Job News: ಮಹಿಳೆಯರಿಗಾಗಿ ನೌಕರಿಯ ಜಬರ್ದಸ್ತ್ ಆಫರ್, ನೌಕರಿ ಜಾಯಿನಿಂಗ್ ದಿನವೇ ಸಿಗಲಿದೆ ರೂ.50, 000
1. ರೂ.50,000 ಜಾಯಿನಿಂಗ್ ಬೋನಸ್ - ಎಕ್ಸ್ ಪೀರಿಯನ್ಸ್ ಸೊಲ್ಯೂಷನ್ಸ್ ಸರ್ವಿಸ್ ಪ್ರೊವೈಡರ್ ಕಂಪನಿಯಾಗಿರುವ ಸರ್ವೇ ಸ್ಪ್ಯಾರೋ, ಮಹಿಳೆಯರನ್ನು ಕಂಪನಿಯೊಂದಿಗೆ ಜೋಡಿಸಲು ಈ ಘೋಷಣೆ ಮಾಡಿದೆ. ಹೀಗಾಗಿ ಮಹಿಳೆಯರ ನಿಯುಕ್ತಿಗೆ ಇದೊಂದು ಉತ್ತಮ ಉದಾಹರಣೆಯಾಗಿ ಹೊರಹೊಮ್ಮಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕಂಪನಿ, ತಮ್ಮ ಕಂಪನಿಯನ್ನು ಸೇರಲು ಬಯಸುವ ಮಹಿಳಾ ಅಭ್ಯರ್ಥಿಗಳಿಗೆ ರೂ.50,000 ಜಾಯಿನಿಂಗ್ ಬೋನಸ್ ನೀಡಲಾಗುವುದು ಎಂದು ಹೇಳಿದೆ.
2. ಮಾರ್ಚ್ 15 ಅರ್ಜಿ ಸಲ್ಲಿಸಲು ಕೊನೆಯ ದಿನ - ಈ ಆಫರ್ ಅಡಿಯಲ್ಲಿ ಪ್ರಾಡಕ್ಟ್ ಡೆವಲಪರ್, ಕ್ವಾಲಿಟಿ ಎನಾಲಿಸ್ಟ್ ಹಾಗೂ ಟೆಕ್ನಿಕಲ್ ರೈಟರ್ ಗಳನ್ನು ನೇಮಕ ಮಾಡಲಾಗುತ್ತಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಮಹಿಳಾ ಅಭ್ಯರ್ಥಿಗಳು ಮಾರ್ಚ್ 15ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಹ ಮಹಿಳಾ ಅಭ್ಯರ್ಥಿಗಳಿಗೆ ಈ ರೂ.50,000 ಜಾಯಿನಿಂಗ್ ಬೋನಸ್ ನೀಡಲಾಗುವುದು ಎಂದು ಕಂಪನಿ ಹೇಳಿದೆ.
3. ಲಾಕ್ಡೌನ್ ಬಳಿಕ ಕೇವಲ ಶೇ.16 ರಷ್ಟು ಮಹಿಳೆಯರು ಕೆಲಸಕ್ಕೆ ಮರಳಿದ್ದಾರೆ - ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ (Center for Science and Environment) ಅಧ್ಯಯನವನ್ನು ಆಧಾರವಾಗಿಟ್ಟುಕೊಂಡು ಹೇಳಿಕೆ ನೀಡಿರುವ ಕಂಪನಿ ಲಾಕ್ಡೌನ್ ಸಡಿಲಗೊಂಡ ಬಳಿಕ ಕೇವಲ ಶೇ.16 ರಷ್ಟು ಮಹಿಳೆಯರು ಮಾತ್ರ ಪುನಃ ತಮ್ಮ ನೌಕರಿ ಆರಂಭಿಸಿದ್ದಾರೆ. ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಕಂಪನಿಯ ಸಂಸ್ಥಾಪಕ ಶಿಹಾಬ್ ಮೊಹಮ್ಮದ್ (Shihab Mohammed) , ವರ್ಕ್ ಫೋರ್ಸ್ (workforce) ನಲ್ಲಿ ಮಹಿಳೆಯರ ಪಾಲುದಾರಿಕೆ ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ವರದಿ ಕುರಿತು ಉಲ್ಲೇಖಿಸಿದ್ದಾರೆ.
4. ಮೊಟ್ಟ ಮೊದಲ ವರ್ಚ್ಯುವಾಲ್ ಹ್ಯಾಕ್ ಥಾನ್ ಆರಂಭಿಸಲಿದೆ ಕಂಪನಿ - ಕೊವಿಡ್ 19 ಬಳಿಕ ನಿರ್ಮಾಣಗೊಂಡ ಪರಿಸ್ಥಿತಿಯಿಂದ ಮೇಲೇಳಲು ಎಲ್ಲರು ಏನಾದರೂ ಮಾಡಬೇಕು, ಜಾಯಿನಿಂಗ್ ಬೋನಸ್ ಬಳಿಕ ನಾವು ಮೊಟ್ಟ ಮೊದಲ ವರ್ಚ್ಯುವಲ್ ಹ್ಯಾಕ್ ಥಾನ್ (first virtual hackathon hacker) ಹ್ಯಾಕರ್ ಫ್ಲೋ ಆರಂಭಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ. ಇದರ ಅಡಿ ಡೆವಲಪರ್ಸ್, ವಿದ್ಯಾರ್ಥಿಗಳು ಹಾಗೂ ಕೋಡಿಂಗ್ ನಲ್ಲಿ ಅಭಿರುಚಿ ಹೊಂದಿದವರನ್ನು ಒಂದೇ ವೇದಿಕೆಗೆ ತರಲಾಗುವುದು ಎಂದು ಅವರು ಹೇಳಿದ್ದಾರೆ.