ಧನತ್ರಯೋದಶಿಯ ದಿನ ಅಗ್ಗದ ಬೆಲೆಯಲ್ಲಿ Gold ಖರೀದಿಸಬೇಕೆ? ಇಲ್ಲಿದೆ ಉಪಾಯ
ಕೇಂದ್ರ ಸರ್ಕಾರ ಸಾವೆರಿನ್ ಬಾಂಡ್ ಯೋಜನೆಯ 8 ನೆ ಆವೃತ್ತಿ ನವೆಂಬರ್ 9 ರಿಂದ ಮತ್ತೊಮ್ಮೆ ಪ್ರಾರಂಭವಾಗಲಿದೆ. ಈ ಸಮಯದಲ್ಲಿ ಚಿನ್ನದಲ್ಲಿ ಹೂಡಿಕೆ ಮಾಡುವುದು ಉತ್ತಮ ಆಯ್ಕೆಯಾಗಿದೆ. ಆದರೆ, ನೀವು ಅದನ್ನು ಫಿಸಿಕಲ್ ರೂಪದಲ್ಲಿ ಖರೀದಿಸಲು ಸಾಧ್ಯವಿಲ್ಲ. ಬಾಂಡ್‌ಗಳನ್ನು ಖರೀದಿಸುವುದರ ಮೂಲಕ ಮಾತ್ರ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ಆರ್‌ಬಿಐ ಪ್ರಕಾರ, ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ಲಿಮಿಟೆಡ್ (ಐಬಿಜೆಎ) ಪ್ರಕಟಿಸಿದ ಸರಾಸರಿ ಸರಾಸರಿ 999 ಶುದ್ಧತೆಯ ಚಿನ್ನದ ಬೆಲೆಯನ್ನು ಆಧರಿಸಿ ಈ ಬಾಂಡ್ ಗಳ ಬೆಲೆ ಇರಲಿದೆ. ಪ್ರಸ್ತುತ ಇದರ ಅಡಿಯಲ್ಲಿ ಪ್ರತಿ ಗ್ರಾಂಗೆ 5,177 ರೂ. ಇದೆ. ಸರ್ಕಾರಿ ಚಿನ್ನದ ಬ್ರಾಂಡ್ ಯೋಜನೆ 2020-21ರ ಎಂಟನೇ ಸರಣಿಯ ಅರ್ಜಿಗಳನ್ನು 2020 ರ ನವೆಂಬರ್ 9 ರಿಂದ 13 ರವರೆಗೆ ಸ್ವೀಕರಿಸಲಾಗುತ್ತಿದೆ ಎಂಬುದು ಇಲ್ಲಿ ಗಮನಾರ್ಹ.
ಕೇಂದ್ರೀಯ ಬ್ಯಾಂಕಿನೊಂದಿಗೆ ಸಮಾಲೋಚಿಸಿದ ನಂತರ, ಆನ್‌ಲೈನ್‌ನಲ್ಲಿ ಚಿನ್ನದ ಬಾಂಡ್‌ಗಳಿಗೆ ಅರ್ಜಿ ಸಲ್ಲಿಸುವ ಹೂಡಿಕೆದಾರರಿಗೆ ಬಾಂಡ್‌ನ ನಿಗದಿತ ಬೆಲೆಯ ಮೇಲೆ ಪ್ರತಿ ಗ್ರಾಂಗೆ 50 ರೂ.ಗಳ ರಿಯಾಯಿತಿ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಇಂತಹ ಹೂಡಿಕೆದಾರರು ಅಪ್ಲಿಕೇಶನ್‌ನೊಂದಿಗೆ ಡಿಜಿಟಲ್ ರೀತಿಯಲ್ಲಿ ಹಣ ಪಾವತಿ ಮಾಡಬೇಕಾಗುತ್ತದೆ. ಅಂದರೆ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಹೂಡಿಕೆದಾರರಿಗೆ ಚಿನ್ನದ ಬಾಂಡ್‌ನ ವಿತರಣಾ ಬೆಲೆ ಪ್ರತಿ ಗ್ರಾಂಗೆ 5,127 ರೂ. ಇರಲಿದೆ.
ಈ ಬಾಂಡ್‌ಗಳನ್ನು 8 ವರ್ಷಗಳ ಅವಧಿಗೆ ನೀಡಲಾಗುತ್ತದೆ ಮತ್ತು 5 ವರ್ಷಗಳ ನಂತರ ಹಿಂತೆಗೆದುಕೊಳ್ಳುವ ಆಯ್ಕೆಯೂ ಇದೆ. ಅರ್ಜಿ ಸಲ್ಲಿಸುವವರು ಕನಿಷ್ಠ ಒಂದು ಗ್ರಾಂ ಮತ್ತು ಅದರ ಗುಣಕದಲ್ಲಿ ಚಿನ್ನವನ್ನು ಖರೀದಿಸಬೇಕು.
ವೈಯಕ್ತಿಕ ಚಿನ್ನ ಖರೀದಿದಾರರು ಈ ಯೋಜನೆಯ ಅಡಿ ಕನಿಷ್ಠ ಅಂದರೆ 1 ಗ್ರಾಂ ಚಿನ್ನ ಹಾಗೂ ಹೆಚ್ಚುವರಿ ಅಂದರೆ 4 ಕೆ.ಜಿಯಷ್ಟು ಚಿನ್ನದಲ್ಲಿ ಹೂಡಿಕೆ ಮಾಡಬಹುದಾಗಿದೆ. ಹಿಂದೂ ಅವಿಭಜಿತ ಕುಟುಂಬಗಳಿಗೆ 4 ಕೆ.ಜಿ ಹಾಗೂ ಟ್ರಸ್ಟ್ ಇತ್ಯಾದಿಗಳಿಗೆ ಯಾವುದೇ ಒಂದು ಆರ್ಥಿಕ ವರ್ಷದಲ್ಲಿ ಹೆಚ್ಚುವರಿ ಅಂದರೆ 20 ಕೆ.ಜಿ ಚಿನ್ನದ ಬಾಂಡ್ ನಲ್ಲಿ ಹೂಡಿಕೆ ಮಾಡಲು ಅನುಮತಿ ನೀಡಲಾಗಿದೆ.