WhatsApp ನೂತನ ನೀತಿಯಿಂದ ಅಪಾಯವೇನು?
ವಾಟ್ಸ್ ಆಪ್ ನೂತನವಾಗಿ ಪ್ರಕಟಿಸಿರುವ ನೀತಿಗಳ ಪ್ರಕಾರ ಕಂಪನಿ ನಿಮ್ಮಿಂದ ನಿಮ್ಮ ಡಿವೈಸ್ ಐಡಿ, ಬಳಕೆದಾರರ ಐಡಿ, ಫೋನ್ ನಂಬರ್, ಇ-ಮೇಲ್ ಐಡಿ, ಎಲ್ಲ ಕಾಂಟಾಕ್ಟ್ ಗಳ ಮಾಹಿತಿ ಇತ್ಯಾದಿಗಳನ್ನು ಪಡೆಯಲಿದೆ.
ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ WhatsApp, ನೀವು ನಿಮ್ಮ ಮೊಬೈಲ್ ನಿಂದ ನಡೆಸುವ ಎಲ್ಲ ವಹಿವಾಟುಗಳ ಮಾಹಿತಿ ಪಡೆಯಲಿದೆ. ಹೌದು, ನೂತನ ನಿಯಮಗಳ ಅನುಸಾರ WhatsApp ನಿಮ್ಮ ಮೊಬೈಲ್ ನ ಪೇಮೆಂಟ್ ಮಾಹಿತಿ, ಪರ್ಚೆಸ್ ಹಿಸ್ಟರಿ ಹಾಗೂ ಜಾಹೀರಾತು ದತ್ತಾಂಶಗಳನ್ನು ಸಂಗ್ರಹಿಸಲಿದೆ.
WhatsApp ನೂತನ ಪಾಲಸಿಯ ಪ್ರಕಾರ, ನೀವು ನಿಮ್ಮ ಮೊಬೈಲ್ ಫೋನ್ ನಿಂದ ನಡೆಸುವ ಮಾತುಕತೆಗಳನ್ನು ಸಹ ರಿಕಾರ್ಡ್ ಮಾಡಲಾಗುವದು. ಫೋನ್ ಮೂಲಕ ನಡೆಸಲಾಗುವ ಆಡಿಯೋ ಹಾಗೂ ವಿಡಿಯೋ ಕರೆಗಳನ್ನು ಸಹ ರಿಕಾರ್ಡ್ ಮಾಲಾಗುವುದು ಎಂದು ವಾಟ್ಸ್ ಆಪ್ ಸ್ಪಷ್ಟಪಡಿಸಿದೆ.
ಈ ಕುರಿತು ತನ್ನ ನೀತಿಯಲ್ಲಿ ಷರತ್ತೊಂದನ್ನು ಸೇರಿಸಿರುವ WhatsApp ನಿಮ್ಮ ಲೋಕೇಶನ್ ಗಳ ನಿರಂತರ ಮಾಹಿತಿ ಪಡೆಯಲಿದೆ. ಅಂದರೆ, ನೀವೆಲ್ಲೇ ಇದ್ದರು ಕೂಡ ವಾಟ್ಸ್ ಆಪ್ ನಿಮ್ಮನ್ನು ಟ್ರ್ಯಾಕ್ ಮಾಡಲಿದೆ.
