Good News: ಗ್ರಾಜುಯೇಷನ್ ಪೂರ್ಣಗೊಳಿಸುತ್ತಲೇ ವಿದ್ಯಾರ್ಥಿನಿಯರಿಗೆ ಸಿಗಲಿದೆ 50-50 ಸಾವಿರ ರೂ... ಹೇಗೆ ಲಾಭ ಪಡೆಯಬೇಕು?
ಇದಕ್ಕಾಗೀ ಬಿಹಾರ ರಾಜ್ಯ ಸರ್ಕಾರ ರಾಜ್ಯದಲ್ಲಿ ಬಾಲಿಕಾ ಸ್ನಾತಕ ಪ್ರೋತ್ಸಾಹನ್ ಯೋಜನಾ ಹೆಸರಿನ ಅಡಿ ಯೋಜನೆ ಆರಂಭಿಸಿದೆ. ಈ ಯೋಜನೆಯ ಅಡಿ ಗ್ರಾಜುಯೇಷನ್ ಪಾಸ್ ಮಾಡಿದ ವಿದ್ಯಾರ್ಥಿನಿಯರಿಗೆ ರಾಜ್ಯ ಸರ್ಕಾರ 25-25 ಸಾವಿರ ಧನರಾಶಿ ಸಿಗುತ್ತಿತ್ತು. ಇತ್ತೀಚೆಗಷ್ಟೇ ಮುಗಿದ ಬಿಹಾರ್ ಲೋಕಸಭೆ ಚುನಾವಣೆಯ ವೇಳೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಲವು ದೊಡ್ಡ ಯೋಜನೆಗಳ ಘೋಷಣೆ ಮಾಡಿದ್ದರು. ಅವುಗಳಲ್ಲಿ ಈ ಯೋಜನೆ ಪ್ರೋತ್ಸಾಹ ಧನವನ್ನು ರೂ.50-50 ಸಾವಿರಕ್ಕೆ ಹೆಚ್ಚಿಸುವ ಘೋಷಣೆ ಕೂಡ ಒಂದಾಗಿತ್ತು. ಅವರ ಈ ಚುನಾವಣಾ ಘೋಷಣೆಯ ಬಳಿಕ ಈ ಯೋಜನೆಯ ಮೇಲೆ ಕೆಲಸ ಆರಂಭವಾಗಿದೆ. ಹೀಗಾಗಿ ರಾಜ್ಯದಲ್ಲಿ ಗ್ರಾಜುಯೇಷನ್ ಪೂರ್ಣಗೊಳಿಸದ ವಿದ್ಯಾರ್ಥಿನಿಯರಿಗೆ ಶೀಘ್ರದಲ್ಲಿಯೇ 50-50 ಸಾವಿರ ಪ್ರೋತ್ಸಾಹ ಚಣ ಸಿಗುವ ನಿರೀಕ್ಷೆ ಇದೆ.
ಬಾಲಕಿಯ ಬ್ಯಾಂಕ್ ಖಾತೆಗೆ ಹಣವನ್ನು ಕಳುಹಿಸುವ ಪ್ರಸ್ತಾಪವನ್ನು ಬಿಹಾರದ ಶಿಕ್ಷಣ ಇಲಾಖೆ ಸಿದ್ಧಪಡಿಸಿದೆ, ಇದೀಗ ಅದನ್ನು ಹಣಕಾಸು ಇಲಾಖೆಗೆ ಅನುಮೋದನೆಗಾಗಿ ಕಳುಹಿಸಲಾಗುವುದು. ಇದರ ನಂತರ ಅದನ್ನು ಸಂಪುಟಕ್ಕೆ ಅನುಮೋದನೆಗಾಗಿ ತರಲಾಗುವುದು. ಇದು ಸರ್ಕಾರದ ಪ್ರಸ್ತಾವನೆಯಾಗಿರುವುದರಿಂದ ಶೀಘ್ರದಲ್ಲೇ ಇದು ಸಂಪುಟದಲ್ಲಿ ಅನುಮೋದನೆ ಪಡೆಯಲಿದೆ. 1.5 ಲಕ್ಷ ಬಾಲಕಿಯರು ಈ ಯೋಜನೆಯಿಂದ ನೇರವಾಗಿ ಪ್ರಯೋಜನ ಪಡೆಯಲಿದ್ದಾರೆ. ಕಳೆದ ವರ್ಷ ಮುಖ್ಯಮಂತ್ರಿ ಪದವೀಧರ ಬಾಲಕಿಯರ ಪ್ರೋತ್ಸಾಹಕ ಯೋಜನೆಯಡಿ ರಾಜ್ಯ ಸರ್ಕಾರ 1.4 ಲಕ್ಷ ಅರ್ಜಿಗಳನ್ನು ಸ್ವೀಕರಿಸಿದೆ. ಆದರೆ ಕೇವಲ 84, 344 ಬಾಲಕಿಯರಿಗೆ ಮಾತ್ರ ಸಹಾಯಧನ ನೀಡಲಾಗಿತ್ತು. ಉಳಿದ ಹುಡುಗಿಯರು ಅರ್ಜಿಯಲ್ಲಿನ ಕೆಲವು ನ್ಯೂನತೆಗಳಿಂದಾಗಿ ಹಣವನ್ನು ಪಡೆಯಲು ಸಾಧ್ಯವಾಗಲಿಲ್ಲ, ಆದರೆ ಈಗ ಅವರ ನ್ಯೂನತೆಗಳನ್ನು ತೆಗೆದುಹಾಕಿದ ನಂತರ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.
