World Test Championshipನಿಂದ ಭಾರತ ಹೊರಹೊಗಲಿದೆಯೇ?
ಚೆನ್ನೈನಲ್ಲಿ ಮುಕ್ತಾಯಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು ಸೋಲಿಸುವ ಅಡ್ವಾಂಟೆಜ್ ಜೋ ರೂಟ್ ನಾಯಕತ್ವದ ಇಂಗ್ಲೆಂಡ್ ಕ್ರಿಕೆಟ್ ತಂಡ ಪಡೆದುಕೊಂಡಿದೆ. WTC ಅಂಕಪಟ್ಟಿಯಲ್ಲಿ ಇಂಗ್ಲೆಂಡ್ ತಂಡ ಶೇ.70.2 ಹಾಗೂ 442 ಅಂಕಗಳ ಸಹಾಯದಿಂದ ಅಗ್ರಸ್ಥಾನಕ್ಕೆ ತಲುಪಿದೆ. ಈ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಭಾರತವನ್ನು ಸೋಲಿಸಿದರೆ, ನಂತರ ತಮ್ಮ ತಾಯ್ನಾಡಿನಲ್ಲಿ ಡಬ್ಲ್ಯೂಟಿಸಿ ಫೈನಲ್ ಆಡಲು ಅದಕ್ಕೆ ಸುವರ್ಣಾವಕಾಶವಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಸರಣಿಯಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಯಾವುದೇ ತೊಂದರೆ ಇಲ್ಲ. ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ದಕ್ಷಿಣ ಆಫ್ರಿಕಾ ಪ್ರವಾಸ ರದ್ದುಗೊಂಡ ಬಳಿಕ, ಕೇನ್ ವಿಲಿಯಮ್ಸನ್ ಅವರ ತಂಡವು ಈಗಾಗಲೇ ಡಬ್ಲ್ಯೂಟಿಸಿ ಫೈನಲ್ಸ್ಗೆ ಅರ್ಹತೆ ಪಡೆದಿದೆ. ನ್ಯೂಜಿಲೆಂಡ್ ಪ್ರಸ್ತುತ ಶೇ.70 ಮತ್ತು 420 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಮೊದಲು ಭಾರತ ವಿರುದ್ಧದ ತವರು ಸರಣಿಯಲ್ಲಿ 2–1ರ ಸೋಲುಂಡು ನಂತರ ದಕ್ಷಿಣ ಆಫ್ರಿಕಾದ ಪ್ರವಾಸವನ್ನು ಮುಂದೂಡುವುದು ಆಸ್ಟ್ರೇಲಿಯಾ ತಂಡಕ್ಕೆ ನಷ್ಟ ತಂದಿದೆ. ಆಸ್ಟ್ರೇಲಿಯಾದ ಭವಿಷ್ಯವು ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಸರಣಿಯನ್ನು ಅವಲಂಬಿಸಿರುತ್ತದೆ. ಪ್ರಸ್ತುತ, ಆಸ್ಟ್ರೇಲಿಯಾ 69.2 ಪ್ರತಿಶತ ಮತ್ತು 332 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತ ಭಾರತ ತಂಡವು ಡಬ್ಲ್ಯುಟಿಸಿ ಫೈನಲ್‌ಗೆ ತಲುಪುವ ಭರವಸೆಯನ್ನು ಹೊಂದಿದೆ. ಫೈನಲ್ ಪಂದ್ಯವನ್ನು ಆಡಲು ಭಾರತವು ಇಂಗ್ಲೆಂಡ್ ಅನ್ನು 2-1 ಅಥವಾ 3-1 ಅಂತರದಲ್ಲಿ ಸೋಲಿಸಿ ಸರಣಿಯನ್ನು ತನ್ನದಾಗಿಸಬೇಕು. ಆದರೆ ಭಾರತವು ಈಗ ಇಂಗ್ಲೆಂಡ್ ವಿರುದ್ಧದ ಒಂದು ಟೆಸ್ಟ್ ಸೋಲುವುದರಿಂದ ಕೂಡ ಪಾರಾಗಬೇಕಿದೆ. ಏಕೆಂದರೆ ಒಂದು ಟೆಸ್ಟ್ ಸೋತ ನಂತರ ಭಾರತಕ್ಕೆ ಲಾರ್ಡ್ಸ್ ಬಾಗಿಲು ಮುಚ್ಚಲಿದೆ.