ನಿಮ್ಗೆ ಕೈ ಮುಗಿತೀನಿ, ಸುರಕ್ಷಿತ ಸ್ಥಳಗಳಿಗೆ ನಡೀರಿ: ಫೋನಿ ಚಂಡಮಾರುತಕ್ಕೆ ಮುನ್ನ ಜನತೆಗೆ ಐಪಿಎಸ್ ಅಧಿಕಾರಿ ಮನವಿ- Pics

Fri, 03 May 2019-2:32 pm,

ಚಂಡಮಾರುತ ಮುನ್ಸೂಚನೆ ಹಿನ್ನೆಲೆಯಲ್ಲಿ ಒಡಿಶಾದ ಕರಾವಳಿ ಭಾಗಗಳಲ್ಲಿ ಅಧಿಕಾರಿಗಳು ಜನತೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ನೀಡಿದರು. ಚಂಡಮಾರುತದ ಕಾರಣ, ಒಡಿಶಾ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಬ್ರಹ್ಮಪುರ ಎಸ್ಪಿ (ಒಡಿಶಾ), ಐಪಿಎಸ್ ಪಿನಾಕ್ ಮಿಶ್ರಾ ಜನತೆಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮನವಿ ಮಾಡಿದರು.

ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕರಾವಳಿ ಭಾಗದಲ್ಲಿ ಸುಮಾರು 50 ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. ಅಂತೆಯೇ ಪುರಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ 28 ತಂಡಗಳನ್ನು ನಿಯೋಜಿಸಲಾಗಿದೆ.(Photo:IANS)

ಶುಕ್ರವಾರ ಬೆಳಿಗ್ಗೆ ಒಡಿಶಾದ ಕರಾವಳಿ ಭಾಗಕ್ಕೆ ಅಪ್ಪಳಿಸಿದ ಫಾನಿ ಚಂಡಮಾರುತ ಮಧ್ಯಾಹ್ನದವರೆಗೂ ಇರುವ ಸಾಧ್ಯತೆ ಇದೆ. ಬಳಿಕ ಪಶ್ಚಿಮ ಬಂಗಾಳದ ಕರಾವಳಿ ಭಾಗಗಳೆಡೆಗೆ ಚಲಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.(Photo: Reuters)  

ಒಡಿಶಾದ ಗಂಜಾಂ, ಗಜಪತಿ, ಖುರ್ದ ಪುರಿ, ಜಗತ್ ಸಿಂಗ್ ಪುರ, ಕೆನ್ದ್ರಪಾರಾ, ಭದ್ರಕ್, ಜೈಪುರ್ ಮತ್ತು ಬಾಲಾಸೂರ್ ಜಿಲ್ಲೆಗಳಲ್ಲಿ ಫಾನಿ ಚಂಡಮಾರುತ ಅಪ್ಪಳಿಸುವ ಭೀತಿಯಿದೆ. ಅಂತೆಯೇ, ಪಶ್ಚಿಮ ಬಂಗಾಳದ ದಕ್ಷಿಣ ಮತ್ತು ಉತ್ತರ 24 ಪರಗಣ, ಹೌರಾ, ಹೂಗ್ಲಿ, ಆಂಧ್ರಪ್ರದೇಶದ ಶ್ರೀಕಾಕುಳಂ, ವಿಜಯನಗರಂ ಮತ್ತು ವಿಶಾಖಪಟ್ಟಣಂ ಜಿಲ್ಲೆಗಳಿಗೂ ಸಹ ಚಂಡಮಾರುತದಿಂದ ತೊಂದರೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. (Photo:Reuters)

ಒಡಿಶಾದ ಗಂಜಾಂ, ಗಜಪತಿ, ಖುರ್ದ ಪುರಿ, ಜಗತ್ ಸಿಂಗ್ ಪುರ, ಕೆನ್ದ್ರಪಾರಾ, ಭದ್ರಕ್, ಜೈಪುರ್ ಮತ್ತು ಬಾಲಾಸೂರ್ ಜಿಲ್ಲೆಗಳಲ್ಲಿ ಫಾನಿ ಚಂಡಮಾರುತ ಅಪ್ಪಳಿಸುವ ಭೀತಿಯಿದೆ. ಅಂತೆಯೇ, ಪಶ್ಚಿಮ ಬಂಗಾಳದ ದಕ್ಷಿಣ ಮತ್ತು ಉತ್ತರ 24 ಪರಗಣ, ಹೌರಾ, ಹೂಗ್ಲಿ, ಆಂಧ್ರಪ್ರದೇಶದ ಶ್ರೀಕಾಕುಳಂ, ವಿಜಯನಗರಂ ಮತ್ತು ವಿಶಾಖಪಟ್ಟಣಂ ಜಿಲ್ಲೆಗಳಿಗೂ ಸಹ ಚಂಡಮಾರುತದಿಂದ ತೊಂದರೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link