Bitcoin: ಕೇವಲ ಈ ಒಂದು ನಾಣ್ಯ ಖರೀದಿಸಿ ನೀವು ಕೋಟ್ಯಾಧೀಶರಾಗಬಹುದು

Sun, 03 Jan 2021-7:55 pm,

ಬಿಟ್ ಕಾಯಿನ್ ಗಳನ್ನೂ ನೀವು ಕ್ರಿಪ್ಟೋ ಎಕ್ಸ್ಚೇಂಜ್ ಅಥವಾ ಆನ್ಲೈನ್ ನಲ್ಲಿ ಯಾವುದೇ ಓರ್ವ ವ್ಯಕ್ತಿಯಿಂದ ಖರೀದಿಸಬಹುದು. ಇದಲ್ಲದೆ ಮತ್ತೊಂದು ವಿಧಾನ ಕೂಡ ಇದೆ. ಆದರೆ ಆ ವಿಧಾನ ಸ್ವಲ್ಪ ರಿಸ್ಕಿ ಆಗಿದೆ. ಅದರಿಂದ ನಿಮಗೆ ಹಾನಿಯಾಗಬಹುದು. ಹೀಗಾಗಿ ಮೊದಲ ಎರಡು ವಿಧಾನ ಗಳ ಮೂಲಕ ಮಾತ್ರ ಖರೀದಿಸುವುದು ಉತ್ತಮ.

ಇಡೀ ವಿಶ್ವ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದ ವೇಳೆ 2009 ರಲ್ಲಿ ಕ್ರಿಪ್ಟೋ ಕರೆನ್ಸಿಗಳನ್ನು ಬಿಡುಗಡೆ ಮಾಡಲಾಗಿತ್ತು. ಅತ್ಯಂತ ಆಸಕ್ತಿದಾಯಕ ಸಂಗತಿಯೆಂದರೆ, ಅದರ ಖಾತೆಯನ್ನು ಸಾವಿರಾರು ಕಂಪ್ಯೂಟರ್‌ಗಳಲ್ಲಿ ಏಕಕಾಲದಲ್ಲಿ ಸಾರ್ವಜನಿಕ ಲೆಡ್ಜರ್‌ನಲ್ಲಿ ಇರಿಸಲಾಗುತ್ತದೆ. ಸಾಂಪ್ರದಾಯಿಕ ಕರೆನ್ಸಿಗಳನ್ನು ಬ್ಯಾಂಕುಗಳ ಸರ್ವರ್‌ಗಳಲ್ಲಿ ಲೆಕ್ಕಹಾಕುವ ವಿಧಾನಕ್ಕೆ ಇದು ತದ್ವಿರುದ್ಧವಾಗಿದೆ. ಪ್ರಸ್ತುತ ಇದು ವಿಶ್ವದ ಅತಿದೊಡ್ಡ ಕರೆನ್ಸಿಯಾಗಿ ಮಾರ್ಪಟ್ಟಿದೆ.

ಆರಂಭದ ದಿನಗಳಲ್ಲಿ ಟೆಕ್ನಾಲಾಜಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರು ಇದರ ಉಪಯೋಗ ಮಾಡುತ್ತಿದ್ದರು. ಸಣ್ಣ-ಸಣ್ಣ ಹಣ ಪಾವತಿಗೆ ಅವರು ಈ ಕರೆನ್ಸಿ ಬಳಕೆ ಮಾಡುತ್ತಿದ್ದರು. ಆದರೆ, 2017ರವರೆಗೆ ಇದೊಂದು ಹೂಡಿಕೆಯ ಉತ್ಪನ್ನವಾಗಿ ಮಾರ್ಪಟ್ಟಿತು. ಬಳಿಕ ಈ ಕರೆನ್ಸಿ ಮೌಲ್ಯ 20 ಪಟ್ಟು ಹೆಚ್ಚಾಯಿತು. ಆದರೆ, 2018ರಲ್ಲಿ ಇದರ ಮೌಲ್ಯ ಭಾರಿ ಕುಸಿಯಿತು. ಆದರೆ, 2020ರಲ್ಲಿ ಕೊವಿಡ್ ಬಾಗಿಲು ತಟ್ಟುತ್ತಲೇ ಇದರ ಮೌಲ್ಯ ಮತ್ತೆ ಚೇತರಿಸಿಕೊಳ್ಳಲು ಆರಂಭಿಸಿದೆ. ಪ್ರಸ್ತುತ ಈ ಕ್ರಿಪ್ಟೋ ಕರೆನ್ಸಿ ಮೌಲ್ಯ ಪ್ರತಿ ಯುನಿಟ್ ಗೆ 13.97ರಷ್ಟಿದೆ.

