WhatsApp Latest Update - WhatsAppನಲ್ಲಿ ಬರುತ್ತಿದೆ ಈ ಅದ್ಭುತ ವೈಶಿಷ್ಟ್ಯ

Mon, 08 Feb 2021-4:11 pm,

ಟೆಕ್ ಸೈಟ್  WABetaInfo ಪ್ರಕಾರ  WhatsApp ಮ್ಯೂಟ್ (WhatsApp Mute Video Update) ವೈಶಿಷ್ಟ್ಯವನ್ನು ವೀಡಿಯೊಗೆ ಪರಿಚಯಿಸುತ್ತಿದೆ.

ವರದಿಗಳ ಪ್ರಕಾರ, ವೀಡಿಯೊ ಫೈಲ್‌ಗಳನ್ನು ಹಂಚಿಕೊಳ್ಳುವಾಗ ಈ ಹೊಸ ವೈಶಿಷ್ಟ್ಯದ ಕೆಲಸಕ್ಕೆ ಬರಲಿದೆ. ಈಗ ನೀವು ಸಂದೇಶವನ್ನು ಕಳುಹಿಸುವಾಗ ವೀಡಿಯೊವನ್ನು ಮ್ಯೂಟ್ ಮಾಡಲು ಸಾಧ್ಯವಾಗಲಿದೆ.  

ಈ ಮೊದಲು ಯಾವುದೇ ಒಂದು ವಿಡಿಯೋವನ್ನು ಬಳಕೆದಾರರು ಹಂಚಿಕೊಂಡರೆ, ಆ ವಿಡಿಯೋ ಸ್ವಯಂಚಾಲಿತವಾಗಿ on ಆಗುತ್ತಿತ್ತು.  

ಒಂದು ವೇಳೆ ನೀವೂ ಕೂಡ ಈ ಹೊಸ ವೈಶಿಷ್ಟ್ಯವನ್ನು (WhatsApp New Update Today) ಬಳಸಲು ಬಯಸುತ್ತಿದ್ದರೆ, ನಿಮ್ಮ ಮೊಬೈಲ್ ನಲ್ಲಿರುವ WhatsApp ಅನ್ನು ನೀವು 2.21.3.13 ವರ್ಶನ್ ಗೆ ಅಪ್ಡೇಟ್ ಮಾಡಬೇಕು, ಆದರೆ ಇದೊಂದು ಬೀಟಾ ವರ್ಶನ್ ಆಗಿದೆ ಎಂಬುದು ನೆನಪಿರಲಿ.  

ವೀಡಿಯೊವನ್ನು ಮ್ಯೂಟ್ ಮಾಡಲು, ವೀಡಿಯೊವನ್ನು ಪ್ಲೇ ಮಾಡುವಾಗ ನೀವು ಎಡಭಾಗದಲ್ಲಿ ಸ್ಪೀಕರ್ ಐಕಾನ್ ಅನ್ನು ನೋಡುತ್ತೀರಿ. ಇದನ್ನು ಕ್ಲಿಕ್ ಮಾಡಿದಾಗ, ವೀಡಿಯೊದ ಧ್ವನಿ ಮ್ಯೂಟ್ ಆಗಲಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link