Photo Gallery: ಪ್ರಧಾನಿ ಮೋದಿಯಿಂದ ದೇಶದ ಅತೀ ಉದ್ದದ ಅಟಲ್ ಸೇತುವೆ ಲೋಕಾರ್ಪಣೆ!
ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ದೇಶದ ಅತೀ ಉದ್ದದ ಅಟಲ್ ಸೇತುವೆಯನ್ನು ಲೋಕಾರ್ಪಣೆಗೊಳಿಸಿದ್ದಾರೆ. ದೇಶದ ಅತೀ ಉದ್ದದ ಸೇತುವೆ, ದೇಶದ ಅತೀ ಉದ್ದದ ಸಮುದ್ರ ಸೇತುವೆ ಹಾಗೂ ವಿಶ್ವದ 12ನೇ ಅತೀ ಉದ್ದದ ಸಮುದ್ರ ಸೇತುವೆಯೆಂಬ ಕೀರ್ತಿಗೆ ಅಟಲ್ ಸೇತುವೆ ಪಾತ್ರವಾಗಿದೆ.
ಮುಂಬಯಿ- ನವಿಮುಂಬಯಿ ನಡುವೆ ಸಂಪರ್ಕ ಕಲ್ಪಿಸುವ ಈ ಸೇತುವೆ ಒಟ್ಟು 22 ಕಿ.ಮೀ ಉದ್ದವಿದೆ. ಸೇತುವೆಯ ಮಾರ್ಗ ಒಟ್ಟು 5.5 ಕಿ.ಮೀಯಷ್ಟು ಭೂಭಾಗದಲ್ಲಿ ಹಾದು ಹೋಗಿದೆ.
ಈ ಅಟಲ್ ಸೇತುವೆಯು ಸಮುದ್ರಮಟ್ಟದಿಂದ 15 ಮೀಟರ್ ಎತ್ತರವಿದ್ದು, 6 ರಸ್ತೆ ಪಥಗಳನ್ನು ಹೊಂದಿದೆ.
ಈ ಸೇತುವೆಯಿಂದ ಒಟ್ಟು 100 ನಿಮಿಷಗಳಷ್ಟು ಪ್ರಯಾಣದ ಸಮಯ ಉಳಿತಾಯವಾಗುತ್ತದೆ. ದಿನಂಪ್ರತಿ 70 ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸುವ ನಿರೀಕ್ಷೆ ಇದೆ.
ಈ ಮುಂಬೈ ಟ್ರಾನ್ಸ್ ಮತ್ತು ಹಾರ್ಬರ್ ಲಿಂಕ್ ಸೇತುವೆಯ ಜೀವಿತಾವಧಿ ಬರೋಬ್ಬರಿ 100 ವರ್ಷಗಳಾಗಿವೆ ಎಂದು ವರದಿಯಾಗಿದೆ.
ಈ ಸೇತುವೆಯ ಯೋಜನಾ ವೆಚ್ಚ ಬರೋಬ್ಬರಿ 18,000 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಈ ಸೇತುವೆ ನಿರ್ಮಾಣಕ್ಕೆ 1.7 ಲಕ್ಷ ಮೆಟ್ರಿಕ್ ಟನ್ ಉಕ್ಕು ಬಳಕೆ ಮಾಡಲಾಗಿದೆ.
ಈ ಸೇತುವೆ ನಿರ್ಮಾಣಕ್ಕೆ 5.04 ಲಕ್ಷ ಮೆಟ್ರಿಕ್ ಟನ್ ಸಿಮೆಂಟ್ ಬಳಕೆ ಮಾಡಲಾಗಿದೆ.
ಒಟ್ಟು 5,403 ಎಂಜಿನಿಯರ್ ಮತ್ತು ಕಾರ್ಮಿಕರು ಈ ಸೇತುವೆ ನಿರ್ಮಾಣದ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.