Haripriya Vasishta simha: ‘ಸಿಂಹಪ್ರಿಯಾ’ ಮದುವೆ ಸಂಭ್ರಮ: ಅರಶಿನ ಶಾಸ್ತ್ರದ ಅಪೂರ್ವ ಕ್ಷಣಗಳ ಫೋಟೋಸ್
ಜನವರಿ 26 ಸಿಂಹಪ್ರಿಯಾ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಇಂದು ಅರಶಿನ ಶಾಸ್ತ್ರ ಮುಗಿದಿದ್ದು ಅಪೂರ್ವ ಕ್ಷಣಗಳ ಫೋಟೋಗಳು ಕ್ಯಾಮರಾದಲ್ಲಿ ಸೆರೆಯಾಗಿದೆ
ಸ್ಯಾಂಡಲ್‌ವುಡ್ ಕಂಚಿನ ಕಂಠದ ನಟ ವಸಿಷ್ಠ ಸಿಂಹ ಹಾಗೂ ಕ್ಯೂಟ್ ಬೆಡಗಿ ಹರಿಪ್ರಿಯಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಎಂಗೇಜ್ಮೆಂಟ್ ಬಳಿಕ ಸುದ್ದಿಗೋಷ್ಠಿ ನಡೆಸಿ ಮದುವೆ ಬಗ್ಗೆ ಅಧಿಕೃತವಾಗಿ ಸ್ಟಾರ್ ಜೋಡಿಗಳು ಘೋಷಣೆ ಮಾಡಿದ್ದರು.
ಮೈಸೂರಿನಲ್ಲಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅದ್ಧೂರಿ ವಿವಾಹ ಜರುಗಲಿದೆ. 28 ರಂದು ಬೆಂಗಳೂರಿನಲ್ಲಿ ರಿಸೆಪ್ಷನ್ ನಡೆಯಲಿದೆ.
2016 ರಿಂದ ಸ್ನೇಹಿತರಾಗಿದ್ದ ಈ ಜೋಡಿ ಇದೀಗ ಹಸೆಮಣೆ ಏರಲು ಸಜ್ಜಾಗಿದೆ.
ಈ ಜೋಡಿಯ ಮುದ್ದಾದ ಫೋಟೋಗಳನ್ನು ಇಲ್ಲಿ ನೀವು ನೋಡಬಹುದು.