WhatsApp ನಲ್ಲಿ ಆನ್ಲೈನ್ ಕಾಣಿಸಿ ಕಾಣಿಸಿಕೊಳ್ಳದೆ ಚಾಟ್ ಮಾಡುವುದು ಹೇಗೆ? ಇಲ್ಲಿದೆ ಟ್ರಿಕ್

Fri, 27 Nov 2020-11:41 am,

ಹಲವು ಬಾರಿ ಸಂಬಂಧಿಕರು ಹಾಗೂ ಸ್ನೇಹಿತರು ನೀವು ಆನ್ಲೈನ್ ಕಾಣಿಸಿಕೊಳ್ಳುತ್ತಿದ್ದಂತೆ ನಿಮಗೆ ಸಂದೇಶವನ್ನು ರವಾನಿಸಲು ಆರಂಭಿಸುತ್ತಾರೆ. ಆದರೆ, ಆ ವೇಳೆ ನೀವು ವಾಟ್ಸ್ ಆಪ್ ನಲ್ಲಿ ನಿಮ್ಮ ವಿಶೇಷ ವ್ಯಕ್ತಿ ಅಥವಾ ಸ್ನೇಹಿತರೊಂದಿಗೆ ಚಾಟ್ ಮಾಡುತ್ತಿರಬಹುದು. ಇನ್ತನ ಸಂದರ್ಭದಲ್ಲಿ ಬೇರೆಯವರ ಸಂದೇಶಗಳು ಕಿರಿಕಿರಿಯನ್ನುಂಟು ಮಾಡುತ್ತವೆ. ಇಂತಹ ಸಂದರ್ಭಗಳಲ್ಲಿ ನೀವು ಆನ್ಲೈನ್ ಇದ್ದರು ಕೂಡ ಆಫ್ ಲೈನ್ ತೋರಿಸುವ ಸೆಟ್ಟಿಂಗ್ ಅಗತ್ಯತೆ ನಿಮಗೆ ಬೇಕಾಗುತ್ತದೆ.

ವಾಟ್ಸಾಪ್ ನಮ್ಮ ಜೀವನವನ್ನು ಸುಲಭಗೊಳಿಸುತ್ತಿರಬಹುದು. ಆದರೆ ಈ ಅಪ್ಲಿಕೇಶನ್ ನಮ್ಮ ಜೀವನದಿಂದ ಪ್ರೈವೆಸಿಗೆ ಭಾರಿ ಧಕ್ಕೆ ತರುತ್ತಿದೆ. ಉದಾಹರಣೆಗೆ, ಇತ್ತೀಚಿನ ದಿನಗಳಲ್ಲಿ ಮಾರ್ಕೆಟಿಂಗ್ ಮತ್ತು ಮಾರಾಟದ ಜನರು ಸಹ ವಾಟ್ಸಾಪ್ ಅನ್ನು ಸಾಕಷ್ಟು ಬಳಸುತ್ತಿದ್ದಾರೆ. ಕೆಲವು ಕ್ಷಣಗಳಲ್ಲಿ ನಿಮ್ಮ ಹತ್ತಿರವಿರುವ ಜನರೊಂದಿಗೆ ನೀವು ಮಾತನಾಡಲು ಬಯಸುತ್ತೀರಿ. ಆದರೆ, ಆನ್‌ಲೈನ್‌ನಲ್ಲಿ ನೋಡಿದಾಗ, ಅಪೇಕ್ಷಿಸದ ಜನರು ಸಹ ನಿಮ್ಮೊಂದಿಗೆ ಚಾಟ್ ಮಾಡಲು ಪ್ರಾರಂಭಿಸುತ್ತಾರೆ.

ಇತ್ತೀಚೆಗಷ್ಟೇ ಆಪ್ ಸ್ಟೋರ್ ನಲ್ಲಿ ಆಪ್ ವೊಂದು ಕಾಣಿಸಿಕೊಂಡಿದೆ. ಈ ಆಪ್ ನಿಮಗೆ ಸಹಾಯ ಮಾಡಲಿದೆ. ಈ ಆಪ್ ನ ಹೆಸರು WA bubble for chat. ಈ ಆಪ್ ಅನ್ನು ಇದುವರೆಗೆ ಒಂದು ಲಕ್ಷಕ್ಕೂ ಅಧಿಕ ಬಾರಿಗೆ ಡೌನ್ಲೋಡ್ ಮಾಡಲಾಗಿದೆ. ಆಪ್ ಸ್ಟೋರ್ ನಲ್ಲಿ ಇದರ ರೇಟಿಂಗ್ 3.9ರಷ್ಟಾಗಿದೆ.

ಮೊದಲು WA bubble for chat ಅನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿ. ಬಳಿಕ ಆ ಆಪ್ ಅನ್ನು ತೆರೆದು ನೀವು ಆ ಆಪ್ ಗೆ ಕೆಲ ಅನುಮತಿಗಳನ್ನು ನೀಡಬೇಕು. ನೀವು ಚಾಟ್ ಮಾಡಬೇಕೆಂದು ಬಯಸುವ ಜನರ ಪಟ್ಟಿಯನ್ನು ನೀವು ಆಯ್ಕೆ ಮಾಡಬೇಕು. ಒಂದೊಮ್ಮೆ ಎಲ್ಲ ಪ್ರೋಸೆಸ್ಸ್ ಪೂರ್ಣಗೊಂಡ ಬಳಿಕ. ನೀವು ಆಯ್ಕೆಮಾಡಿರುವ ವ್ಯಕ್ತಿಗಳನ್ನು ಹೊರತುಪಡಿಸಿ ಇತರರಿಗೆ ನೀವು ಆನ್ಲೈನ್ ಕಾಣಿಸಿಕೊಳ್ಳುವುದಿಲ್ಲ. ಬಳಕೆದಾರರಲ್ಲಿ ಈ ಆಪ್ ರಿಸ್ಪಾನ್ಸ್ ತುಂಬಾ ಉತ್ತಮವಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link