ನಿಮ್ಮ ಮೊಬೈಲ್ ಫೋನ್ ಮೂಲಕ ಸಿಗುವ ಎಲ್ಲ ಮಾಹಿತಿಯನ್ನು Facebook ಹಾಗೂ Instagram ಜೊತೆಗೆ ಹಂಚಿಕೊಳ್ಳಲಾಗುವುದು ಎಂದು ವಾಟ್ಸ್ ಆಪ್ ತನ್ನ ನೀತಿಗಳಲ್ಲಿ ಸ್ಪಷ್ಟಪಡಿಸಿದೆ. ಆದರೆ, ಇದರಿಂದ ನಿಮ್ಮವೈಯಕ್ತಿಕ ಮಾಹಿತಿಗೆ ಧಕ್ಕೆ ಉಂಟಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಉದಾಹರಣೆಗೆ ನಿಮ್ಮ ಫೋನ್ ಮೂಲಕ ಪಡೆಯಲಾಗುವ ವಹಿವಾಟಿನ ಮಾಹಿತಿಯನ್ನು ಆಧರಿಸಿ ಫೇಸ್ಬುಕ್ ನಿಮಗೆ ಜಾಹೀರಾತುಗಳನ್ನು ಬಿತ್ತರಿಸಲಿದೆ. ಇದೇ ರೀತಿ ಇನ್ಸ್ಟಾ ಗ್ರಾಮ್ ನಲ್ಲಿಯೂ ಕೂಡ ಈ ಮಾಹಿತಿಯನ್ನು ಬಳಸಿ ನಿಮಗೆ ಹೆಚ್ಚುವರಿ ಜಾಹಿರಾತುಗಳನ್ನು ತೋರಿಸುವ ಮೂಲಕ ಉತ್ಪನ್ನಗಳ ಮಾರಾಟ ಪ್ರಯತ್ನ ನಡೆಯಲಿದೆ.
ವಾಟ್ಸ್ ಆಪ್ ಬಳಕೆದಾರರು ವಾಟ್ಸ್ ಆಪ್ ಬಳಸಲು ಈ ಷರತ್ತುಗಳನ್ನು ಒಪ್ಪಲೇಬೇಕು. ಇದನ್ನು ಬಿಟ್ಟರೆ ಅವರ ಬಳಿ ಬೇರೆ ದಾರಿಯೇ ಇಲ್ಲ. ಹೊಸ ನೀತಿಯನ್ನು ಒಪ್ಪಿಕೊಳ್ಳುವ ಬಳಕೆದಾರರು ಮಾತ್ರ ಭವಿಷ್ಯದಲ್ಲಿ ವಾಟ್ಸ್ ಆಪ್ ಬಳಸಬಹುದಾಗಿದೆ ಎಂಬ ಸ್ಪಷ್ಟ ಸಂಕೇತ ವಾಟ್ಸ್ ಆಪ್ ನೀಡಿದೆ. ಹೊಸ ನೀತಿ ಒಪ್ಪದೇ ಇರುವ ಬಳಕೆದಾರರ ಮೊಬೈಲ್ ನಲ್ಲಿ ಈ ಆಪ್ ಕಾರ್ಯನಿರ್ವಹಿಸುವುದಿಲ್ಲ.
ಒಂದು ವೇಳೆ ನಿಮಗೂ ಕೂಡ ವಾಟ್ಸ್ ಆಪ್ ಹೊಸ ನೀತಿಯ ಕುರಿತು ನೋಟಿಫಿಕೆಶನ್ ಬಂದಿದ್ದರೆ ನೀವು ಅದನ್ನು ಒಪ್ಪಿಕೊಳ್ಳಲೇಬೇಕು. ಪ್ರಸ್ತುತ ಬಳಕೆದಾರರಿಗೆ Accept Later ಆಯ್ಕೆ ಕೂಡ ನೀಡಲಾಗಿದೆ. ಆದರೆ ವಾಟ್ಸ್ ಆಪ್ ತನ್ನ ಹೊಸ ನೀತಿಯನ್ನು ಒಪ್ಪಿಕೊಳ್ಳಲು ಬಳಕೆದಾರರಿಗೆ ಫೆಬ್ರುವರಿ 8ರವರೆಗೆ ಕಾಲಾವಕಾಶ ನೀಡಿದೆ. ಫೆಬ್ರುವರಿ 8ರ ಬಳಿಕ ನೂತನ ನೀತಿಯನ್ನು ಒಪ್ಪಿಕೊಳ್ಳದ ಬಳಕೆದಾರರು ವಾಟ್ಸ್ ಆಪ್ ಬಳಸುವ ಹಾಗಿಲ್ಲ.