Photo Gallery: ವಿಶಿಷ್ಟ ಕೇಶವಿನ್ಯಾಸದಿಂದ ಅಭಿಮಾನಿಗಳಿಗೆ ಬೆರಗುಗೊಳಿಸಿದ್ದ ಎಂ.ಎಸ್.ಧೋನಿ
ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿಯವರ ಇತ್ತೀಚಿನ ಕೇಶವಿನ್ಯಾಸ ಅವರ ಅಸಂಖ್ಯಾತ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಪ್ರಸಿದ್ಧ ಕೇಶವಿನ್ಯಾಸಗಾರ ಹಲಿಮ್ ಹಕ್ಕಿಂ ಅವರ ಟ್ರೆಂಡಿ ಫಾಕ್ಸ್ ಹಾಕ್ ಹೇರ್ಕಟ್ ನಲ್ಲಿ ಧೋನಿ ಸೂಪರ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಹೊಸ ಕೇಶವಿನ್ಯಾಸಕ್ಕೆ ಅನೇಕರು ಫಿದಾ ಆಗಿದ್ದಾರೆ.
ಎಂ.ಎಸ್.ಧೋನಿಯವರು ಚೆನ್ನಾಗಿರುವ ಕೂದಲು ಮತ್ತು ಗಡ್ಡದೊಂದಿಗೆ ಸ್ವಲ್ಪ ಸಮಯ 'ಮ್ಯಾಚೋ ಲುಕ್'ನಲ್ಲಿ ಗಮನ ಸೆಳೆದಿದ್ದರು.
2018ರಲ್ಲಿ ಧೋನಿ ಮೊದಲ ಬಾರಿಗೆ ಸಾಲ್ಟ್ ಅಂಡ್ ಪೆಪ್ಪರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಇದು ಕಪ್ಪು ಮತ್ತು ಬೂದು ಕೂದಲಿನ ಮಿಶ್ರಣವನ್ನು ಪ್ರದರ್ಶಿಸುತ್ತದೆ. ‘ಕ್ಯಾಪ್ಟನ್ ಕೂಲ್’ಗೆ ವಯಸ್ಸಾಗುತ್ತಿದೆ ಅಂತಾ ಅಭಿಮಾನಿಗಳು ಮೊದಲ ಬಾರಿ ತಿಳಿದುಕೊಂಡಿದ್ದರು.
2013ರ ಐಪಿಎಲ್ ಸಮಯದಲ್ಲಿ ಎಂ.ಎಸ್.ಧೋನಿ ತಮ್ಮ ವಿಶೇಷ ‘ಮೊಹಾವ್ಕ್’ ಕೇಶವಿನ್ಯಾಸವನ್ನು ಅನಾವರಣಗೊಳಿಸುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದ್ದರು. ಕೇವಲ ತಲೆಯ ಮಧ್ಯ ಭಾಗದಲ್ಲಿ ಮಾತ್ರ ಕೂದಲು ಬಿಟ್ಟು, ಎರಡು ಬದಿ ಸಂಪೂರ್ಣವಾಗಿ ಕತ್ತರಿಸಲಾಗಿತ್ತು. ಈ ಲುಕ್ ಗೆ ಕೂಡ ಅಭಿಮಾನಿಗಳು ಫಿದಾ ಆಗಿದ್ದರು.
ಟೀಂ ಇಂಡಿಯಾ 2011ರ ಐಸಿಸಿ ವಿಶ್ವಕಪ್ ಗೆದ್ದಾಗ ಎಂ.ಎಸ್.ಧೋನಿ ಕೇಶವಿನ್ಯಾಸ ಹೀಗಿತ್ತು ನೋಡಿ.
ಟೀಂ ಇಂಡಿಯಾ 2007ರ ಟಿ 20 ವಿಶ್ವಕಪ್ ಗೆದ್ದ ಬಳಿಕ ಧೋನಿ ತಮ್ಮ ಕೂದಲುಗಳಿಗೆ ಚಿಕ್ಕದಾಗಿ ಕತ್ತರಿ ಹಾಕಿದ್ದರು. ‘ಸಮ್ಮರ್ ಕಟ್’ ಲುಕ್ ನಲ್ಲಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು.
2005ರಲ್ಲಿ ಎಂ.ಎಸ್.ಧೊನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. 2006ರ ಆರಂಭದ ವೇಳೆಗೆ ಅವರ ಉದ್ದನೆಯ ಕೂದಲು ಫ್ಯಾಶನ್ ಸ್ಟೇಟ್‌ಮೆಂಟ್ ಆಗಿ ಮಾರ್ಪಟ್ಟಿತ್ತು. ಪಾಕಿಸ್ತಾನ ಪ್ರವಾಸದ ವೇಳೆ ಕೂದಲು ಕತ್ತರಿಸುವಂತೆ ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಧೋನಿಯವರಿಗೆ ಸಲಹೆ ನೀಡಿದ್ದರು.