Corona Vaccine ಹಾಕಿಸಿಕೊಂಡ ಬಳಿಕ ಅಪ್ಪಿ-ತಪ್ಪಿಯೂ ಈ ಕೆಲ್ಸಾ ಮಾಡ್ಬೇಡಿ

Sat, 16 Jan 2021-6:47 pm,

Corona Vaccine - ವಿಜ್ಞಾನಿಗಳ ಪ್ರಕಾರ, ಒಬ್ಬ ವ್ಯಕ್ತಿಯು ಕರೋನಾ ಲಸಿಕೆ ಹಾಕಿಸಿಕೊಂಡ ಬಳಿಕ ಆತನಿಗೆ  ಎಂದಿಗೂ ಕರೋನಾ ಬರುವಿದಿಲ್ಲ ಎಂದು ಅರ್ಥವಲ್ಲ. ಅಜಾಗರೂಕತೆ ಅಥವಾ ಸೋಂಕಿತ ರೋಗಿಗಳ ಸಂಪರ್ಕದಿಂದಾಗಿ ವ್ಯಾಕ್ಸಿನೇಷನ್ ಮಾಡಿದ ನಂತರವೂ ಕರೋನಾದಿಂದ ಸೋಂಕಿಗೆ ಒಳಗಾಗುವ ಅಪಾಯವಿದೆ. ಹೀಗಾಗಿ, ಲಸಿಕೆ ಹಾಕಿದ ನಂತರವೂ ಜನರು ಮಾಸ್ಕ್ ಅನ್ವಯಿಸುವುದರ ಜೊತೆಗೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ವಹಿಸಬೇಕಾಗುತ್ತದೆ.

Corona Vaccine - ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ವ್ಯಾಕ್ಸಿನೇಷನ್ ಕರೋನಾ ವೈರಸ್ ವಿರುದ್ಧ ಸಂಪೂರ್ಣ ರಕ್ಷಣೆ ನೀಡುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಹೆಚ್ಚಿನ ಸಂಖ್ಯೆಯ ಜನರು ಕರೋನಾ ಲಸಿಕೆ ಪಡೆಯುವವರೆಗೆ ಕರೋನಾ ಮಾರ್ಗಸೂಚಿಗಳನ್ನು ಅನುಸರಿಸುವುದು ಜಾಣತನವಾಗಿದೆ. ಲಸಿಕೆ ಪಡೆದ ನಂತರ ಸಂಗತಿಗಳು ನಿಧಾನಕ್ಕೆ ಸಾಮಾನ್ಯಕ್ಕೆ ಮರಳಲಿವೆ. ಆದರೆ ಜನರು ತಮ್ಮ ಜೀವನಶೈಲಿಯನ್ನು ಮೊದಲಿನಂತೆ ಮಾಡಲು ಆತುರಪಡಬಾರದು ಎಂದು ಸಂಘಟನೆ ಹೇಳಿದೆ.

Corona Vaccine - ತಜ್ಞರ ಪ್ರಕಾರ, ನೀವು ಲಸಿಕೆಯ ಎರಡು ಪ್ರಮಾಣವನ್ನು ತೆಗೆದುಕೊಂಡಿದ್ದರೆ, ಕರೋನಾ ವೈರಸ್ ಸೋಂಕಿಗೆ ಒಳಗಾಗುವ ಅಪಾಯ ಬಹುತೇಕ ಕಡಿಮೆಯಾಗುತ್ತದೆ. ವ್ಯಾಕ್ಸಿನೇಷನ್ ಕಾರಣ, ಕಿರಾಣಿ ಅಂಗಡಿಯಲ್ಲಿ ಅಥವಾ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ನೀವು ಮೊದಲಿಗಿಂತ ಸುರಕ್ಷಿತವಾಗಿರುತ್ತೀರಿ. ಆದರೆ ಮಾಸ್ಕ್ ಬಳಕೆ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ನೀವು ಈ ಸುರಕ್ಷತೆಯನ್ನು ಇನ್ನಷ್ಟು ಖಾತರಿಪಡಿಸಬಹುದು.

