ಏನ್ ಮುದ್ದಾಗಿದ್ದಾಳೆ ದೀಪಿಕಾ ಪುತ್ರಿ..! ಕೊನೆಗೂ ನಾಮಕರಣದಂದೇ ಮಗುವಿನ ಫುಲ್ ಫೇಸ್ ರಿವೀಲ್ ಮಾಡಿದ ದೀಪಿಕಾ-ರಣವೀರ್... ಫೋಟೋ ನೋಡಿ
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ಇತ್ತೀಚೆಗೆ ಅಂದರೆ ಗಣೇಶ ಹಬ್ಬದ ಸಂದರ್ಭದಲ್ಲಿ ಮಹಾಲಕ್ಷ್ಮೀಯನ್ನು ತಮ್ಮ ಮನೆಗೆ ಬರಮಾಡಿಕೊಂಡಿದ್ದರು. ಹಬ್ಬದ ಮರುದಿನವೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ದೀಪಿಕಾ, ತಮ್ಮ ಮಗುವಿಗೆ ʼದುವಾʼ ಎಂದು ಹೆಸರಿಟ್ಟಿದ್ದರು.
ದುವಾ ಎಂದರೆ ಆಶೀರ್ವಾದ ಎಂದರ್ಥ. ಇದೀಗ ಈ ಮಗುವಿನ ನಾಮಕರಣ ಶಾಸ್ತ್ರದ ಫೋಟೋ ರಿವೀಲ್ ಆಗಿದ್ದು, ಮಗುವಿನ ಫೋಟೋ ಕೂಡ ಬಹಿರಂಗಗೊಂಡಿದೆ.
ದೀಪಿಕಾ ಮತ್ತು ರಣವೀರ್ ಅವರ ಹೊಸ ಮನೆಯಲ್ಲಿ ಮಗುವಿನ ನಾಮಕರಣ ಶಾಸ್ತ್ರ ನಡೆದಿದೆ ಎನ್ನಲಾಗಿದೆ. ಈ ಫೋಟೋಗಳು ನಾಮಕರಣ ಸಮಾರಂಭದ್ದು ಎನ್ನಲಾಗಿದ್ದು, ಸ್ಪಷ್ಟತೆ ಇಲ್ಲ. ಜೊತೆಗೆ ಇದನ್ನು ಗಮನವಿಟ್ಟು ನೋಡಿದರೆ ಮಾರ್ಫ್ ಮಾಡಿರುವ ಫೋಟೋದಂತೆ ಕಾಣಿಸುತ್ತಿದೆ.
ಆದರೆ ಸಾಮಾನ್ಯವಾಗಿ ಹಿಂದೂ ಸಂಸ್ಕೃತಿಯಲ್ಲಿ, ನಾಮಕರಣ ಸಮಾರಂಭವು ನವಜಾತ ಶಿಶು ಜನಿಸಿದ 11 ನೇ ದಿನ ಅಥವಾ 12 ನೇ ದಿನದ ನಡೆಸಲಾಗುತ್ತದೆ. ಇನ್ನೂ ಕೆಲವೆಡೆ ತಿಂಗಳಿನವರೆಗೆ ಕಾಯಲಾಗುತ್ತದೆ.
ದೀಪಿಕಾ ಮತ್ತು ರಣವೀರ್ ತಮ್ಮ ಮಗಳು ಮಾಡುವ ಕೀಟಲೆ ಬಗ್ಗೆ ಆಗಾಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಇನ್ನು ತಮ್ಮ ಮಗುವಿನ ಗೌಪ್ಯತೆ ಕಾಪಾಡಿ ಎಂದು ಮನವಿ ಮಾಡಿದ್ದರು ಸಹ, ನಾಮಕರಣ ಸಮಾರಂಭದ ಕೆಲವು ಗ್ಲಿಂಪ್ಸ್‌ನ್ನು ಹಂಚಿಕೊಂಡಿದ್ದಾರಂತೆ ದೀಪ್‌ವೀರ್ ಜೋಡಿ.