ಇನ್ಮುಂದೆ Facebook ನಿಂದಲೂ ಹಣಗಳಿಕೆ ಮಾಡಬಹುದು, ಈ ವಿಧಾನ ನಿಮಗೂ ಗೊತ್ತಿರಲಿ

Fri, 12 Mar 2021-6:43 pm,

1. ಗುರುವಾರ ಈ ಕುರಿತು ಘೋಷಣೆ ಮಾಡಿದ Facebook - ಇದಕ್ಕೆ ಸಂಬಂಧಿಸಿದಂತೆ ಗುರುವಾರ ಬ್ಲಾಗ್ ವೊಂದರ ಮೂಲಕ ಘೋಷಣೆ ಮಾಡಿರುವ Facebook, ಇನ್ಮುಂದೆ ಬಳಕೆದಾರರು ಈ ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಬಳಕೆ ಮಾಡಿ, ಹಣ ಗಳಿಕೆ ಕೂಡ ಮಾಡಬಹುದು ಎಂದಿದೆ. ಹೀಗಾಗಿ ಟೆಕ್ ದಿಗ್ಗಜ ಕಂಪನಿ ಇನ್ಮುಂದೆ ಬಳಕೆದಾರರಿಗೆ ಅವರ ಕಂಟೆಂಟ್ ಗೆ ಹಣ ಕೂಡ ನೀಡಲಿದೆ.

2. ಶಾರ್ಟ್ ವಿಡಿಯೋಗಳಿಗೆ ಸಿಗಲಿದೆ ಹಣ (Facebook Latest Update) - ಬಳಕೆದಾರರಿಂದ ಅಪ್ಲೋಡ್ ಮಾಡಲಾಗುವ ಶಾರ್ಟ್ ವಿಡಿಯೋಗಳ ಬದಲಿಗೆ ಅವರಿಗೆ ಹಣ ನೀಡಲಾಗುವುದು ಎಂದು ಫೇಸ್ ಬುಕ್ ಹೇಳಿದೆ.  

3. ಹೇಗೆ ಸಿಗಲಿದೆ ಈ ಹಣ? (How To Earn Money Using Facebook) - ವಾಸ್ತವದಲ್ಲಿ ಬಳಕೆದಾರರಿಂದ ಅಪ್ಲೋಡ್ ಮಾಡಲಾಗುವ ವಿಡಿಯೋಗಳಲ್ಲಿ ಜಾಹೀರಾತನ್ನು ಬಿತ್ತರಿಸುವುದಾಗಿ ಕಂಪನಿ ಹೇಳಿದೆ. ಈ ಜಾಹೀರಾತುಗಳಿಂದ ಬರುವ ಒಂದು ಭಾಗವನ್ನು ಕಂಪನಿ ತನ್ನ ಬಳಿ ಇಟ್ಟುಕೊಂಡು ಉಳಿದ ಎಲ್ಲ ಹಣವನ್ನು ವಿಡಿಯೋ ಕ್ರಿಯೇಟರ್ ಗಳಿಗೆ ಬಿಟ್ಟುಕೊಡುವುದಾಗಿ ಫೇಸ್ ಬುಕ್ ಹೇಳಿದೆ.

4. ಕನಿಷ್ಠ ಅಂದರೆ ಮೂರು ನಿಮಿಷದ್ದಾಗಿರಬೇಕು ವಿಡಿಯೋ (Facebook Latest News) - ಮಾಹಿತಿಗಳ ಪ್ರಕಾರ ಫೇಸ್ ಬುಕ್ ನಲ್ಲಿ 3 ಅಥವಾ ಅದಕ್ಕಿಂತ ಹೆಚ್ಚು ನಿಮಿಷಗಳ ವಿಡಿಯೋಗಳಿಗೆ (Monetize) ಹಣ ನೀಡಲಾಗುವುದು. ಈ ವಿಡಿಯೋಗಳಲ್ಲಿ ಕಂಪನಿ ಸುಮಾರು 30 ರಿಂದ 45 ಸೆಕೆಂಡ್ ಗಳ ಜಾಹೀರಾತುಗಳನ್ನು ಬಿತ್ತರಿಸಲಿದೆ.

5. ಶೀಘ್ರವೆ ಟೆಸ್ಟಿಂಗ್ ಆರಂಭವಾಗಲಿದೆ (Facebook For Money) - ಈ ಪ್ರೋಸೆಸ್ ನ ಟೆಸ್ಟಿಂಗ್ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ ಎಂದು ಫೇಸ್ ಬುಕ್ ಹೇಳಿಕೊಂಡಿದೆ. ಒಂದೊಮ್ಮೆ ಯಶಸ್ವಿ ಪರೀಕ್ಷೆಯ ಬಳಿಕ, ಎಲ್ಲ ಬಳಕೆದಾರರಿಗೆ ಇದನ್ನು ಜಾರಿಗೊಳಿಸಲಾಗುವುದು ಎಂದು Facebook ಹೇಳಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link