Pregnant Before Marriage: ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದ ಬಾಲಿವುಡ್ ನಟಿಯರು ಇವರೇ ನೋಡಿ!
)
ನಟಿ ಶ್ರೀದೇವಿ ಕೂಡ ಮದುವೆಗೂ ಮುನ್ನವೇ ಗರ್ಭಿಣಿಯಾಗುವ ಮೂಲಕ ಸಖತ್ ಸುದ್ದಿಯಾಗಿದ್ದರು. ಶ್ರೀದೇವಿ ಅದಾಗಲೇ ಮದುವೆಯಾಗಿದ್ದ ನಿರ್ಮಾಪಕ ಬೋನಿ ಕಪೂರ್ ಅವರನ್ನು ವಿವಾಹವಾದರು. ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಜನಿಸಿದರು.
)
ರಣಬೀರ್ ಕಪೂರ್ ಜೊತೆ ಮದುವೆಯಾದ 7 ತಿಂಗಳಲ್ಲೇ ಆಲಿಯಾ ಭಟ್ ತಾಯಿಯಾದರು. ಈ ವರ್ಷದ ಏಪ್ರಿಲ್‌ನಲ್ಲಿ ಇಬ್ಬರೂ ಸಪ್ತಪದಿ ತುಳಿದು ಸತಿ-ಪತಿಗಳಾಗಿದ್ದರು. ನಂತರ ನವೆಂಬರ್‌ನಲ್ಲಿ ಆಲಿಯಾ ‘ರಾಹಾ’ ಎಂಬ ಮಗಳಿಗೆ ಜನ್ಮ ನೀಡಿದರು. ಮದುವೆಗೂ ಮುನ್ನವೇ ಗರ್ಭಿಣಿಯಾದಾಗ ಆಲಿಯಾ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದರು.
)
ಸಿನಿಮಾಗಳಲ್ಲಿ ಮತ್ತೆ ಕಮ್ ಬ್ಯಾಕ್ ಮಾಡಿದ ನೀನಾ ಗುಪ್ತಾ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದರು. ನೀನಾ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಜೊತೆ ಸಂಬಂಧ ಹೊಂದಿದ್ದರು. ಆದರೆ ನೀನಾ ಗರ್ಭಿಣಿಯಾದ ನಂತರ ವಿವಿಯನ್ ಮದುವೆಯಾಗಲು ನಿರಾಕರಿಸಿದರು, ನಂತರ ನಟಿ ತನ್ನ ಮಗಳಿಗೆ ಜನ್ಮ ನೀಡಿದ್ದು ಮಾತ್ರವಲ್ಲದೆ ಅವಳನ್ನು ಸಿಂಗಲ್ ಪೇರೆಂಟ್ ಆಗಿ ಬೆಳೆಸಿದರು.
ಸೌತ್ ಚಿತ್ರರಂಗದ ದೊಡ್ಡ ಹೆಸರು ಸಾರಿಕಾ ಹಾಸನ್ ಕೂಡ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದರು. ವಾಸ್ತವವಾಗಿ ಸಾರಿಕಾ ಅವರು ಕಮಲ್ ಹಾಸನ್ ಅವರ 2ನೇ ಪತ್ನಿ. ಕಮಲ್ ಅವರನ್ನು ಮದುವೆಯಾಗುವ ಮೊದಲೇ ನಟಿ ಶ್ರುತಿ ಹಾಸನ್ ಗೆ ಜನ್ಮ ನೀಡಿದ್ದರು.
ಸಿನಿಮಾ ಇಂಡಸ್ಟ್ರಿಯ ಟಾಪ್ ನಟಿ ಕೊಂಕಣಾ ಸೇನ್ ಶರ್ಮಾ ಕೂಡ ಮದುವೆಗೆ ಮುನ್ನವೇ ಗರ್ಭಿಣಿಯಾಗಿದ್ದರು. ಕೊಂಕಣಾ 2010ರಲ್ಲಿ ನಟ ರಣವೀರ್ ಶೋರೆ ಅವರನ್ನು ವಿವಾಹವಾದರು. ಮದುವೆಯಾದ 6 ತಿಂಗಳ ನಂತರ ಪುತ್ರ ಹರೂನ್‌ಗೆ ಜನ್ಮ ನೀಡಿದರು.
ನಟಿ ಲೀಸಾ ಹೇಡನ್ ಕೂಡ ಮದುವೆಗೂ ಮುನ್ನವೇ ಗರ್ಭಿಣಿಯಾಗುವ ಮೂಲಕ ಸುದ್ದಿಯಾಗಿದ್ದರು. ಲಿಸಾ ಸ್ವತಃ ಈ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದರು. 2016ರಲ್ಲಿ ಲಿಸಾ ತನ್ನ ಗೆಳೆಯ ಡಿನೋ ಲಾಲ್ವಾನಿ ಅವರನ್ನು ವಿವಾಹವಾದರು.