್ಸಾಪ್ ಖಾತೆಯನ್ನು ಡಿಲೀಟ್ ಮಾಡಲಾಗುವುದ ಎನ್ನಲಾಗಿದೆ. ಬಳಕೆದಾರರು ಹೊಸ ನಿಯಮಗಳು ಮತ್ತು ಷರತ್ತುಗಳನ್ನು ಅನುಸರಿಸಬೇಕಾಗುತ್ತದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.
ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಕಂಪನಿಯ ನೂತನ Terms & Conditions ಮುಂದಿನ ವರ್ಷದ ಫೆಬ್ರುವರಿಯಿಂದ ಜಾರಿಗೆ ಬರಲಿವೆ ಎನ್ನಲಾಗಿದೆ.