ಗಟ್ಟಿಯಾಗಿ ಅಪ್ಪಿಕೊಂಡು ಸಾನಿಯಾ ಮಿರ್ಜಾಗೆ ಕ್ರಿಸ್ಮಸ್ ದಿನವೇ ಪ್ರಪೋಸ್ ಮಾಡಿದ ಮೊಹಮ್ಮದ್ ಶಮಿ!?
ಖ್ಯಾತ ಇಂಡಿಯನ್ ಕ್ರಿಕೆಟರ್ ಮೊಹಮ್ಮದ್ ಶಮಿ ಅವರು ಪತ್ನಿ ಹಸಿನ್ ಜಹಾನ್‌ಗೆ ವಿಚ್ಚೇದನ ಕೊಟ್ಟ ಬಳಿಕ ಮತ್ತೆ ಮದುವೆ ವಿಚಾರಕ್ಕೆ ಹೋಗಿರಲಿಲ್ಲ. ತಾನು ಯಾವುದೇ ಹೆಣ್ಣಿನ ವಿಚಾರದಲ್ಲೂ ಇಲ್ಲವೆಂದು ಖಡಕ್ ನಿರ್ಧಾರ ಮಾಡಿಕೊಂಡಿದ್ದರು.
ಟೀಂ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ವಿರುದ್ಧ ಅವರ ಮಾಜಿ ಪತ್ನಿ ಹಸಿನ್ ಜಹಾನ್ ಹಲವಾರು ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಎಲ್ಲಾ ಆರೋಪಗಳನ್ನು ದಿಟ್ಟವಾಗಿಯೇ ಎದುರಿಸಿದ್ದ ಶಮಿ ಬದುಕುವ ಉತ್ಸಾಹವನ್ನು ಕಳೆದುಕೊಂಡಿರಲಿಲ್ಲ. ಅವರು ಫಿನಿಕ್ಸ್‌ನಂತೆ ಮೇಲೆದ್ದು ಟೀಂ ಇಂಡಿಯಾ ಪರ ಅತ್ತ್ಯುಮವಾಗಿ ಬೌಲಿಂಗ್ ಮಾಡಿ ಮಿಂಚಿದ್ದರು.
ಮೊಹಮ್ಮದ್ ಶಮಿ ಮತ್ತೊಂದು ಮದುವೆಯಾಗುತ್ತೆ ಅಂತಾ ಆಗಾಗ ಗಾಳಿಸುದ್ದಿಗಳು ಹರಿದಾಡುತ್ತಲೇ ಇವೆ. ಟೆನಿಸ್ ತಾರೆ ಸಾನಿಯಾ ಮಿರ್ಜಾರನ್ನು ಶಮಿ ಮದುವೆಯಾಗುತ್ತಾರೆ ಅಂತಾ ವದಂತಿಗಳು ಹರಿದಾಡಿದ್ದವು. ಆದರೆ ಈ ಎಲ್ಲಾ ಗಾಳಿಸುದ್ದಿಗಳಿಗೆ ಶಮಿ ಯಾವುದೇ ರೀತಿ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಬೆಣ್ಣೆಯಂತಿರುವ ಸಾನಿಯಾ ಮಿರ್ಜಾರನ್ನು ನೋಡಿ ಮನಸ್ಸು ಬದಲಾಯಿಸಿದ್ದಾರಾ? ಅನ್ನೋ ಕುತೂಹಲ ಮೂಡಿದೆ.
ಇತ್ತೀಚೆಗಷ್ಟೇ ಪಾಕಿಸ್ತಾನದ ಹಿರಿಯ ಆಟಗಾರ ಶೋಯೆಬ್ ಮಲಿಕ್ ಜೊತೆಗೆ ವಿಚ್ಛೇದನ ಮೂಲಕ ದಾಂಪತ್ಯ ಜೀವನಕ್ಕೆ ಸಾನಿಯಾ ಮಿರ್ಜಾ ಗುಡ್ ಬೈ ಹೇಳಿ ಮತ್ತೆ ಭಾರತಕ್ಕೆ ಬಂದು ವಾಸ್ತವ್ಯ ಹೂಡಿದ್ದಾರೆ. ಈ ವೇಳೆ ಮತ್ತೆ ಟೀಂ ಇಂಡಿಯಾದ ಪಂದ್ಯದ ವೇಳೆ ಸ್ಟೇಡಿಯಂಗೆ ಬಂದು ಕ್ರಿಕೆಟ್ ನೋಡಿದ್ದರು. ಈ ವೇಳೆ ಖ್ಯಾತ ಆಟಗಾರ ಶಮಿ ಅವರ ಆಟವನ್ನು ನೋಡಿ ಸಾನಿಯಾ ಮಿರ್ಜಾ ಫಿದಾ ಆಗಿದ್ದರಂತೆ. ಬಳಿಕ ಅವರು ಶಮಿ ಜೊತೆಗೆ ಕೆಲವು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಈ ವೇಳೆ ಶಮಿ ಅವರ ಜೊತೆ ಫೋಟೋ ಕೂಡ ತೆಗೆಸಿಕೊಂಡಿದ್ದಾರೆ.
ಇದೀಗ ಈ ಇಬ್ಬರು ಮದುವೆ ಆಗುತ್ತಾರೆ ಅನ್ನೋ ಗಾಸಿಪ್ ಎದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಇಬ್ಬರ ಫೋಟೋಗಳನ್ನ Edit ಮಾಡಿಕೊಂಡು ಕ್ರಿಸ್ಮಸ್ ಹಬ್ಬಕ್ಕೆ ಸಿಹಿಸುದ್ದಿ ಅಂತ ವೈರಲ್ ಮಾಡಲಾಗುತ್ತಿದೆ. ಕೆಲವು ಅಭಿಮಾನಿಗಳು ಈ ಫೋಟೋಗಳನ್ನು ನೋಡಿ ನಿಜವೆಂದು ತಿಳಿದುಕೊಂಡಿದ್ದಾರೆ. ಆದರೆ ಇದರ ಬಗ್ಗೆ Factcheck ಪರಿಶೀಲನೆ ಮಾಡಿದಾಗ ಇದು edited ಫೋಟೋ ಅನ್ನುವುದು ಬೆಳಕಿಗೆ ಬಂದಿದೆ. ಇನ್ನು ಸ್ವತಃ ಶಮಿ ಅವರೇ ಸಂದರ್ಶನವೊಂದರಲ್ಲಿ ಸಾನಿಯಾ ಮಿರ್ಜಾರ ಬಗ್ಗೆ ಮಾತನಾಡಿದ್ದಾರೆ. ಈ ವಿಡಿಯೋದಲ್ಲಿ ಅವರು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಗಾಳಿಸುದ್ದಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.