UPSCಯಲ್ಲಿ 13ನೇ ರ್ಯಾಂಕ್‌ ಪಡೆದ ಈ ಖ್ಯಾತ ಐಎಎಸ್‌ ಅಧಿಕಾರಿಗೆ ʼಅಪ್ಪʼ ಹೇಳಿದ್ದೇನು ಗೊತ್ತಾ?

Fri, 15 Jul 2022-8:55 am,

ಹರಿಯಾಣದ ಪಾಣಿಪತ್ ನಿವಾಸಿ ಐಎಎಸ್ ಸೋನಾಲ್ ಗೋಯಲ್ ಬಗ್ಗೆ ಇಂದು ನಾವು ಮಾಹಿತಿ ನೀಡಲಿದ್ದೇವೆ. ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುವಾಗ ಪ್ಲಾನ್ ಬಿ ಸಿದ್ಧವಾಗಿಟ್ಟುಕೊಳ್ಳುವಂತೆ ತಂದೆ ಹೇಳಿದ್ದರಂತೆ. ಆದರೆ ಅವರು ಆಲ್ ಇಂಡಿಯಾ ರ್ಯಾಂಕ್‌ನಲ್ಲಿರುವುದರಿಂದ ಅವರಿಗೆ ಬೇರೆ ಯೋಜನೆ ಅಗತ್ಯವಿಲ್ಲ ಎಂದು ಭಾವಿಸಿದ್ದರು. ಅವರ ವಿಶ್ವಾಸಕ್ಕೆ ತಕ್ಕಂತೆ ಸೋನಾಲ್‌ ಯಶಸ್ವಿಯಾಗಿ ಐಎಎಸ್‌ ಪರೀಕ್ಷೆ ಪೂರ್ಣಗೊಳಿಸಿದ್ದಾರೆ.

ಸೋನಾಲ್ ಗೋಯಲ್ ಹರಿಯಾಣದ ಪಾಣಿಪತ್‌ನಲ್ಲಿ ಜನಿಸಿದರು. ಆದರೆ ಶಾಲಾ ಶಿಕ್ಷಣವನ್ನು ದೆಹಲಿಯಲ್ಲಿ ಮುಗಿಸಿದ್ದಾರೆ. 12ನೇ ತರಗತಿ ಬಳಿಕ ಸೋನಾಲ್ ದೆಹಲಿ ವಿಶ್ವವಿದ್ಯಾಲಯದ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನಿಂದ ಪದವಿ ಪಡೆದರು. ಜೊತೆಗೆ ಸಿಎಸ್ ಪದವಿಯನ್ನೂ ಸಹ ಪಡೆದಿದ್ದಾರೆ. "ಈ ಹಿಂದೆ ತನಗೆ ಸಿವಿಲ್ ಸರ್ವೀಸಸ್ ಪರೀಕ್ಷೆಯ ಬಗ್ಗೆ ತಿಳಿದಿರಲಿಲ್ಲ. ಆದರೆ ನಿಯತಕಾಲಿಕೆಯಲ್ಲಿ ಪೌರಕಾರ್ಮಿಕನ ಬಗ್ಗೆ ಬರೆದ ಲೇಖನವನ್ನು ಓದಿದ ನಂತರ ಐಎಎಸ್ ಅಧಿಕಾರಿಯಾಗಲು ನಿರ್ಧರಿಸಿದೆ" ಎಂದು ಸೋನಾಲ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಸೋನಾಲ್ ಗೋಯಲ್, "ನನ್ನ ಸಿಎಸ್ ಅಧ್ಯಯನದ ಸಮಯದಲ್ಲಿ, ನಾನು ಐಎಎಸ್ ಅಧಿಕಾರಿಯಾಗುವ ನನ್ನ ನಿರ್ಧಾರದ ಬಗ್ಗೆ ನನ್ನ ಕುಟುಂಬಕ್ಕೆ ಹೇಳಿದಾಗ, ನನ್ನ ತಂದೆ ಅದಕ್ಕೆ ಒಪ್ಪಲಿಲ್ಲ. ಯುಪಿಎಸ್‌ಸಿ ಪರೀಕ್ಷೆಯು ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ ಎಂದು ನನ್ನ ತಂದೆಗೆ ತಿಳಿದಿತ್ತು. ಆದರೂ ನಾನು ಬುದ್ಧಿವಂತೆ ಎಂಬ ಬಗ್ಗೆಯೂ ಅವರಿಗೆ ತಿಳಿದಿತ್ತು. ಜೊತೆಗೆ ಷರತ್ತಿನ ಮೇಲೆ ಪರೀಕ್ಷೆಗೆಹಾಜರಾಗಲು ಸೂಚಿಸಿದರು. ಪ್ಲಾನ್ ಬಿ ಸಿದ್ಧಪಡಿಸಿ, ಬಳಿಕ ಪರೀಕ್ಷೆ ಬರೆಯುವಂತೆ ಸೂಚಿಸಿದರು" ಎಂದು ಹೇಳಿದರು.

ಸೋನಾಲ್ ಗೋಯಲ್ ಯುಪಿಎಸ್‌ಸಿ ಪರೀಕ್ಷೆಯನ್ನು ಬರೆಯಲು ನಿರ್ಧರಿಸಿದರು. ಆದರೆ ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಎಲ್‌ಎಲ್‌ಬಿ ಕೋರ್ಸ್ ಮಾಡಲು ಪ್ರಾರಂಭಿಸಿದರು. ಇದರೊಂದಿಗೆ ಸಂಸ್ಥೆಯೊಂದರಲ್ಲಿ ಕಂಪನಿ ಕಾರ್ಯದರ್ಶಿಯಾಗಿಯೂ ಕೆಲಸ ಮಾಡುತ್ತಿದ್ದರು.

ಸೋನಾಲ್ ಗೋಯಲ್ ತನ್ನ ಕೆಲಸ ಮತ್ತು ಎಲ್‌ಎಲ್‌ಬಿ ಅಧ್ಯಯನವನ್ನು ಮುಂದುವರೆಸಿದರು. ಜೊತೆಗೆ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸಿದರು. 2006 ರಲ್ಲಿ ಬರೆದ ಪರೀಕ್ಷೆಯಲ್ಲಿ ಅಂದರೆ ಮೊದಲ ಬಾರಿಗೆ ಯಶಸ್ವಿಯಾಗಲಿಲ್ಲ. ಕಠಿಣ ಪರಿಶ್ರಮದ ನಂತರ, ಅವರು 2007 ರಲ್ಲಿ ಎರಡನೇ ಬಾರಿಗೆ ಪರೀಕ್ಷೆಯನ್ನು ಬರೆದರು. ಆ ಸಂದರ್ಭದಲ್ಲಿ ದೇಶಕ್ಕೆ 13 ನೇ ರ್ಯಾಂಕ್ ಗಳಿಸುವ ಮೂಲಕ ಐಎಎಸ್‌ ಅಧಿಕಾರಿಯಾದರು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link