Photos: ಲಾಲ್​ಬಾಗ್​ನಲ್ಲಿ ಪುಷ್ಪಗಳಿಂದ `ಜಯಚಾಮರಾಜ ಒಡೆಯರ್ ಜೀವನ` ಅನಾವರಣ!

Sun, 18 Aug 2019-4:59 pm,

ಮೈಸೂರಿನ ಅರಸರಾದ ಜಯಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವ ಪ್ರಯುಕ್ತ ಅವರ ಗೌರವಾರ್ಥವಾಗಿ ಲಾಲ್ ಬಾಗ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಿರುವ 210ನೇ ಆವೃತ್ತಿಯ ಪುಷ್ಪ ಪ್ರದರ್ಶನವನ್ನು ಅವರಿಗೆ ಅರ್ಪಿಸಲಾಗಿದೆ.   

ಮೈಸೂರಿನ ಜಯಚಾಮರಾಜ ವೃತ್ತದಲ್ಲಿರುವ ಮಂಟಪದಂತೆಯೇ ಹೂವುಗಳಿಂದ ಮಂಟಪವನ್ನು ಸ್ಥಾಪಿಸಿ, ಒಡೆಯರ್ ಅವರ ಪ್ರತಿಮೆ ಇರಿಸಲಾಗಿದೆ. ಅಷ್ಟೇ ಅಲ್ಲದೆ ಅವರಿಗೆ ಇಷ್ಟವಾದ ಸಂಗೀತ ಪರಿಕರಗಳಾದ ತಬಲಾ, ವಯೊಲಿನ್, ವೀಣೆಗಳಿಂದ ಅಲಂಕರಿಸಲಾಗಿದೆ. 

ಮತ್ತೊಂದೆಡೆಯಲ್ಲಿ ಮೈಸೂರು ಅರಮನೆಯ ಸಿಂಹಾಸನ, ಎರಡು ಆನೆಗಳನ್ನು ಹೂವುಗಳಿಂದ ಅಲಂಕರಿಸಲಾಗಿದೆ. 

ಗುಲಾಬಿ ಹೂವಿನಿಂದ ಅಲಂಕೃತವಾದ ಆನೆ.

ಪುಷ್ಪ ಪ್ರದರ್ಶನದಲ್ಲಿರುವ ಜಯಚಾಮರಾಜ ಒಡೆಯರ್ ಮೂರ್ತಿ

ಜಯಚಾಮರಾಜ ಒಡೆಯರ್ ಅವರ ವಿವಿಧ ವೇಷಭೂಷಣಗಳ ನಾಲ್ಕು ಮೂರ್ತಿಗಳನ್ನೂ ಸಹ ಇರಿಸಲಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತಿವೆ. ಅಷ್ಟೇ ಅಲ್ಲದೆ, ರಾಷ್ಟೀಯ ಕ್ಷಯ ರೋಗ ಸಂಸ್ಥೆ, ದೇವರಾಜ ಮಾರುಕಟ್ಟೆ ಹಾಗೂ ಪಂಚವಾರ್ಷಿಕ ಯೋಜನೆಯ ಪ್ರತಿಕೃತಿಗಳನ್ನೂ ಸಹ ಇರಿಸಲಾಗಿದೆ. 

ರಾಷ್ಟ್ರೀಯ ಕ್ಷಯರೋಗ ಸಂಸ್ಥೆ ಪ್ರತಿಕೃತಿ

ದೇವರಾಜ ಮಾರುಕಟ್ಟೆ ಪ್ರತಿಕೃತಿ

ಪಂಚವಾರ್ಷಿಕ ಯೋಜನೆ

ಮೈಸೂರು ದೊರೆ ಚಾಮರಾಜ ಒಡೆಯರ್ 

ಗಾಜಿನ ಮನೆಯ ನಾಲ್ಕೂ ಮೂಲೆಗಳಲ್ಲಿ ಹೂವಿನ ಪಿರಮಿಡ್ ನಿರ್ಮಿಸಿ ತುದಿಯಲ್ಲಿ ಒಡೆಯರ್ ಅವರ ಚಿತ್ರವನ್ನು ಪ್ರದರ್ಶಿಸಲಾಗಿದೆ.   

ಲಾಲ್ ಬಾಗ್ ನ ಗಾಜಿನ ಮನೆಯಲ್ಲಿ ಜಯಚಾಮರಾಜ ಒಡೆಯರ್ ಅವರ ಜೀವನ, ಐತಿಹಾಸಿಕ ಮಹತ್ವ ಸಾರುವ ನೂರಕ್ಕೂ ಹೆಚ್ಚು ಫೋಟೋಗಳನ್ನು ಪ್ರದರ್ಶಿಸಲಾಗಿದೆ. 

ಒಡೆಯರ್ ಅವರ ಪುಷ್ಪ ಮಂಟಪ ನಿರ್ಮಾಣಕ್ಕಾಗಿ 1.5 ಲಕ್ಷ ಕೆಂಪು ಗುಲಾಬಿ, 50 ಸಾವಿರ ಬಿಳಿ ಗುಲಾಬಿ, 50 ಸಾವಿರ ಕೇಸರಿ ಬಣ್ಣದ ಗುಲಾಬಿ ಬಳಸಲಾಗಿದೆ.

ಸ್ವಾತಂತ್ರೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಈ ಪುಷ್ಪ ಪ್ರದರ್ಶನದಲ್ಲಿ ಸುಮಾರು 4 ಲಕ್ಷ ಗುಲಾಬಿ, ಬೆಗೊನಿಯಾ, ಚೆಂಡು ಹೂ, ಜೀನಿಯಾ ಸೇರಿದಂತೆ ಹಲವು ಹೂಗಳನ್ನು ಬಳಸಲಾಗಿದೆ. ಒಟ್ಟಾರೆಯಾಗಿ ಜಯಚಾಮರಾಜ ಒಡೆಯರ್ ಜೀವನಾಧಾರಿತ ಈ ಪುಷ್ಪ ಪ್ರದರ್ಶನ ನೋಡುಗರ ಕಣ್ಮನ ಸೆಳೆಯುತ್ತಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link