ಇನ್ಮುಂದೆ Driving Licenceಗೆ ಟೆಸ್ಟ್ ಅಗತ್ಯವಿಲ್ಲ, ಸರ್ಕಾರ ರೂಪಿಸುತ್ತಿದೆ ಈ ನಿಯಮ
ಪ್ರಸ್ತುತ ನಿಯಮದ ಪ್ರಕಾರ, ಚಾಲನಾ ಪರವಾನಗಿ ಪಡೆಯಲು, ನೀವು ಆರ್‌ಟಿಒ ಕಚೇರಿಗೆ ಹೋಗಿ ಚಾಲನಾ ಪರೀಕ್ಷೆಯನ್ನು ನೀಡಬೇಕು. ನೀವು ಈ ಪರೀಕ್ಷೆಯಲ್ಲಿ ವಿಫಲವಾದರೆ, ನೀವು ಯಾವುದೇ ಸಂದರ್ಭದಲ್ಲಿ ಚಾಲನಾ ಪರವಾನಗಿ ಪಡೆಯುವುದಿಲ್ಲ ಮತ್ತು ನಿಮ್ಮ ಅರ್ಜಿಯನ್ನು ರದ್ದುಗೊಳಿಸಲಾಗುತ್ತದೆ. ಇದೇ ವೇಳೆ, ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ನಿಮಗೆ ಮೊದಲು ಲರ್ನಿಂಗ್ ಲೈಸನ್ಸ್ ಸಿಗಲಿದೆ. ನಂತರ 6 ತಿಂಗಳೊಳಗೆ ಶಾಶ್ವತ ಪರವಾನಗಿ ಸಿಗುತ್ತದೆ.
ಅಧಿಕಾರಿಗಳ ಪ್ರಕಾರ, ಪರೀಕ್ಷೆಯಲ್ಲಿ ಉತ್ತೀರ್ಣ ಅಥವಾ ಅನುತ್ತೀರ್ಣ ಮಾಡಲು ಚಾಲನಾ ತರಬೇತಿ ಕೇಂದ್ರಗಳಿಗೆ ಮಾನ್ಯತೆ ನೀಡಲು ಸರ್ಕಾರ ಚಿಂತಿಸುತ್ತಿದೆ. ಅಂದರೆ, ಈ ಚಾಲನಾ ತರಬೇತಿ ಶಾಲೆಗಳಲ್ಲಿ ಚಾಲನೆ ಕಲಿಯುವವರು, ಯಾವುದೇ ಪರೀಕ್ಷೆಯಿಲ್ಲದೆ ಡ್ರೈವಿಂಗ್ ಲೈಸನ್ಸ್ ನೀಡಲಾಗುವುದು.
ಪ್ರಸ್ತುತ, ಸಾರಿಗೆ ಸಚಿವಾಲಯವು ಸಾಮಾನ್ಯ ಜನರ ಸಲಹೆಗಳನ್ನು ಕೋರಿ ಅಧಿಸೂಚನೆ ಹೊರಡಿಸಿದೆ. ನೀವು ಸಹ ನಿಮ್ಮ ಸಲಹೆಯನ್ನು ನೀಡಲು ಬಯಸುತ್ತಿದ್ದರೆ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ವೆಬ್‌ಸೈಟ್ https://morth.nic.in/en ಗೆ ಭೇಟಿ ನೀಡಿ ನಿಮ್ಮ ಸಲಹೆಯನ್ನು ನೀಡಬಹುದು
ಒಂದು ವೇಳೆ ಡ್ರೈವಿಂಗ್ ಟೆಸ್ಟ್ ತೆಗೆದುಹಾಕಲು ಸಾರ್ವಜನಿಕರಿಂದ ಒಮ್ಮತದಿಂದ ಸಲಹೆಗಳು ಬಂದರೆ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೊಸ ನಿಯಮವನ್ನು ರೂಪಿಸಲಿದೆ. ಇದರ ಅಡಿಯಲ್ಲಿ, ಚಾಲನಾ ಕೋಚಿಂಗ್ ಕೇಂದ್ರಗಳು ಪರೀಕ್ಷೆಯಲ್ಲಿ ಯಾವುದೇ ವ್ಯಕ್ತಿಯನ್ನು ಉತ್ತೀರ್ಣ ಹಾಗೂ ಅನುತ್ತೀರ್ಣಗೊಳಿಸಬಹುದು. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಡ್ರೈವಿಂಗ್ ಶಾಲೆಗಳಿಗೆ ಮಾತ್ರ ಅನುಮತಿ ನೀಡಲಾಗುವುದು.