ವಿಜಯ್ ದೇವರಕೊಂಡ ತಂಗಿ ಯಾರು ಗೊತ್ತಾ? ಈಕೆಯೂ ಸ್ಟಾರ್ ನಟಿ! ರಶ್ಮಿಕಾಗಿಂತಲೂ ಸಖತ್ ಸ್ವೀಟ್ ಆಂಡ್ ಕ್ಯೂಟ್ ಈಕೆ

Sun, 12 May 2024-3:00 pm,

ವೃತ್ತಿಜೀವನದ ಆರಂಭದಲ್ಲಿ, ವಿಜಯ್ ದೇವರಕೊಂಡ ಸಿನಿಮಾಗಳಲ್ಲಿ ಸಣ್ಣ ಪುಟ್ಟಪಾತ್ರಗಳನ್ನು ನಿರ್ವಹಿಸಿದ್ದರು. ಪೆಳ್ಳಿ ಚೂಪುಲು ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ವಿಜಯ್ ನಂತರ ಸಂದೀಪ್ ರೆಡ್ಡಿ ವಂಗಾ ನಿರ್ಮಿಸಿದ ಅರ್ಜುನ್ ರೆಡ್ಡಿ ಚಿತ್ರದ ಮೂಲಕ ಬ್ಲಾಕ್ ಬಸ್ಟರ್ ಹಿಟ್ ಪಡೆದರು

ಆ ನಂತರ ಪರಶುರಾಮ್ ನಿರ್ದೇಶನದ ಗೀತ ಗೋವಿಂದಂ ಚಿತ್ರದ ಮೂಲಕ ವಿಜಯ್ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬಂದಿದ್ದರು. ಫ್ಯಾಮಿಲಿ ಎಂಟರ್ ಟೈನರ್ ಆಗಿ ಬಂದ ಈ ಚಿತ್ರ ಬಾಕ್ಸ್ ಆಫೀಸ್’ನಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ಇದರಲ್ಲಿ ಸುಬ್ಬರಾಜು, ರಾಹುಲ್ ರಾಮಕೃಷ್ಣ ಮತ್ತು ವೆನ್ನೆಲ ಕಿಶೋರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ಮ್ಯೂಸಿಕಲ್ ಹಿಟ್ ಸಿನಿಮಾದಲ್ಲಿ ವಿಜಯ್ ಸಹೋದರಿಯಾಗಿ ನಟಿಸಿದ್ದ ಹುಡುಗಿ ತೆಲುಗು ಪ್ರೇಕ್ಷಕರಿಗೆ ಸಖತ್ ಮೆಚ್ಚುಗೆಯಾಗಿದ್ದರು. ಈ ಚಿತ್ರದ ಮೂಲಕ ಆಕೆಗೆ ವಿಶೇಷ ಮನ್ನಣೆ ಸಿಕ್ಕಿದೆ. ಇದಾದ ನಂತರ ಹಲವು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ.

ಜೊತೆಗೆ ಈಕೆಯನ್ನು ವಿಜಯ್ ದೇವರಕೊಂಡ ತಂಗಿ ಎಂದೇ ಕರೆಯಲಾಯಿತು. ಆದರೆ ಈಕೆ ಒಡಹುಟ್ಟಿದ ಸಹೋದರಿಯಲ್ಲ. ನಾವಿಂದು ಆಕೆ ಯಾರು? ಆಕೆಯ ಹೆಸರೇನು? ಎಂಬೆಲ್ಲಾ ವಿಚಾರದ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಗೀತ ಗೋವಿಂದಂ ಚಿತ್ರದಲ್ಲಿ ವಿಜಯ್‌ ತಂಗಿಯಾಗಿ ಕಾಣಿಸಿಕೊಂಡ ಹುಡುಗಿಯ ಹೆಸರು ಮೌರ್ಯನಿ. ಪಿಯುಸಿ ಓದುವಾಗ ಸಿನಿಮಾದಲ್ಲಿ ಅವಕಾಶ ಪಡೆದ ಮೌರ್ಯನಿ ಚಿಕ್ಕವಯಸ್ಸಿನಲ್ಲೇ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟವಳು. 2016 ರಲ್ಲಿ ಅರ್ಧನಾರಿ ಚಿತ್ರದ ಮೂಲಕ ತೆಲುಗು ತೆರೆಗೆ ಪರಿಚಯವಾದರು. ಆದರೆ ಈ ಸಿನಿಮಾ ಅಷ್ಟೊಂದು ಹೆಸರು ಮಾಡಿರಲಿಲ್ಲ.

ಆದರೆ ಇದರಲ್ಲಿ ಮೌರ್ಯನಿ ಅಭಿನಯಕ್ಕೆ ಉತ್ತಮ ಪ್ರಶಂಸೆ ವ್ಯಕ್ತವಾಗಿತ್ತು. ಆ ನಂತರ ತೆಲುಗಿನಲ್ಲಿ ಸಾಲು ಸಾಲು ಅವಕಾಶಗಳಿಂದ ಬ್ಯುಸಿಯಾದರು. ತೆಲುಗಿನ ಅಲ್ಲರಿ ನರೇಶ್ ಅಭಿನಯದ ಇಂಟ್ಲೋ ದೆಯ್ಯಂ ನಾಕೇಂ ಭಯ್ಯಾ ಚಿತ್ರದಲ್ಲಿ ಎರಡನೇ ನಾಯಕಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಭೂತದ ಪಾತ್ರವನ್ನು ನಿರ್ವಹಿಸಿದ್ದರು.

ಇವುಗಳಲ್ಲದೆ, ತೆಲುಗು ಚಿತ್ರಗಳಾದ ನೆಲ್ಲೂರಿ ಪೆದ್ದರೆಡ್ಡಿ, ಗೀತಾ ಗೋವಿಂದಂ, ಜಾನಕಿ ರಾಮಡು, ಕ್ರ್ಯಾಕ್, ದೇವರಕೊಂಡಂಲೋ ವಿಜಯ್ ಪ್ರೇಮಕಥಾ, ಸುಂದರಾಂಗುಡು, ಅಂದರು ಬಾಗುಂಡಲಿ ಅಂದುಲೊ ನೇನುಂಡಲಿ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ವಿಜಯ್ ದೇವರಕೊಂಡ ಅಭಿನಯದ ಗೀತ ಗೋವಿಂದಂ ಚಿತ್ರದ ಮೂಲಕ ಮೌರ್ಯನಿ ಉತ್ತಮ ಮನ್ನಣೆ ಗಳಿಸಿದರು.

ಇನ್ನು ಮೌರ್ಯನಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಫೋಟೋಶೂಟ್‌ ಮತ್ತು ರೀಲ್ಸ್ ಹಂಚಿಕೊಳ್ಳುತ್ತಾ ಯಾವಾಗಲೂ ಸಕ್ರಿಯವಾಗಿರುತ್ತಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link