Photos- ಐಶಾರಾಮಿ ಬಂಗಲೆಯಲ್ಲಿ ವಾಸಿಸುವ ಕ್ರಿಕೆಟಿಗರಿವರು
ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಮನೆ ಬಾಂದ್ರಾ ವೆಸ್ಟ್ ನ ಪೆರ್ರಿ ಕ್ರಾಸ್ ರಸ್ತೆಯಲ್ಲಿದೆ, ಇದನ್ನು ಮುಂಬೈನ ಅತ್ಯಂತ ಪಾಶ್ ಪ್ರದೇಶವೆಂದು ಪರಿಗಣಿಸಲಾಗಿದೆ. ಸಚಿನ್ ತನ್ನ ಇಡೀ ಕುಟುಂಬದೊಂದಿಗೆ ತನ್ನ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಾರೆ. ಸಚಿನ್ 2007 ರಲ್ಲಿ ಈ ಬಂಗಲೆಯನ್ನು 39 ಕೋಟಿ ರೂ.ಗೆ ಖರೀದಿಸಿದರು. 6000 ಚದರ ಅಡಿ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಸಚಿನ್ ತೆಂಡೂಲ್ಕರ್ ಅವರ ಬಂಗಲೆ ಈಗ ಸುಮಾರು 100 ಕೋಟಿ ರೂ. ಬೆಲೆ ಬಾಳುತ್ತದೆ ಎಂದು ಅಂದಾಜಿಸಲಾಗಿದೆ.
ವಿರಾಟ್ ಕೊಹ್ಲಿ (Virat Kohli) ಮುಂಬಯಿಯಲ್ಲಿ ಅಲ್ಟ್ರಾ-ಆಧುನಿಕ ಅಪಾರ್ಟ್ಮೆಂಟ್ ಹೊಂದಿದ್ದು, ಇದು ನಾಲ್ಕು ಸುಸಜ್ಜಿತ ಮಲಗುವ ಕೋಣೆಗಳು ಮತ್ತು ದೊಡ್ಡ ಹಾಲ್ ಹೊಂದಿದೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ 34 ಕೋಟಿ ರೂ. ಮೌಲ್ಯದ ಈ ಐಶಾರಾಮಿ ಮನೆ ಮುಂಬೈನ ವರ್ಲಿಯಲ್ಲಿದೆ.
ಎಂ.ಎಸ್.ಧೋನಿ (MS Dhoni) ರಾಂಚಿಯಲ್ಲಿ ಅರಮನೆಯಂತಹ ಫಾರ್ಮ್ ಹೌಸ್ ಹೊಂದಿದ್ದಾರೆ. ಈ ಫಾರ್ಮ್ ಹೌಸ್ 7 ಎಕರೆ ವಿಸ್ತೀರ್ಣ ಪ್ರದೇಶದಲ್ಲಿದೆ. ಧೋನಿಯ ಈ ಫಾರ್ಮ್ ಹೌಸ್ ವೆಚ್ಚ ಕೋಟ್ಯಂತರ ರೂ.ಗಳಾಗಿವೆ. ಧೋನಿಗೆ ಪ್ರಾಣಿಗಳ ಬಗ್ಗೆ ಅಪಾರ ಪ್ರೀತಿ ಇದ್ದು ಈ ಫಾರ್ಮ್ ಹೌಸ್‌ನಲ್ಲಿ ನಾಯಿಗಳು ಮತ್ತು ಕುದುರೆಗಳಿವೆ.
ಇದನ್ನೂ ಓದಿ- Indian Cricketers: ಜನಪ್ರಿಯ ಕ್ರಿಕೆಟಿಗರ 5 ಸ್ಟಾರ್ ಹೋಟೆಲ್‌ನಂತೆ ಕಾಣುವ ಐಶಾರಾಮಿ ಬಂಗಲೆಯ ಸಣ್ಣ ಝಲಕ್
ರೋಹಿತ್ ಶರ್ಮಾ (Rohit Sharma) ಮತ್ತು ಅವರ ಪತ್ನಿ ರಿತಿಕಾ ಸಜ್ದೇಹ್ ತಮ್ಮ ಮಗಳೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದು, ಅವರ ಅಪಾರ್ಟ್ಮೆಂಟ್ ಮೌಲ್ಯ 30 ಕೋಟಿ ರೂ. ರಿತಿಕಾ ಅವರೊಂದಿಗಿನ ನಿಶ್ಚಿತಾರ್ಥದ ನಂತರ 2015 ರಲ್ಲಿ ರೋಹಿತ್ ಶರ್ಮಾ ಈ ಐಷಾರಾಮಿ ಬಂಗಲೆಯನ್ನು ಖರೀದಿಸಿದರು. ಅಪಾರ್ಟ್ಮೆಂಟ್ 6,000 ಚದರ ಅಡಿ ವಿಸ್ತೀರ್ಣದಲ್ಲಿದೆ ಮತ್ತು ಅರೇಬಿಯನ್ ಸಮುದ್ರದ ಅದ್ಭುತ ನೋಟವನ್ನು ನೀಡುತ್ತದೆ.
ಇದನ್ನೂ ಓದಿ- ಪ್ರೈವೇಟ್ ಜೆಟ್ ಗಳನ್ನು ಹೊಂದಿರುವ ಕ್ರಿಕೆಟ್ ತಾರೆಯರು ಇವರು
ಯುವರಾಜ್ ಸಿಂಗ್ (Yuvraj Singh) ಮತ್ತು ಅವರ ಪತ್ನಿ ಹ್ಯಾಜೆಲ್ ಕೀಚ್ 64 ಕೋಟಿ ರೂ.ಗಳ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದಾರೆ. 16,000 ಚದರ ಅಡಿ ವಿಸ್ತೀರ್ಣದಲ್ಲಿ, ಐಷಾರಾಮಿ ಅಪಾರ್ಟ್ಮೆಂಟ್ 29 ನೇ ಮಹಡಿಯಲ್ಲಿದೆ ಮತ್ತು ರೋಹಿತ್ ಅವರ ಮನೆಯಂತೆಯೇ ಯುವರಾಜ್ ಸಿಂಗ್ ಅವರ ಮನೆಯಿಂದಲೂ ಅರೇಬಿಯನ್ ಸಮುದ್ರದ ಅದ್ಭುತ ನೋಟವನ್ನು ಕಾಣಬಹುದಾಗಿದೆ.