Ind Vs Eng: Chennai Test ನಲ್ಲಿ Harbhajan Singh ದಾಖಲೆ ಮುರಿದ Ravichandran Ashwin
ರವಿಚಂದ್ರನ್ ಅಶ್ವಿನ್ (Ravichandran Ashwin) ತಮ್ಮ ತವರು ಮೈದಾನದಲ್ಲಿ ಆಡಿದ 45 ಟೆಸ್ಟ್ ಪಂದ್ಯಗಳಲ್ಲಿ 23 ಬಾರಿ ಇನ್ನಿಂಗ್ಸ್ ವೊಂದರಲ್ಲಿ 5 ವಿಕೆಟ್ ಕಬಳಿಸುವಲ್ಲಿ ವರ್ಚಸ್ಸನ್ನು ಹೊಂದಿದ್ದಾರೆ. 89 ಹೋಮ್ ಟೆಸ್ಟ್ ಪಂದ್ಯಗಳಲ್ಲಿ 22 ಬಾರಿ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಪಡೆದ ಜೇಮ್ಸ್ ಆಂಡರ್ಸನ್ ಅವರ ದಾಖಲೆಯನ್ನು ಅವರು ಮುರಿದಿದ್ದಾರೆ. ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವವರು ಮುತ್ತಯ್ಯ ಮುರಳೀಧರನ್ (45), ನಂತರದ ಸ್ಥಾನದಲ್ಲಿ ರಂಗನಾ ಹೆರಾತ್ (26), ಅನಿಲ್ ಕುಂಬ್ಳೆ (25) ಇದ್ದಾರೆ.
ರವಿಚಂದ್ರನ್ ಅಶ್ವಿನ್ (Ravichandran Ashwin) ಟೆಸ್ಟ್ ಕ್ರಿಕೆಟ್‌ನಲ್ಲಿ 200 ನೇ ಬಾರಿಗೆ ಎಡಗೈ ಬ್ಯಾಟ್ಸ್‌ಮನ್ ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ . ಎಡಗೈ ಬ್ಯಾಟ್ಸ್‌ಮನ್‌ಗಳಲ್ಲಿ ಡೇವಿಡ್ ವಾರ್ನರ್ (10) ಹೆಚ್ಚು ಅವರ ಬೌಲಿಂಗ್ ಗೆ ಬಲಿಯಾಗಿದ್ದಾರೆ. ಇದರ ನಂತರ ಅಲಿಸ್ಟರ್ ಕುಕ್ (9), ಬೆನ್ ಸ್ಟೋಕ್ಸ್ (9), ಎಡ್ ಕೋವನ್ (7) ಮತ್ತು ಜೇಮ್ಸ್ ಆಂಡರ್ಸನ್ (7) ಇದ್ದಾರೆ. (ಫೋಟೋ- BCCI)
ರವಿಚಂದ್ರನ್ ಅಶ್ವಿನ್ (Ravichandran Ashwin) ತಮ್ಮ ತವರು ಮೈದಾನದಲ್ಲಿ ಆಡಿದ 45 ಟೆಸ್ಟ್ ಪಂದ್ಯಗಳಲ್ಲಿ 23 ಬಾರಿ ಇನ್ನಿಂಗ್ಸ್ ವೊಂದರಲ್ಲಿ 5 ವಿಕೆಟ್ ಕಬಳಿಸುವಲ್ಲಿ ವರ್ಚಸ್ಸನ್ನು ಹೊಂದಿದ್ದಾರೆ. 89 ಹೋಮ್ ಟೆಸ್ಟ್ ಪಂದ್ಯಗಳಲ್ಲಿ 22 ಬಾರಿ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಪಡೆದ ಜೇಮ್ಸ್ ಆಂಡರ್ಸನ್ ಅವರ ದಾಖಲೆಯನ್ನು ಅವರು ಮುರಿದಿದ್ದಾರೆ. ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವವರು ಮುತ್ತಯ್ಯ ಮುರಳೀಧರನ್ (45), ನಂತರದ ಸ್ಥಾನದಲ್ಲಿ ರಂಗನಾ ಹೆರಾತ್ (26), ಅನಿಲ್ ಕುಂಬ್ಳೆ (25) ಇದ್ದಾರೆ.
ರವಿಚಂದ್ರನ್ ಅಶ್ವಿನ್ (Ravichandran Ashwin) ಭಾರತದ ನೆಲದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಭಾರತದಲ್ಲಿ ತಮ್ಮ 266 ವಿಕೆಟ್‌ಗಳನ್ನು ಪೂರ್ಣಗೊಳಿಸಿದ ಅವರು ಹರ್ಭಜನ್ ಸಿಂಗ್ (265) ಅವರ ದಾಖಲೆಯನ್ನು ಮುರಿದಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಅನಿಲ್ ಕುಂಬ್ಳೆ (Anil Kumble) 24.88 ರ ಸರಾಸರಿಯಲ್ಲಿ 350 ವಿಕೆಟ್ ಪಡೆದಿದ್ದಾರೆ.