WhatsApp Alert! ನಿಮ್ಮ ವಾಟ್ಸ್ ಆಪ್ ಸಂದೇಶಗಳ ಮೇಲಿದೆ ಬೇರೆಯವರ ಕಣ್ಣು, ಹೀಗೆ ನಿಮ್ಮ ಖಾತೆಯನ್ನು ಸುರಕ್ಷಿತಗೊಳಿಸಿ
ನಿಮ್ಮ ವಾಟ್ಸ್ ಆಪ್ ಚಾಟ್ ಗಳನ್ನು ಸುರಕ್ಷಿತಗೊಳಿಸುವ ಒಂದು ಪ್ರಮುಖ ಮಾರ್ಗವೆಂದರೆ ಅದು two-factor authentication. ಇದನ್ನು ನೀವು ಸಕ್ರೀಯಗೊಳಿಸಬಹುದು. ಇದಕ್ಕಾಗಿ ನೀವು ನಿಮ್ಮ ವಾಟ್ಸ್ ಆಪ್ ಖಾತೆಗೆ ಭೇಟಿ ನೀಡಿ ಬಲ ಭಾಗದಲ್ಲಿ ನೀಡಲಾಗಿರುವ ಮೂರು ಚುಕ್ಕೆಗಳ(:) ಮೇಲೆ ಟ್ಯಾಪ್ ಮಾಡಿ. ಬಳಿಕ ಸೆಟ್ಟಿಂಗ್ಸ್ ವಿಭಾಗಕ್ಕೆ ಭೇಟಿ ನೀಡಿ. ಅಲ್ಲಿ ನಿಮಗೆ two-factor authentication ಆಯ್ಕೆ ಸಿಗಲಿದೆ.
ಒಂದೊಮ್ಮೆ ಈ ಆಯ್ಕೆ ದೊರೆತ ಬಳಿಕ ಅದನ್ನು ನೀವು ಸಕ್ರೀಯಗೊಳಿಸಬೇಕು. ಇದನ್ನು ಆಯ್ಕೆ ಮಾಡಿದಾಗ ನಿಮ್ಮ ಮೊಬೈಲ್ ಸಂಖ್ಯೆಗೆ 6 ಅಂಕಿಗಳ ಪಿನ್ ಬರಲಿದೆ. ಈ ಪಿನ್ ಬಳಸಿ ನೀವು ಈ ಆಯ್ಕೆಯನ್ನು ಸಕ್ರೀಯಗೊಳಿಸಬಹುದು. ಇದರ ಜೊತೆಗೆ ನೀವು ನಿಮ್ಮ ಇ-ಮೇಲ್ ಅನ್ನು ಕೂಡ ಬಳಸಬಹುದು. ಈಗ ನಿಮ್ಮ ಮೊಬೈಲ್ ಬೇರೆಯವರ ಕೈ ಸೇರಿದರೂ ಕೂಡ ನಿಮ್ಮ ದತ್ತಾಂಶ ಅಸುರಕ್ಷಿತತೆಯ ಸಾಧ್ಯತೆ ಕಡಿಮೆಯಾಗುತ್ತದೆ.
ಇದಕ್ಕೂ ಮೊದಲು ವಾಟ್ಸ್ ಆಪ್ ನಲ್ಲಿ ಯಾವುದೇ ರೀತಿಯ ಸಿಕ್ಯೋರಿಟಿ ಆಪ್ಶನ್ ಇರಲಿಲ್ಲ. ಇದೇ ಕಾರಣದಿಂದ ಯಾರು ಬೇಕಾದರೂ ನಿಮ್ಮ ಖಾತೆಗೆ ಎಂಟ್ರಿ ನೀಡಿ ನಿಮ್ಮ ಚಾಟ್ ಅನ್ನು ನೋಡಬಹುದಾಗಿತ್ತು. ಆದರೆ, ಇದೀಗ ನಿಮ್ಮ ಬಳಿ ಖಾತೆ ಲಾಕ್ ಮಾಡುವ ಆಪ್ಶನ್ ಕೂಡ ಇದೆ. ಇದೀಗ ನೀವು ನಿಮ್ಮ ಫೋನ್ ನ ಸೆಟ್ಟಿಂಗ್ಸ್ ವಿಭಾಗಕ್ಕೆ ಭೇಟಿ ನೀಡಿ ಪ್ರವೈಸಿ ಆಪ್ಶನ್ ನಲ್ಲಿ ಈ ಆಯ್ಕೆಯನ್ನು ಸಕ್ರೀಯಗೊಳಿಸಬಹುದು.
ಇದಲ್ಲದೆ ನೀವು ನಿಮ್ಮ ವಾಟ್ಸ್ ಆಪ್ ಖಾತೆಯಲ್ಲಿಯೂ ಕೂಡ ಫಿಂಗರ್ ಪ್ರಿಂಟ್ ಲಾಕ್ ಅಳವಡಿಸಬಹುದು. ಇದಕ್ಕಾಗಿ ನೀವು ವಾಟ್ಸ್ ಆಪ್ ನ ಸೆಟ್ಟಿಂಗ್ಸ್ ವಿಭಾಗಕ್ಕೆ ಭೇಟಿ ನೀಡಿ. ಬಳಿಕ ಅಲ್ಲಿರುವ ಪ್ರೈವೆಸಿ ಆಪ್ಶನ್ ನ ಕೆಳಭಾಗದಲ್ಲಿ ನಿಮಗೆ Fingerprint Lock ಕಾಣಿಸಿಕೊಳ್ಳಲಿದೆ. ಇದನ್ನು ಕೂಡ ನೀವು ಸಕ್ರೀಯಗೊಳಿಸಬಹುದು. ಇತರರಿಂದ ನೀವು ನಿಮ್ಮ ಚಾಟ್ ಅನ್ನು ಸುರಕ್ಷಿತಗೊಳಿಸುವುದೇ ಈ ಆಯ್ಕೆಗಳ ಪ್ರಮುಖ ಉದ್ದೇಶವಾಗಿದೆ.