ಐಪಿಎಲ್‌ 2022ರಲ್ಲಿ ಲಾಂಗೆಸ್ಟ್‌ ಸಿಕ್ಸ್‌ ಬಾರಿಸಿದ ಟಾಪ್‌ 5 ಆಟಗಾರರ ಲಿಸ್ಟ್‌

Tue, 31 May 2022-4:02 pm,

ಐಪಿಎಲ್ 2022ರ ಅತಿ ಉದ್ದದ ಸಿಕ್ಸರ್ ಅನ್ನು ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್ ಲಿಯಾಮ್ ಲಿವಿಂಗ್‌ಸ್ಟೋನ್ ಹೊಡೆದಿದ್ದಾರೆ. ಲಿಯಾಮ್ ಲಿವಿಂಗ್‌ಸ್ಟೋನ್, ಮೊಹಮ್ಮದ್ ಶಮಿ ಅವರು ಎಸೆದ ಬಾಲ್‌ನಲ್ಲಿ ಸಿಕ್ಸ್‌ ಬಾರಿಸಿದ್ದು, ಲೆಂಗ್ತ್‌ 117 ಮೀಟರ್‌ ಆಗಿದೆ. 

ಮುಂಬೈ ಇಂಡಿಯನ್ಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಈ ಸೀಸನ್‌ನಲ್ಲಿ ಎರಡನೇ ಅತಿ ಉದ್ದದ ಸಿಕ್ಸರ್ ಬಾರಿಸಿದ್ದಾರೆ. ಅವರು ಟಿ ನಟರಾಜನ್ ಎಸೆದ  ಬಾಲ್‌ನಲ್ಲಿ ಸಿಕ್ಸರ್‌ ಬಾರಿಸಿದ್ದು, 114 ಮೀಟರ್‌ ದೂರ ಸಾಗಿದೆ.   

ಅತಿ ಉದ್ದದ ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ 19 ವರ್ಷದ ಡೆವಾಲ್ಡ್ ಬ್ರೆವಿಸ್ ಕೂಡ ಸೇರಿದ್ದಾರೆ. ರಾಹುಲ್ ಚಹಾರ್ ಎಸೆತದಲ್ಲಿ ಡೆವಾಲ್ಡ್ ಬ್ರೆವಿಸ್ 112 ಮೀಟರ್‌ಗಳ ಸಿಕ್ಸರ್ ಬಾರಿಸಿದ್ದಾರೆ. ರಾಹುಲ್ ಚಹಾರ್ ಅವರು ಒಂದು ಓವರ್‌ನಲ್ಲಿ 4 ಸಿಕ್ಸರ್‌ಗಳನ್ನು ಬಾರಿಸಿ ಐಪಿಎಲ್‌ ಪ್ರಿಯರ ಗಮನ ಸೆಳೆದಿದ್ದಾರೆ.

ಐಪಿಎಲ್ 2022ರ ನಾಲ್ಕನೇ ಅತಿ ಉದ್ದದ ಸಿಕ್ಸರ್ ಅನ್ನು ಸಹ ಲಿಯಾಮ್ ಲಿವಿಂಗ್ಸ್ಟೋನ್ ಹೊಡೆದಿದ್ದಾರೆ. ಅವರು ಚೆನ್ನೈ ಸೂಪರ್‌ ಕಿಂಗ್ಸ್‌ ಬೌಲರ್ ಮುಖೇಶ್ ಚೌಧರಿ ಅವರ ಎಸೆತದಲ್ಲಿ 108 ಮೀಟರ್ ಸಿಕ್ಸರ್ ಬಾರಿಸಿದ್ದರು.  

ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಕೂಡ ಈ ಋತುವಿನಲ್ಲಿ 108 ಮೀಟರ್‌ಗಳ ಸಿಕ್ಸರ್ ಬಾರಿಸಿದ್ದರು. ಮಾರಣಾಂತಿಕ ವೇಗದ ಬೌಲರ್ ಎನ್ರಿಕ್ ನಾರ್ಕಿಯಾ ಅವರ ಎಸೆತದಲ್ಲಿ ನಿಕೋಲಸ್ ಪೂರನ್ ಈ ಸುದೀರ್ಘ ಸಿಕ್ಸರ್ ಬಾರಿಸಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link