ಹಿರಿಯ ನಟಿ ಮಾಧವಿ ಮೂವರು ಪುತ್ರಿಯರೂ ಒಬ್ಬರನ್ನೊಬ್ಬರು ಮೀರಿಸುವ ಸುಂದರಿಯರು!ಇಲ್ಲಿವೆ ನೋಡಿ ಫೋಟೋಸ್
ಒಂದಾನೊಂದು ಕಾಲದಲ್ಲಿ ಚಿತ್ರರಂಗದಲ್ಲಿ ಸ್ಟಾರ್ ಗಳಾಗಿ ಮಿಂಚಿ,ನಂತರ ಸಿನಿರಂಗದಿಂದಲೇ ದೂರ ಉಳಿದಿರುವ ಅನೇಕ ಮಂದಿ ಇದ್ದಾರೆ.ಈ ಪೈಕಿ ಮಾಧವಿ ಕೂಡಾ ಒಬ್ಬರು.
ಮಾಧವಿಯ ಮೂಲ ಹೆಸರು ಕನಕ ವಿಜಯಲಕ್ಷ್ಮಿ. ಚಿಕ್ಕಂದಿನಿಂದಲೂ ಭರತನಾಟ್ಯದಲ್ಲಿ ಆಸಕ್ತಿ ಹೊಂದಿದ್ದ ಮಾಧವಿ ತಾಯಿಯಿಂದಲೇ ಭಾರತ ನಾಟ್ಯ ತರಬೇತಿ ಪಡೆದಿದ್ದರು.
13ನೇ ವಯಸ್ಸಿನಲ್ಲಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿರುವ ಮಾಧವಿ ಬಹು ಬೇಗನೆ ಸ್ಟಾರ್ ಪಟ್ಟಕ್ಕೆ ಏರಿದವರು. ಸಿನಿಮಾ ಅವಕಾಶ ಕಡಿಮೆಯಾಗುತ್ತಿದ್ದ ಹಾಗೆ ಮದುವೆಯಾಗಿ ಸಿನಿ ಜಗತ್ತಿನಿಂದಲೇ ದೂರ ಸರಿದರು.
52 ವರ್ಷದ ಈ ನಟಿಯ ಪತಿಯ ಹೆಸರು ರಾಲ್ಫ್ ಶರ್ಮಾ.ಮದುವೆಯ ನಂತರ ಇವರು ಅಮೆರಿಕದ ನ್ಯೂಜೆರ್ಸಿಯಲ್ಲಿ ನೆಲೆಸಿದ್ದರು. ಇವರಿಗೆ ಮೂವರು ಹೆಣ್ಣು ಮಕ್ಕಳು.
ಇವರ ಹಿರಿಯ ಮಗಳ ಹೆಸರು ಟಿಫಾನಿ,ಎರಡನೇ ಮಗಳು ಪ್ರಿಸ್ಸಿಲ್ಲಾ, ಮತ್ತು ಮೂರನೇ ಮಗಳು ಇವಾಲಿನ್.ಈ ಮೂವರು ಕೂಡಾ ಸೌಂದರ್ಯದಲ್ಲಿ ತಾಯಿಯನ್ನೇ ಮೀರಿಸುತ್ತಾರೆ.
ಸದ್ಯ ಮಾಧವಿಯವರ ಕುಟುಂಬದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇವರ ಮೂವರೂ ಮಕ್ಕಳು ಯಾವ ಸಿನಿ ತಾರೆಯರಿಗೂ ಕಮ್ಮಿಯಿಲ್ಲ.
ಮಾಧವಿ ಪತಿ ಮೆಡಿಕಲ್ ಕಂಪನಿ ಮತ್ತು ರೆಸ್ಟೋರೆಂಟ್ ವ್ಯವಹಾರಗಳನ್ನು ಹೊಂದಿದ್ದಾರೆ.ಇವರು ಸಾವಿರಾರು ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎನ್ನಲಾಗಿದೆ.