KYC Update: ಮಾರ್ಚ್ 31 ರೊಳಗೆ ಈ ಕೆಲಸ ಮುಗಿಸಿ ಇಲ್ಲದಿದ್ರೆ ಬಂದ್ ಆಗಲಿದೆ ನಿಮ್ಮ ಬ್ಯಾಂಕ್ ಖಾತೆ
ಗ್ರಾಹಕರು ತಮ್ಮ ಹೋಮ್ ಬ್ರಾಂಚ್ ಗೆ ಭೇಟಿ ನೀಡಿ ಅಥವಾ ನಿಮ್ಮ ಮನೆ ಹತ್ತಿರದ ಯಾವುದೇ ಒಂದು IDBI ಬ್ರಾಂಚ್ ಗೆ ಭೇಟಿ ನೀಡಿ ಗ್ರಾಹಕರು ತಮ್ಮ KYC ಮಾಹಿತಿ ಸಲ್ಲಿಸಬೇಕು ಎಂದು ಬ್ಯಾಂಕ್ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಇದನ್ನು ಹೊರತುಪಡಿಸಿ KVY ಸಲ್ಲಿಸಲು ಬೇರೆ ಯಾವುದೇ ಸೌಕರ್ಯ ಒದಗಿಸಲಾಗುವುದಿಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.
KYC ಪೂರ್ಣಗೊಳಿಸಲು ಗ್ರಾಹಕರು ಪ್ಯಾನ್ ಕಾರ್ಡ್ ಅಥವಾ ಫಾರ್ಮ್ 60 ಸಲ್ಲಿಸಬೇಕು. ಇದಲ್ಲದೆ ಗುರುತು ಹಾಗೂ ವಿಳಾಸಕ್ಕಾಗಿ ಪಾಸ್ ಪೋರ್ಟ್/ ವೋಟರ್ ಐಡಿ/ ಡ್ರೈವಿಂಗ್ ಲೈಸನ್ಸ್/ ಮನರೆಗಾ ಜಾಬ್ ಕಾರ್ಡ್/ ಆಧಾರ್ ಕಾರ್ ಗಳಲ್ಲಿ ಯಾವುದಾದರೊಂದನ್ನು ಸಲ್ಲಿಸಬೇಕು. ಇದಲ್ಲದೆ ಗ್ರಾಹಕರು ಒಂದು ಪಾಸ್ಪೋರ್ಟ್ ಸೈಜ್ ಛಾಯಾಚಿತ್ರ ಕೂಡ ಸಲ್ಲಿಸಬೇಕು.
ಒಂದು ವೇಳೆ KYCಗೆ ಸಂಬಂಧಿಸಿದಂತೆ ನಿಮ್ಮ ಮನಸ್ಸಿನಲ್ಲಿ ಯಾವುದೇ ಶಂಕೆಗಳಿದ್ದರೆ ನೀವು IDBI ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ www.idbi.in ಗೆ ಭೇಟಿ ನೀಡಿ. ಇದಲ್ಲದೆ ನೀವು ಬ್ಯಾಂಕ್ ಗ್ರಾಹಕ ಪ್ರತಿನಿಧಿ ಸೇವೆ ಸಂಖ್ಯೆಗಲಾಗಿರುವ 1800-209-4324, 1800-22-1070 ಅಥವಾ 022-67719100ಗೂ ಸಹ ಕರೆ ಮಾಡಿ ಹೆಚ್ಚಿನ ವಿವರ ಪಡೆಯಬಹುದು.
ಇದಕ್ಕೆ ಸಂಬಂಧಿಸಿದಂತೆ MMS, ಇ-ಮೇಲ್ ಹಾಗೂ ಲೆಟರ್ ಜಾರಿಗೊಳಿಸಿ ಬ್ಯಾಂಕ್ ತನ್ನ ಗ್ರಾಹಕರಿಗೆ KYC ಅಪ್ಡೇಟ್ ಮಾಡಲು ಸೂಚನೆ ನೀಡಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಎಲ್ಲಾ ಬ್ಯಾಂಕ್ ಗಳಿಗೆ ತಮ್ಮ ಗ್ರಾಹಕರಿಂದ KYC ಪಡೆಯುವುದು ಕಡ್ಡಾಯಗೊಳಿಸಿದೆ. ಯಾವುದೇ ರೀತಿಯ ಬ್ಯಾಂಕ್ ಖಾತೆ ತೆರೆಯಲು ಇದು ಅನಿವಾರ್ಯ. KYC ಮೂಲಕ ಬ್ಯಾಂಕ್ ಗಳು ತಮ್ಮ ಗ್ರಾಹಕರ ಸಂಪೂರ್ಣ ಮಾಹಿತಿ ಕಲೆಹಾಕುತ್ತವೆ. ಇದಕ್ಕಾಗಿ ಗ್ರಾಹಕರು ತಮ್ಮ ಗುರುತು ಚೀಟಿ ಹಾಗೂ ಅಡ್ರೆಸ್ಸ್ ಪ್ರೂಫ್ ಸಲ್ಲಿಸಬೇಕು.