Ration Card Latest Update: ಈ ಕೆಲಸ ಇಂದೇ ಮಾಡಿ ಇಲದಿದ್ರೆ ಬಂದಾಗುತ್ತೆ ನಿಮ್ಮ ಪಡಿತರ ಚೀಟಿ
ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಧ್ಯಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಹೊಸ ಪಡಿತರ ಚೀಟಿ ಜಾರಿಗೊಳಿಸುವುದರ ಜೊತೆಗೆ, ಸದ್ಯ ಚಾಲ್ತಿಯಲ್ಲಿರುವ ಪಡಿತರ ಚೀಟಿಯಲ್ಲಿ ಹೆಸರುಗಳನ್ನು ಸೇರಿಸುವ ಮತ್ತು ತೆಗೆದುಹಾಕುವ ಕೆಲಸ ನಡೆಯುತ್ತಿದೆ. ಉತ್ತರಾಖಂಡದಲ್ಲಿ ಇದಕ್ಕಾಗಿ ಜನವರಿ 30 ರೊಳಗೆ ಜಿಲ್ಲೆಯ ಆಹಾರ ಪೂರೈಕೆ ಕಚೇರಿಗೆ ಅರ್ಜಿ ಸಲ್ಲಿಸಬಹುದು. ಅಂತೆಯೇ ಬಿಹಾರ ಮತ್ತು ಉತ್ತರಪ್ರದೇಶದಲ್ಲೂ ಕೂಡ ನೀವು ಆಹಾರ ಪೂರೈಕಾ ವಿಭಾಗಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಈ ಕೆಲಸವನ್ನು ಪೂರ್ಣಗೊಳಿಸಬಹುದು.
ಈ ವರ್ಷದಿಂದ ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆ ಸಂಪೂರ್ಣವಾಗಿ ಜಾರಿಗೆ ಬರಲಿದೆ ಎಂಬುದು ಇಲ್ಲಿ ಗಮನಾರ್ಹ. ಇಂತಹ ಪರಿಸ್ಥಿತಿಯಲ್ಲಿ, ಪ್ರತಿ ರಾಜ್ಯದಲ್ಲಿ, ಪಡಿತರ ಚೀಟಿಯಲ್ಲಿ ನೋಂದಾಯಿಸಲಾದ ಕುಟುಂಬದ ಪ್ರತಿಯೊಬ್ಬ ಸದಸ್ಯರ ಆಧಾರ್ ಕಾರ್ಡ್ ಸರಬರಾಜು ಇಲಾಖೆಗೆ ಸಲ್ಲಿಸಲಾಗಿರಲಿಲ್ಲ. ಈ ಕಾರಣದಿಂದಾಗಿ ಅನೇಕ ಪಡಿತರ ಚೀಟಿ ಹೊಂದಿರುವರ ಪಡಿತರ ಚೀಟಿಯನ್ನು ಅಮಾನತುಗೊಳಿಸಲಾಗಿದೆ. ಅಪೂರ್ಣ ದಸ್ತಾವೇಜಿನಿಂದಾಗಿ, ಅನೇಕ ಜನರ ಪಡಿತರ ಚೀಟಿ ಸ್ವಯಂಚಾಲಿತವಾಗಿ ರದ್ದುಗೊಂಡಿದೆ. ಇವರಿಗೆ ಮತ್ತೆ ತಮ್ಮ ಪಡಿತರ ಚೀತಿಯಲ್ಲಿನ ಮಾಹಿತಿಯನ್ನು ನವೀಕರಿಸಲು ಆಹಾರ ಸರಬರಾಜು ಇಲಾಖೆ ಅವಕಾಶ ಕಲ್ಪಿಸಿದೆ.
ಕಳೆದ ಹಲವು ತಿಂಗಳಿನಿಂದ ಸರ್ಕಾರ ನಕಲಿ ಪಡಿತರ ಚೀಟಿ ಹೊಂದಿದವರ ಮೇಲೆ ತನ್ನ ಪಟ್ಟು ಬಿಗಿಗೊಳಿಸಿದೆ. ಈ ಹಿನ್ನೆಲೆ ಹಲವು ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದೆ. ಕಳೆದ ವರ್ಷ ಡಿಸೆಂಬರ್ ವರೆಗೆ ಝಾರ್ಖಂಡ್ ಸರ್ಕಾರ ಸುಮಾರು 2,85,299 ಗ್ರೀನ್ ರೇಶನ್ ಕಾರ್ಡ್ ಅರ್ಜಿಗಳನ್ನು ರದ್ದುಗೊಳಿಸಿತ್ತು. ಹಸಿರು ಪಡಿತರ ಚೀಟಿ ಪಡೆಯಲು ಅರ್ಹರಲ್ಲದ ವ್ಯಕ್ತಿಗಳ ಹೆಸರಿನಲ್ಲಿ ಈ ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಝಾರ್ಖಂಡ್ ಆಹಾರ ಪೂರೈಕಾ ವಿಭಾಗದ ಪ್ರಕಾರ ಹಸಿರು ಪಡಿತರ ಚೀಟಿ ಪಡೆದ ಅರ್ಜಿದಾರರ ಬಳಿ ಸ್ವಂತ ಮನೆ, ವಾಹನ, ಕುಟುಂಬದ ಹಲವು ಸದಸ್ಯರು ಸರ್ಕಾರಿ ನೌಕರಿಯಲ್ಲಿರುವುದು ಹಾಗೂ ಸರ್ಕಾರದ ವತಿಯಿಂದ ಪಿಂಚಣಿ ಸೌಲಭ್ಯ ಹೊಂದಿರುವುದು ಗಮನಕ್ಕೆ ಬಂದಿತ್ತು. ಈ ಎಲ್ಲ ಜನರ ಅರ್ಜಿಗಳನ್ನು ತನಿಖೆಗೆ ಒಳಪಡಿಸಿದಾಗ ಈ ಅಂಶ ಬಹಿರಂಗಗೊಂಡಿತ್ತು.