ರಾಜ್ಯ ಸರ್ಕಾರವು ನಿಗದಿಪಡಿಸಿದ ನಿಬಂಧನೆಗಳ ಪ್ರಕಾರ, ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಓದುವ ಹಾಗೂ ಸರ್ಕಾರದಿಂದ ಮಾನ್ಯತೆ ಪಡೆದ ಕಾಲೇಜುಗಳಿಂದ ಪದವಿ ಪಡೆದ ವಿದ್ಯಾರ್ಥಿನಿಯರಿಗೆ ಮಾತ್ರ ಈ ಸೌಲಭ್ಯಗಳನ್ನು ನೀಡಲಾಗುವುದು. ಸರ್ಕಾರದ ಪರವಾಗಿ 2019-20ರ ಹಣಕಾಸು ವರ್ಷಕ್ಕೆ ಈ ಯೋಜನೆಯಡಿ 200 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿತ್ತು ಎಂಬುದು ಇಲ್ಲಿ ಉಲ್ಲೇಖನೀಯ. ಇದನ್ನು 2020-21ನೇ ಸಾಲಿಗೆ 300 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.
ಈ ಯೋಜನೆಯಡಿ, ಹಣವು ನೇರವಾಗಿ ಹುಡುಗಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಹೀಗಾಗಿ ಪ್ರತಿಯೋಬ್ಬ ವಿದ್ಯಾರ್ಥಿನಿ ಬ್ಯಾಂಕ್ ಖಾತೆ ಹೊಂದಿರುವುದು ಆವಶ್ಯಕವಾಗಿದೆ. ಈ ಯೋಜನೆಯ ಲಾಭ ಪಡೆಯಲು, ವಿದ್ಯಾರ್ಥಿನಿಯರು ಮೊದಲು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಇದಕ್ಕಾಗಿ ಸರ್ಕಾರದ ಇ ಕಲ್ಯಾಣ್ ಅಧಿಕೃತ ವೆಬ್‌ಸೈಟ್ http://edudbt.bih.nic.in/ ಗೆ ಭೇಟಿ ನೀಡಬೇಕು. ಇಲ್ಲಿ ಮೊದಲು For student registration and login only ಲಿಂಕ್ ಮೇಲೆ ಕ್ಲಿಕ್ ಮಾಡಿ . ಆಗ ವಿದ್ಯಾರ್ಥಿನಿಯರ ಮುಂದೆ ಇ-ಕಲ್ಯಾಣ್ ಆನ್ಲೈನ್ ರಿಜಿಸ್ಟ್ರೆಶೇನ್ ಫಾರ್ಮ್ ತೆರೆದುಕೊಳ್ಳಲಿದೆ.
ಈ ಅರ್ಜಿ ತುಂಬುವ ವೇಳೆ ಕೆಲ ಅತ್ಯಾವಶ್ಯಕ ದಾಖಲೆಗಳು ನಿಮ್ಮ ಬಳಿ ಇರಬೇಕು. ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬೂಕ್, ಪಾಸ್ಪೋರ್ಟ್ ಆಕಾರದ ಫೋಟೋ, ಅಡ್ರೆಸ್ಸ್ ಪ್ರೂಫ್, ಗ್ರಾಜುಯೇಷನ್ ಅಂಕಪಟ್ಟಿಯ ಝೆರಾಕ್ಸ್ ಕಾಪಿ ನಿಮ್ಮ ಬಳಿ ಇರಬೇಕು.