Ayushman Khurana ದಾರಿ ತುಳಿದ Rakul Preet Singh ಕಾಂಡೋಮ್ ಗಳ ಟೆಸ್ಟಿಂಗ್ ನಡೆಸಲಿದ್ದಾಳೆ

Wed, 05 May 2021-7:59 pm,

1. ಚಿತ್ರದ ಹೆಸರು ಇನ್ನೂ ಬಹಿರಂಗಗೊಂಡಿಲ್ಲ: ರಕುಲ್ ಪ್ರೀತ್ ಸಿಂಗ್ ತನ್ನ ಮುಂದಿನ ಚಿತ್ರವನ್ನು ರಾನಿ ಸ್ಕ್ರೂವಾಲಾ ಜೊತೆಗೆ ಸೈನ್ ಹಾಕಿದ್ದಾಳೆ. ಈ ಚಿತ್ರದಲ್ಲಿ ಆಕೆ ಕಾಂಡೋಮ್ ಟೆಸ್ಟರ್ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಆದರೆ, ಚಿತ್ರದ ಟೈಟಲ್ ಅನ್ನು ಇದುವರೆಗೆ ಬಹಿರಂಗಗೊಂಡಿಲ್ಲ. ಆದರೆ, ಚಿತ್ರದಲ್ಲಿನ ರಕುಲ್ ಪಾತ್ರ ಮಾತ್ರ ಬಹಿರಂಗಗೊಂಡಿದೆ.

2. ಬೋಲ್ಡ್ ಪಾತ್ರಕ್ಕೆ ಸಹಿ ಹಾಕಿದ್ದಾಳೆ ರಕುಲ್: ಚಿತ್ರದಲ್ಲಿ ರಕುಲ್ ಪ್ರೀತ್ ಸಿಂಗ್ ಕಾಣಿಸಿಕೊಳ್ಳುತ್ತಿರುವ ಪಾತ್ರ ತುಂಬಾ ಬೋಲ್ಡ್ ಆಗಿದೆ. ರಕುಲ್ ಇದನ್ನೊಂದು ಸವಾಲಾಗಿ ಸ್ವೀಕರಿಸಿದ್ದಾಳೆ. ಇದಕ್ಕೂ ಮೊದಲು ಕೂಡ ಬಾಲಿವುಡ್ ನಲ್ಲಿ ಈ ರೀತಿಯ ಬೋಲ್ಡ್ ವಿಷಯಗಳ ಮೇಲೆ ಚಿತ್ರಗಳು ತಯಾರಾಗಿವೆ. ಆಯುಷ್ಮಾನ್ ಖುರಾನಾ ಅವರ 'ವಿಕ್ಕಿ ಡೋನರ್' ಕೂಡ ಇದೆ ರೀತಿಯ ಬೋಲ್ಡ್ ಕಥಾ ಹಂದರ ಹೊಂದಿದ ಚಿತ್ರವಾಗಿತ್ತು.

3. ಈ ಥೀಮ್ ಆಧರಿಸಿದೆ ಚಿತ್ರ: ದೊಡ್ಡ ದೊಡ್ಡ ಕಾಂಡೋಮ್ ತಯಾರಕ ಕಂಪನಿಗಳು 18 ವರ್ಷಕ್ಕಿಂತ ಮೇಲ್ಪಟ್ಟ ಜನರನ್ನು ತಮ್ಮ ಕಂಪನಿಯಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುತ್ತವೆ. ಈ ಜನರು ಕಂಪನಿಯಲ್ಲಿ ಕಾಂಡೋಮ್ ಟೆಸ್ಟಿಂಗ್ ಕೆಲಸ ಮಾಡುತ್ತಾರೆ. ಇದನ್ನೇ ಆಧಾರವಾಗಿತಟ್ಟುಕೊಂಡು ಚಿತ್ರ ತಯಾರಾಗುತ್ತಿದೆ.  

4. ಸಾಮಾಜಿಕ ಮಾಧ್ಯಮಗಳಲ್ಲಿ ರಕುಲ್ ಸಾಕಷ್ಟು ಸ್ರಕ್ರೀಯಳಾಗಿದ್ದಾಳೆ: ರಕುಲ್ ಪ್ರೀತ್ ಸಿಂಗ್ ಸಾಮಾಜಿಕ ಮಾಧ್ಯಮಗಳ ಮೇಲೆ ಸಾಕಷ್ಟು ಸಕ್ರೀಯಳಾಗಿರುತ್ತಾಳೆ ಹಾಗೂ ತನ್ನ ಬೋಲ್ಡ್ ಛಾಯಾಚಿತ್ರಗಳನ್ನು ಆಗಾಗ ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಿರುತ್ತಾಳೆ. ತನ್ನ ಗ್ಲಾಮರಸ್ ಹಾಗೂ ಸ್ಟೈಲಿಶ್ ಫೋಟೋಗಳನ್ನು ರಕುಲ್ ಹಂಚಿಕೊಳ್ಳುತ್ತಿರುತ್ತಾಳೆ.

5. ಶೀಘ್ರದಲ್ಲಿಯೇ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾಳೆ : ಶೀಘ್ರವೇ ರಕುಲ್ ಪ್ರೀತ್ ಸಿಂಗ್ ಬಾಲಿವುಡ್ ಬಿಗ್ ಬಿ Amitabh Bachchan ಅಭಿನಯಿಸಿರುವ ಚಿತ್ರವಾಗಿರುವ 'ಮೇಡೇ, ನಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಈ ಚಿತ್ರದಲ್ಲಿ ರಕುಲ್ ಅಜಯ್ ದೇವಗನ್ ವಿರುದ್ಧ ನಟಿಸುತ್ತಿದ್ದಾಳೆ. ಈ ಚಿತ್ರವನ್ನು ಅಜಯ್ ದೇವಗನ್ (Ajay Devgan) ನಿರ್ದೇಶಿಸುತ್ತಿದ್ದಾರೆ. ಇದಕ್ಕೂ ಮೊದಲು ಕೂಡ ರಕುಲ್ ಅಜಯ್ ದೇವಗನ್ ಜೊತೆಗೆ ಚಿತ್ರವೊಂದರಲ್ಲಿ ನಟಿಸಿದ್ದಾಳೆ.

6. ಈ ಚಿತ್ರದಿಂದ ತನ್ನ ನಟನಾ ವೃತ್ತಿ ಆರಂಭಿಸಿದ್ದಳು ರಕುಲ್: ತನ್ನ ಮುಂಬರುವ ಚಿತ್ರಗಳ ಕುರಿಉತ್ ರಕುಲ್ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ ಹಾಗೂ ಅವುಗಳಿಗೆ ಸಂಬಂಧಿಸಿದಂತೆ ಯಾವುದೇ ಸೋಸಿಯಲ್ ಮಿಡಿಯಾ ಪೋಸ್ಟ್ ಹಂಚಿಕೊಂಡಿಲ್ಲ. ರಕುಲ್ ದಿವ್ಯ ಖೊಸ್ಲಾಕುಮಾರ್ ಅವರ 'ಯಾರಿಯಾ' ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದಳು ಎಂಬುದು ಇಲ್ಲಿ ಉಲ್ಲೇಖನೀಯ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link