ಬಿಹಾರ್, ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ಝಾರ್ಖಂಡ್ ಗಳಂತಹ ರಾಧ್ಯಗಳಲ್ಲಿ ಪಡಿತರ ಚೀಟಿ ತಯಾರಿಸುವ ಕಾರ್ಯ ಭರದಿಂದ ಸಾಗಿದೆ. ನೀವು ಜಿಲ್ಲೆಯ ಆಹಾರ ಪೂರೈಕಾ ವಿಭಾಗಕ್ಕೆ ಭೇಟಿ ನೀಡುವ ಮೂಲಕ ಅಥವಾ ಅಜೀವಿಕಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ನಿಮ್ಮ ಪಡಿತರ ಚೀಟಿಯನ್ನು ಪಡೆದುಕೊಳ್ಳಬಹುದು. ಅಥವಾ ನಿಮ್ಮ ಬಳಿ ಇರುವ ಪಡಿತರ ಚೀಟಿಯಲ್ಲಿ ಹೊಸ ಹೆಸರು ಸೇರ್ಪಡೆ ಹಾಗೂ ಹಳೆ ಹೆಸರನ್ನು ತೆಗೆಸಿಹಾಕಬಹುದು. ಇಲಾಖೆ ನೀಡುವ ಫಾರ್ಮ್ ಅನ್ನು ಭರ್ತಿ ಮಾತಿ ನೀವು ಸಲ್ಲಿಸಬೇಕು. ಅರ್ಜಿದಾರರು ತಮ್ಮ ಪಡಿತರ ಚೀಟಿಯಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿದರೆ ಅವರಿಗೆ ಇಲಾಖೆಗೆ ಹಲವು ರೀತಿಯ ಮಾಹಿತಿ ಹಾಗೂ ದಾಖಲೆ ಒದಗಿಸಬೇಕಾಗಲಿದೆ. ಇದಕ್ಕಾಗಿ ಅರ್ಜಿದಾರರಿಂದ ಆಧಾರ್ ಕಾರ್ಡ್ ಸಂಖ್ಯೆ, ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆಯ ಮಾಹಿತಿ ರಹವಾಸಿ ಅಥವಾ ವೋಟರ್ ಐಡಿ ಕಾರ್ಡ್ ಜೊತೆಗೆ ಸ್ಥಳೀಯ ಮಟ್ಟದಲ್ಲಿ ಇತರೆ ದಾಖಲೆಗಳನ್ನು ಒದಗಿಸುವ ಅವಶ್ಯಕತೆ ಇದೆ.
ಪಡಿತರ ಚೀಟಿ ಪಡೆಯಲು ನೀವು ನಿಮ್ಮ ರಾಜ್ಯದ ಆಹಾರ ಪೂರೈಕಾ ವಿಭಾಗದ ಪೋರ್ಟಲ್ ಗೆ ನೇರವಾಗಿ ಭೇಟಿ ನೀಡಿ ಆನ್ಲೈನ್ ನಲ್ಲಿ ಅಪ್ಲೈ ಮಾಡಬಹುದಾಗಿದೆ. ಒಂದು ವೇಳೆ ನೀವು ಉತ್ತರ ಪ್ರದೇಶದಲ್ಲಿ ವಾಸಿಸುತ್ತಿದ್ದರೆ https://fcs.up.gov.in/FoodPortal.aspx ವೆಬ್ ಸೈಟ್ ಗೆ ಭೇಟಿ ನೀಡುವ ಆವಶ್ಯಕತೆ ಇದೆ. ಈ ತಾಣಕ್ಕೆ ಭೇಟಿ ನೀಡುವ ಮೂಲಕ ಪಡಿತರ ಚೀಟಿಗಾಗಿ ನೀವು ಅರ್ಜಿಯ ಫಾರ್ಮ್ಯಾಟ್ ಡೌನ್ಲೋಡ್ ಮಾಡಬಹುದು. ಪಡಿತರ ಚೀಟಿ ತಯಾರಿಸಲು ನಿಮ್ಮ ಬಳಿ ಆಧಾರ್ ಕಾರ್ಡ್, ವೋಟರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಅಥವಾ ಇತರೆ ಯಾವುದಾದರೊಂದು ದಾಖಲೆ ನೀಡಬೇಕು. ಅರ್ಜಿ ಸಲ್ಲಿಸುವಾಗ ನೀವು ರೂ.5-45 ರೂ ಅರ್ಜಿ ಶುಲ್ಕ ಪಾವತಿಸಬೇಕು. ಒಂದೊಮ್ಮೆ ನಿಮ್ಮಿಂದ ಅರ್ಜಿ ಬಂದ ಬಳಿಕ, ಅದನ್ನು ಫೀಲ್ಡ್ ವೆರಿಫಿಕೆಶನ್ ಗೆ ಕಳುಹಿಸಲಾಗುತ್ತದೆ. ಈ ವೆರಿಫಿಕೆಶನ್ 30 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ತನಿಖೆಯಲ್ಲಿ ಎಲ್ಲವು ಹೇಳಿಕೊಂಡಂತೆ ಇದೆ ಎಂದು ಸಾಬೀತಾದರೆ ಮುಂದಿನ 30 ದಿನಗಳ ಒಳಗೆ ನಿಮ್ಮ ಪಡಿತರ ಚೀಟಿ ನಿಮ್ಮ ಮನೆಬಾಗಿಲಿಗೆ ತಲುಪಲಿದೆ.