Candyologist Job: Toffee ಪ್ರಿಯರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ, ಲಕ್ಷಾಂತರ ರೂ. ಸಂಪಾದನೆಯ ಅವಕಾಶ
ನೀವೂ ಟಾಫಿ ಪ್ರಿಯರೆ? ಮತ್ತು ನಿಮ್ಮಲ್ಲಿ ವಿಭಿನ್ನ ಟಾಫಿ ಪರೀಕ್ಷೆಗಳನ್ನು ವಿವರಿಸುವ ಕೌಶಲ್ಯವಿದೆಯೇ? ಹಾಗಾದರೆ ನೀವು ಲಕ್ಷಾಂತರ ಸಂಬಳವಿರುವ ಉದ್ಯೋಗವನ್ನು ನಿಮ್ಮದಾಗಿಸಬಹುದು. ಹೌದು, ಕಂಪನಿ ಟಾಫಿ ಪರೀಕ್ಷೆಯನ್ನು ವಿವರಿಸಬಲ್ಲ ವ್ಯಕ್ತಿಯನ್ನು ಹುಡುಕುತ್ತಿದೆ. ಅದಕ್ಕಾಗಿ ಕಂಪನಿ ಲಕ್ಷಾಂತರ ರೂ. ಸಂಬಳ ಕೂಡ ನೀಡಲಿದೆ. ನೀವು ವಿಶ್ವದ ಯಾವುದೇ ಭಾಗದಲ್ಲಿ ಕುಳಿತು ಈ ಕೆಲಸವನ್ನು ಮಾಡಬಹುದು.
ಈ ಕ್ಯಾಂಡಿ ಕಂಪನಿ ಹೆಸರು ಕ್ಯಾಂಡಿ ಫನ್ ಹೌಸ್ (Candy FunHouse). ಈ ಕಂಪನಿ ಕೆನಡಾದ ರಾಜ್ಯವಾಗಿರುವ ಸಿನಿಸಾವುಗಾ ಪಟ್ಟಣದಲ್ಲಿದೆ. ಈ ಕಂಪನಿ ಫುಲ್ ಟೈಮ್ ಹಾಗೂ ಪಾರ್ಟ್ ಟೈಮ್ ಆಧಾರದ ಮೇಲೆ ಕ್ಯಾನ್ಡಿಯೋಲಾಜಿಸ್ಟ್ ಹುಡುಕಾಟದಲ್ಲಿದೆ. ಕಂಪನಿ ತಯಾರಿಸುವ ಟಾಫಿಗಳನ್ನು ಪರೀಕ್ಷಿಸಿ, ಅವುಗಳ ಕುರಿತು ವಿಶ್ವಕ್ಕೆ ವಿವರಿಸುವ ಕೌಶಲ್ಯ ಅವರಲ್ಲಿರಬೇಕು.
ಈ ಕುರಿತು ಜಾಹೀರಾತು ನೀಡಿರುವ ಕಂಪನಿ ಈ ಕೆಲಸಕ್ಕಾಗಿ ಪ್ರತಿ ಗಂಟೆಗೆ 47 ಡಾಲರ್ ನೀಡುವುದಾಗಿ ಹೇಳಿದೆ. ಹೀಗಾಗಿ ಈ ಕೆಲಸವನ್ನು ದಿನದಲ್ಲಿ 8 ಗಂಟೆ ಮಾಡಿದರೂ ಕೂಡ ನೀವು ಒಂದು ದಿನಕ್ಕೆ 376 ಡಾಲರ್ ಸಂಪಾದಿಸಬಹುದು. ಭಾರತೀಯ ರೂಪಾಯಿಗಳ ಮೌಲ್ಯದಲ್ಲಿ ಇದು ದಿನಕ್ಕೆ 27,447 ರೂ. ಗಳಾಗುತ್ತಿದ್ದರೆ, ತಿಂಗಳಿಗೆ ರೂ.8,23,410 ಗಳಷ್ಟಾಗಲಿದೆ. ಅಂದರೆ, ವಾರ್ಷಿಕವಾಗಿ ಲೆಕ್ಕ ಹಾಕುವುದಾದರೆ ನೀವು ಒಂದು ವರ್ಷಕ್ಕೆ ಸುಮಾರು 99 ಲಕ್ಷ ರೂ. ಸಂಪಾದಿಸಬಹುದು.
ಇಲ್ಲಿ ವಿಶೇಷತೆ ಎಂದರೆ ಈ ಕಂಪನಿಗಾಗಿ ನೀವು ಮನೆಯಲ್ಲಿಯೇ ಕುಳಿತು ಕೆಲಸ ಮಾಡಬಹುದಾಗಿದೆ. ಮನೆಯಲ್ಲಿಯೇ ಕುಳಿತು ನೀವು ಟಾಫಿ ಗಳನ್ನು ಟೆಸ್ಟ್ ಮಾಡಿ ಅದರ ವಿಶೇಷತೆ ಏನು ಹಾಗೂ ನ್ಯೂನ್ಯತೆ ಏನು ಎಂಬುದನ್ನು ತಿಳಿಸಬೇಕು. ಜೊತೆಗೆ ಅದರಲ್ಲಿ ಬೇರೆ ಯಾವ ಫ್ಲೇವರ್ ಅನ್ನು ಸೇರಿಸಬಹುದು ಎಂಬುದನ್ನು ತಿಳಿಸಬೇಕು.
ಕ್ಯಾಂಡಿ ಫನ್ ಹೌಸ್ ಕಂಪನಿ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಈ ನೌಕರಿಯ ಕುರಿತು ಜಾಹೀರಾತು ನೀಡಿದೆ. ಈ ನೌಕರಿಗೆ ಅರ್ಜಿ ಸಲ್ಲಿಸಲು ಫೆಬ್ರುವರಿ 15 ಕೊನೆಯ ದಿನಾಂಕವಾಗಿದೆ. ಹಾಗಾದರೆ ತಡ ಮಾಡದೆ ಕೂಡಲೇ ಕಂಪನಿಯ ವೆಬ್ ಸೈಟ್ ಗೆ ಭೇಟಿ ನೀಡಿ. ಲಕ್ಷಾಂತರ ಸಂಬಳ ನೀಡುವ ಈ ನೌಕರಿಗೆ ಅರ್ಜಿ ಸಲ್ಲಿಸಿ.