Diwali 2020 ಶುಭ ದಿನದಂದು ಹೊಸ ಬೈಕ್ ಖರೀದಿಸಬೇಕೆ, 55,000 ಕ್ಕೂ ಕಮ್ಮಿ ಬೆಲೆಗೆ ಈ ಆಪ್ಶನ್ ಟ್ರೈ ಮಾಡಿ

Sun, 08 Nov 2020-3:25 pm,

ಬಜಾಜ್ CT100 ES ALLOY ಹಾಗೂ  KS ALLOY ಎಂಬ ಎರಡು ವಿಧಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ES ALLOY ನ ಎಕ್ಸ್ ಶೋರ್ ರೂಂ ಬೆಲೆ ರೂ.44,890 ಆಗಿದೆ. ಇನ್ನೊಂದೆಡೆ KS ALLOY ವೇರಿಯಂಟ್ ನ ಮಾರುಕಟ್ಟೆ ಬೆಲೆ ರೂ.51,802 ಆಗಿದೆ. CT100 ನಲ್ಲಿ BS6, 102 CC, 4 ಸ್ಟ್ರೋಕ್, ಸಿಂಗಲ್ ಸಿಲಿಂಡರ್ ಇಂಜಿನ್ ಇದೆ. ಇವು 7.9HP ಪಾವರ್ ಹಾಗೂ 8.34Nm ನ ಟಾರ್ಕ್ ಜನರೆತ್ ಮಾಡುತ್ತವೆ. ಇದರ ಜೊತೆಗೆ 4 ಸ್ಪೀಡ್ ಗಳ ಗಿಯರ್ ಬಾಕ್ಸ್ ಇದೆ. ಈ ಬೈಕ್ ನ ಟಾಪ್ ಸ್ಪೀಡ್ 90 KMPH ಆಗಿದೆ.

ಬಜಾಜ್ CT110 ಈ ಬೈಕ್ ನ ES ALLOY ವೇರಿಯಂಟ್ ನ ದೆಹಲಿ ಎಕ್ಸ್ ಷೋರೂಂ ಬೆಲೆ ರೂ.52,890 ರಷ್ಟಿದೆ. CT110 ನಲ್ಲಿ BS6, 115.45 CC, 4 ಸ್ಟ್ರೋಕ್ , ಸಿಂಗಲ್ ಸಿಲಿಂಡರ್ ಇಂಜಿನ್ ಇದೆ. ಇವು 8.6 HP ಪಾವರ್ ಹಾಗೂ 9.8 Nm ಟಾರ್ಕ್ ಜನರೆತ್ ಮಾಡುತ್ತವೆ. ಜೊತೆಗೆ 4 ಸ್ಪೀಡ್ ಗಿಯರ್ ಬಾಕ್ಸ್ ಕೂಡ ಇದೆ.

ಹೀರೋ HF Deluxe ನ ದೆಹಲಿ ಎಕ್ಸ್ ಷೋರೂಂ ಬೆಲೆ ರೂ.48,950  ರಿಂದ ರೂ.59,800 ರಷ್ಟಿದೆ. ಹೀರೋ HF Deluxe ನಲ್ಲಿ BS6, 97.2CC, ಏರ್ ಕೋಲ್ಡ್, 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಇಂಜಿನ್ ಇದೆ. ಇವು 7.94 HP ಪಾವರ್ ಹಾಗೂ 8.05Nmನ ಪೀಟ್ ಟಾರ್ಕ್ ಜನರೆತ್ ಮಾಡುತ್ತವೆ. ಜೊತೆಗೆ ಇದರಲ್ಲಿ 4 ಸ್ಪೀಡ್ ಗಿಯರ್ ಬಾಕ್ಸ್ ನೀಡಲಾಗಿದೆ.

ಈ ಬೈಕ್ ನಲ್ಲಿ BS6, 110 CC, ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, ಏರ್ ಕೋಲ್ಡ್ ಸ್ಪಾರ್ಕ್ ಇಗ್ನಿಷನ್ ಫ್ಯುಯೆಲ್ ಇಂಜೆಕ್ಟೆಡ್ ಇಂಜಿನ್ ಇದೆ. ಈ ಇಂಜಿನ್ 8.1 HP ಪಾವರ್ ಹಾಗೂ 8.7 Nm ಟಾರ್ಕ್ ಜನರೆತ್ ಮಾಡುತ್ತದೆ. ಜೊತೆಗೆ 4 ಸ್ಪೀಡ್ ಗಿಯರ್ ಬಾಕ್ಸ್ ನೀಡಲಾಗಿದೆ. TVS ಸ್ಪೋರ್ಟ್ಸ್ ನ ಕಿಕ್ ಸ್ಟಾರ್ ವೇರಿಯಂಟ್ ನ ದೆಹಲಿ ಎಕ್ಸ್ ಷೋರೂಂ ಬೆಲೆ ರೂ.54,850ರಷ್ಟಿದೆ ಹಾಗೂ ಸೆಲ್ಫ್ ಸ್ಟಾರ್ಟ್ ವೇರಿಯಂಟ್ ನ ಬೆಲೆ ರೂ.51,525 ರಷ್ಟಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link