Corona Vaccine - ಲಸಿಕೆ ಹಾಕಿಸಿಕೊಂಡ ಬಳಿಕವೂ ಕೂಡ ಒಂದು ವೇಳೆ ನೀವು ಸೋಂಕಿಗೆ ಒಳಗಾಗಿದ್ದರೆ, ನೀವು ಸೋಂಕನ್ನು ಇತರರಿಗೆ ಹರಡಬಹುದು ಎಂದು ಸಾಂಕ್ರಾಮಿಕ ರೋಗ ತಜ್ಞರು ಹೇಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯುವಿಕೆ ಈ ವೈರಸ್ ಸೋಂಕಿನ ಹರಡುವಿಕೆಯನ್ನು ತಡೆಯಲಿದೆ. ಆದ್ದರಿಂದ, ವ್ಯಾಕ್ಸಿನೇಷನ್ ಮಾಡಿದ ನಂತರವೂ ನಾವು ಜಾಗರೂಕರಾಗಿರುವುದು ಆವಶ್ಯಕವಾಗಿದೆ.  ಒಂದು ವೇಳೆ ನಿಮ್ಮ ತಂಡದಲ್ಲಿರುವ ಪ್ರತಿಯೊಬ್ಬರೂ ಕೂಡ ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡಿದ್ದರೆ, ನೀವು ಅವರೊಂದಿಗೆ ಸಾಮಾಹ್ಯವಾಗಿ ವರ್ತಿಸಬಹುದು ಎಂದು ಹೇಳಿದ್ದಾರೆ. ಆದರೆ , ನಿಮ್ಮ ಸುತ್ತಮುತ್ತಲಿನ ಜನರ ಬಗ್ಗೆ ಒಂದು ವೇಳೆ ನಿಮಗೆ ಖಾತರಿ ಇಲ್ಲದಿದ್ದರೆ, ಅವರೊಂದಿಗಿನ ಸಂಭಾಷಣೆಯ ಸಂದರ್ಭದಲ್ಲಿ ನೀವು ಮಾರ್ಗಸೂಚಿಗಳನ್ನು ಅನುಸರಿಸುವುದು ಅನಿವಾರ್ಯವಾಗಲಿದೆ.

Corona Vaccine - ಈ ಕುರಿತು ಹೇಳಿಕೆ ನೀಡಿರುವ ತಜ್ಞರು ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ವ್ಯಾಕ್ಸಿನ್ ಹಾಕಿಸಿದ ಬಳಿಕ ಹರ್ಡ್ ಇಮ್ಯೂನಿಟಿ ಪರಿಸ್ಥಿತಿ ಎದುರಾಗುತ್ತದೆ. ಆಗ ಮಾತ್ರ ಕೊರೊನಾ ಹಿಂದಿನ ಲೈಫ್ ಸ್ಟೈಲ್ ಅನ್ನು ನಾವು ನಮ್ಮ ಜೀವನದಲ್ಲಿ ಮರುಕಳಿಸಬಹುದು ಮತ್ತು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯುವಿಕೆಯನ್ನು ನಾವು ನಮ್ಮ ಜೀವನದಿಂದ ದೂರಮಾಡಬಹುದು. AIIMS ತಜ್ಞರು ಹರ್ಡ್ ಇಮ್ಯೂನಿಟಿ ಪಡೆಯಲು ಶೇ.70 ರಷ್ಟು ಜನಸಂಖ್ಯೆಗೆ ಮೊದಲು ನಾವು ಲಸಿಕೆ ಹಾಕಿಸಬೇಕು. ಆದರೆ, ಇದಕ್ಕೆ ಸುಮಾರು ಒಂದು ವರ್ಷ ಕಾಲಾವಕಾಶ ಬೇಕಾಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link