Photos: ಅಮೆರಿಕದಲ್ಲಿನ ಶೂಟಿಂಗ್ ಫೋಟೋ ಹಂಚಿಕೊಂಡ ಶಾನ್ವಿ ಶ್ರೀವಾಸ್ತವ

Thu, 05 Oct 2023-10:54 pm,

ಬಹುಭಾಷಾ ನಟಿ ಶಾನ್ವಿ ಶ್ರೀವಾಸ್ತವ ಅವರು ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಅಮೆರಿಕದಲ್ಲಿ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ನಟಿ ಶಾನ್ವಿ ಶ್ರೀವಾಸ್ತವ ಅವರು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.  

ಮಹಿಳಾ ಪ್ರಧಾನ ಸಿನಿಮಾದಲ್ಲಿ ‘ಅವನೇ ಶ್ರೀಮನ್ನಾರಾಯಣ’ ನಟಿ ಶಾನ್ವಿ ಶ್ರೀವಾಸ್ತವ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈ ಸಿನಿಮಾದ ಶೇ.60ಕ್ಕೂ ಹೆಚ್ಚು ಭಾಗದ ಶೂಟಿಂಗ್ ಅಮೆರಿಕದಲ್ಲಿ ನಡೆಯಲಿದೆ. ಸಿಯಾಟಲ್ ಸೇರಿದಂದೆ ವಿವಿಧ ಪ್ರದೇಶಗಳಲ್ಲಿ ಶೂಟಿಂಗ್ ನಡೆಸಲು ನಿರ್ದೇಶಕರು ಬಯಸಿದ್ದಾರೆ.

ಈ ಚಿತ್ರಕ್ಕೆ 'ಅಮೆರಿಕ ಅಮೆರಿಕ' ಚಿತ್ರದ ಸಂಗೀತ ಸಂಯೋಜಕ ಮನೋಮೂರ್ತಿ ಸಂಗೀತ ನಿಡಲಿದ್ದು, ‘ಮಾನ್‍ಸೂನ್ ರಾಗಾ’ ಸಿನಿಮಾಕ್ಕಾಗಿ ಸಾಕಷ್ಟು ಪ್ರಶಂಸೆ ಗಳಿಸಿರುವ ಛಾಯಾಗ್ರಾಹಕ ಎಸ್.ಕೆ.ರಾವ್ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link