NASA: ಮಂಗಳನ ಅಂಗಳದಲ್ಲಿ ಭಾರಿ ಪ್ರವಾಹ ಬಂದಿತ್ತಂತೆ, ಈ ಹಿಂದೆ ನೀವೆಂದು ನೋಡಿರಲಿಕ್ಕಿಲ್ಲ ಈ pics
ರೋವರ್ ಅನ್ನು ನಾಸಾ 2011 ರ ನವೆಂಬರ್‌ನಲ್ಲಿ ಉಡಾವಣೆ ಮಾಡಿತ್ತು ಮತ್ತು ಸಂಶೋಧನೆಯ ವೇಳೆ ಉಲ್ಕಾಶಿಲೆ ಪ್ರಭಾವದಿಂದ ಮಂಗಳನ ಮಂಜು ಕರಗಿ ಅಲ್ಲಿ ಭೀಕರ ಪ್ರವಾಹ ಉಂಟಾಗಿದೆ ಎಂದು ತಿಳಿದುಬಂದಿದೆ.
ಜಾಕ್ಸನ್ ಸ್ಟೇಟ್ ಯೂನಿವರ್ಸಿಟಿ, ಕಾರ್ನೆಲ್ ವಿಶ್ವವಿದ್ಯಾಲಯ ಮತ್ತು ಹವಾಯಿ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದ ಅಂಶಗಳು ಇದೀಗ ಬೆಳಕಿಗೆ ಬಂದಿವೆ. ಅವುಗಳ ಪ್ರಕಾರ, ಪ್ರಾಚೀನ ಉಲ್ಕಾ ಶಿಲೆಯ ಅಧ್ಯಯನದ ವೇಳೆ ಸುಮಾರು 4 ಶತಕೋಟಿ ವರ್ಷಗಳ ಹಿಂದೆ ಮಂಗಳ ಗ್ರಹದಲ್ಲಿ ನೀರು ನಿರ್ಮಾಣಗೊಂಡಿತ್ತು ಎಂಬುದು ತಿಳಿದುಬಂದಿದೆ.
ಕ್ಯೂರಿಯಾಸಿಟಿ ರೋವರ್ ನಿಂದ ಸಿಕ್ಕ ದತ್ತಾಂಶಗಳನ್ನು ಪರಿಶೀಲಿಸಿದ ವಿಜ್ಞಾನಿಗಳು ಗ್ರಹದ ಗೆಲ್ ಕ್ರೆಟರ್ ಕುಲಿಯಲ್ಲಿ ಈ ಭೀಕರ ಪ್ರವಾಹದ ನೀರಿನ ಆಳ 78 ಅಡಿಗಲಿಷ್ಟು. ಆದರೆ, ಅಲೆಗಳು ಮೇಲೆದ್ದ ಬಳಿಕ ಇದು ತುಂಬಾ ಭೀಕರ ರೂಪ ತಳೆದಿತ್ತು ಪ್ರತಿ ಸೆಕೆಂಡ್ ಗೆ 32 ಅಡಿ ಎತ್ತರದ ಅಲೆಗಳು ಮೇಲೆಳುತ್ತಿದ್ದವು.
400 ಕೋಟಿ ವರ್ಷಗಳ ಹಿಂದೆ ಮಂಗಳ ಗ್ರಹದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಮಂಜು ಇತ್ತು ಮತ್ತು ಮಂಜುಗಡ್ಡೆಗೆ ಭಾರಿ ಗಾತ್ರದ ಉಲ್ಕಾಶಿಲೆ ಬಂದು ಅಪ್ಪಳಿಸಿರಬಹುದು. ಈ ಡಿಕ್ಕಿಯಿಂದ ಉಂಟಾದ ಊರ್ಜೆ ಹಾಗೂ ತಾಪಮಾನದಿಂದ ಮಂಜು ಕರಗಿ ಈ ಭೀಕರ ಪ್ರವಾಹ ಸೃಷ್ಟಿಸಿರಬಹುದು ಎಂದು ಅಂದಾಜಿಸಲಾಗಿದೆ.
ಸಂಶೋಧನೆಯ ಸಹ ಲೇಖಕ ಕಾರ್ನೆಲ್ ವಿಶ್ವವಿದ್ಯಾಲಯದ ಆಲ್ಬರ್ಟೊ ಜಿ. ಫಿಯರ್ನ್, 'ಕ್ಯೂರಿಯಾಸಿಟಿ ರೋವರ್‌ನ ಡೇಟಾವನ್ನು ಬಳಸಿಕೊಂಡು ನಾವು ಮಂಗಳ ಗ್ರಹದಲ್ಲಿ ಪ್ರವಾಹವನ್ನು ಗುರುತಿಸಿದ್ದೇವೆ. ಮಾಹಿತಿಯ ಪ್ರಕಾರ, ಮಂಗಳ ಗ್ರಹದಲ್ಲಿ ಗಾಳಿ ಮತ್ತು ನೀರಿನೊಂದಿಗೆ ಬೆರೆತ ಈ ಭೌಗೋಳಿಕ ಲಕ್ಷಣಗಳು ಸುಮಾರು ನಾಲ್ಕು ಶತಕೋಟಿ ವರ್ಷಗಳಿಂದ ಸಂಗ್ರಹವಾಗಿವೆ ಎಂದಿದ್ದಾರೆ.