ಭಾರತದಲ್ಲಿ ಕ್ರಿಪ್ಟೋಕರೆನ್ಸಿ ಹೂಡಿಕೆ ಸಂಪೂರ್ಣವಾಗಿ ಕಾನೂನುಬದ್ಧವಾಗಿಲ್ಲ ಮತ್ತು ಇದರ ಮೇಲೆ ಯಾವುದೇ ನಿರ್ಬಂಧ ಕೂಡ ಇಲ್ಲ. 2018 ರಲ್ಲಿ ಸುಪ್ರೀಂ ಕೋರ್ಟ್ ಆರ್‌ಬಿಐ ನಿಷೇಧವನ್ನು ತಿರಸ್ಕರಿಸಿದೆ. 2019 ರಲ್ಲಿ ಎಲ್ಲಾ ಕ್ರಿಪ್ಟೋಕರೆನ್ಸಿಗಳನ್ನು ನಿಗ್ರಹಿಸುವ ಮಸೂದೆಯನ್ನು ಸಂಸತ್ತಿನಲ್ಲಿ ತರಲಾಗುವುದು ಎಂದು ಮಾಧ್ಯಮ ವರದಿಗಳು ಹೇಳಿದ್ದವು, ಆದರೆ ಅದನ್ನು ಎಂದಿಗೂ ಸಂಸತ್ತಿನಲ್ಲಿ ಮಂಡಿಸಲಾಗಿಲ್ಲ. ಈ ಮಸೂದೆಯನ್ನು ಅಂಗೀಕರಿಸುವುದು ತುಂಬಾ ಕಷ್ಟ ಎಂದು ವಕೀಲರು ಹೇಳಿದ್ದಾರೆ.

ಷೇರು ಮಾರುಕಟ್ಟೆಯಲ್ಲಿನ ಷೇರಿನ ಬೆಲೆಯನ್ನು ಆ ಕಂಪನಿಯ ಲಾಭದ ಸ್ಥಿತಿ ಅಥವಾ ಬಾಂಡ್‌ನ ಲಾಭದಾಯಕತೆಯಿಂದ ನಿರ್ಧರಿಸಲಾಗುತ್ತದೆ, ಆದರೆ ಇದು ಬಿಟ್‌ಕಾಯಿನ್‌ನಲ್ಲಿ ಕಂಡುಬರುವುದಿಲ್ಲ. ಇದರ ಮೌಲ್ಯವನ್ನು ನಿರ್ಧರಿಸಲು ಯಾವುದೇ ಆಧಾರಗಳಿಲ್ಲ. ಆದರೆ ಬಿಟ್ ಕಾಯಿನ್ ಪರ ವಾದಮಂಡಿಸುವ ಜನರು ಚಿನ್ನದಲ್ಲಿ ಹೂಡಿಕೆಯ ಮಾಡುವ ಮಾದರಿಯಲ್ಲೇ ಇತರೆ ಹೂಡಿಕೆ ಸಂಪನ್ಮೂಳಗಳಲ್ಲಿಯೂ ಕೂಡ ಯಾವುದೇ ರೀತಿಯ ಮೌಲ್ಯ ಅದರ ಬೆಲೆಯ ಜೊತೆಗೆ ಸಂಬಂಧ ಹೊಂದಿಲ್ಲ ಎನ್ನುತ್ತಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link