SBIನ ಈ ಯೋಜನೆಯಲ್ಲಿ ತಿಂಗಳಿಗೆ 1000 ರೂ.ಉಳಿತಾಯ ಮಾಡಿದ್ರೆ, 1.59ಲಕ್ಷ ಗ್ಯಾರಂಟಿ ರಿಟರ್ನ್

Wed, 24 Feb 2021-7:08 pm,

1. SBI ನೀಡುತ್ತಿದೆ ಉತ್ತಮ ರಿಟರ್ನ್ - ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ನಿಮಗೆ ಹೂಡಿಕೆ ಮಾಡುವ ಮೂಲಕ ಉತ್ತಮ ರಿಟರ್ನ್ ಪಡೆಯುವ ಅವಕಾಶ ಕಲ್ಪಿಸುತ್ತಿದೆ. ಇದರಲ್ಲಿ ವಿಶೇಷತೆ ಎಂದರೆ ನೀವು ಪ್ರತಿ ತಿಂಗಳಿಗೆ 1 ಸಾವಿರ ರೂ. ಮಾತ್ರ ಹೂಡಿಕೆ ಮಾಡುವ ಮೂಲಕ 1.59 ಲಕ್ಷ ರೂ.ಗಳ ನಿಶ್ಚಿತ ರಿಟರ್ನ್ ಪಡೆಯಬಹುದು. ಹಾಗಾದರೆ ಬನ್ನಿ ಈ ಯೋಜನೆಯ ಕುರಿತು ವಿವರವಾಗಿ ತಿಳಿದುಕೊಳ್ಳೋಣ.

2. RD ಖಾತೆಯ ಮೇಲೆ SBI ಉತ್ತಮ ಬಡ್ಡಿ ನೀಡುತ್ತದೆ - ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಉತ್ತಮ ಬಡ್ಡಿದರ ನೀಡುತ್ತದೆ. SBI ಅಧಿಕೃತ ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ಪ್ರಕಾರ SBI ತನ್ನ RD ಸ್ಕೀಮ್ (SBI Scheme Alert) ಮೇಲೆ 3 ರಿಂದ 5 ವರ್ಷಗಳ ಅವಧಿಯ ಠೇವಣಿಯ ಮೇಲೆ ಶೇ.5.3 ರಷ್ಟು ವಾರ್ಷಿಕ ಬಡ್ಡಿಯನ್ನು ಪಾವತಿಸುತ್ತದೆ.

3. ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿಯ ಲಾಭ - ಒಂದು ವೇಳೆ ಯಾವುದೇ ಹಿರಿಯ ನಾಗರಿಕರು RD ಖಾತೆಯಲ್ಲಿ ಹೂಡಿಕೆ ಮಾಡಿದರೆ, ಅವರಿಗೆ ಶೇ.0.80ರಷ್ಟು ಹೆಚ್ಚುವರಿ ಬಡ್ಡಿ ನೀಡಲಾಗುತ್ತದೆ. ಅಂದರೆ 5 ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ RD ಹೂಡಿಕೆಯ ಮೇಲೆ SBI ಶೇ.6.2ರಷ್ಟು ಬಡ್ಡಿ ನೀಡುತ್ತದೆ.

4. SBIನ RD ಯೋಜನೆಯ ಪೆನಾಲ್ಟಿ ನಿಯಮ ಏನು ಹೇಳುತ್ತದೆ -  ಒಂದು ವೇಳೆ ನೀವೂ ಕೂಡ ಆರ್‌ಡಿ ಖಾತೆಯನ್ನು ತೆರೆದಿದ್ದರೆ  ಮತ್ತು ನಿಗದಿತ ಸಮಯದಲ್ಲಿ ಕಂತು ಪಾವತಿಸದಿದ್ದರೆ, ಎಸ್‌ಬಿಐ  ದಂಡ ಸಹ ವಿಧಿಸುತ್ತದೆ. 5 ವರ್ಷಕ್ಕಿಂತ ಕಡಿಮೆ ಇರುವ ಆರ್‌ಡಿಗಳಲ್ಲಿ 100 ಕ್ಕೆ 1.5 ರೂ. 5 ವರ್ಷಕ್ಕಿಂತ ಮೇಲ್ಪಟ್ಟ ಆರ್‌ಡಿಗಳಿಗೆ 100 ರೂಪಾಯಿಗೆ 2 ರೂ. ಪೆನಾಲ್ಟಿ ವಿಧಿಸಲಾಗುತ್ತದೆ. ಅಂದರೆ 1000 ರೂಪಾಯಿಗೆ 20 ರೂಪಾಯಿ ದಂಡ ವಿಧಿಸಲಾಗುತ್ತದೆ. 6 ತಿಂಗಳವರೆಗೆ ಒಂದು ವೇಳೆ ನೀವು ಹಣವನ್ನು ನಿರಂತರವಾಗಿ ಠೇವಣಿ ಮಾಡದಿದ್ದರೆ, ಎಸ್‌ಬಿಐ ನಿಮ್ಮ ಖಾತೆಯನ್ನು ನಿಲ್ಲಿಸಿ, ಎಲ್ಲಾ ಹಣವನ್ನು ನಿಮ್ಮ ಉಳಿತಾಯ ಖಾತೆಗೆ ವರ್ಗಾಯಿಸುತ್ತದೆ.

5.SBI RD ಯೋಜನೆಯ (SBI RD Scheme) ಸೇವಾ ಶುಲ್ಕ - SBIನ RDಯಲ್ಲಿ ಒಂದು ವೇಳೆ ನೀವು 3-4 ಬಾರಿ ಸರಿಯಾಗಿ ಹಣ ಜಮಾ ಮಾಡದೆ ಹೋದಲ್ಲಿ, ಬ್ಯಾಂಕ್ ನಿಮ್ಮಿಂದ 10 ರೂ. ಸೇವಾ ಶುಲ್ಕ ಪಡೆಯುತ್ತದೆ.

6. ಹೇಗೆ ಸಂಪಾದಿಸಬೇಕು 1.59 ಲಕ್ಷ ರೂ. - SBI ಕ್ಯಾಲ್ಕುಲೇಟರ್ (SBI RD Calculator) ಪ್ರಕಾರ ಒಂದು ವೇಳೆ ನಿಮ್ಮ ವಯಸ್ಸು 60 ವರ್ಷಕ್ಕಿಂತ ಕಡಿಮೆಯಾಗಿದ್ದರೆ ಹಾಗೂ ತಿಂಗಳಿಗೆ 1000 ರೂ. ಲೆಕ್ಕದಲ್ಲಿ 120 ತಿಂಗಳಿಗೆ ನೀವು ಹಣವನ್ನು ಹೂಡಿಕೆ ಮಾಡಿದಲ್ಲಿ, 10 ವರ್ಷಗಳ ಬಳಿಕ ಶೇ.5.4ರ ಬಡ್ಡಿದರದಲ್ಲಿ 1 ಲಕ್ಷ 59 ಸಾವಿರದ 155 ರೂ.ರಿಟರ್ನ್ ಪಡೆಯಬಹುದು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link