PICS: ಅಗಲಿದ ಪತಿ ಚಿರಂಜೀವ ಸರ್ಜಾ ನೆನಪಿನಲ್ಲಿ ಮೇಘನಾ ರಾಜ್ ಸೀಮಂತ, ಬೇಬಿ ಶವರ್
ಸ್ಯಾಂಡಲ್ ವುಡ್ನ ಮುದ್ದು ಮೊಗದ ಚೆಲುವೆ ನಟಿ ಮೇಘನಾ ರಾಜ್ ಅವರ ಸೀಮಂತ ಹಾಗೂ ಬೇಬಿ ಶವರ್ ಚಿತ್ರಗಳು ವೈರಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ತಮ್ಮ ಪತಿ ದಿವಂಗತ ನಟ ಚಿರಂಜೀವಿ ಸರ್ಜಾರ ನೆನಪಿನಲ್ಲಿಯೇ ದಿನದೂಡುತ್ತಿರುವ ಮೇಘನಾ ರಾಜ್ ಅವರ ಜೀವನದಲ್ಲಿ ಹೊಸ ಚಿಗುರು, ನವ ಚೈತನ್ಯ ಎಂದರೆ ಅವರ ಮಗು. ಮೇಘನಾ ಹಾಗೂ ಚಿರು ಅವರ ಪ್ರೀತಿಯ ಪ್ರತಿಬಿಂಬ ಅವರ ಕುಡಿ ಇನ್ನೇನು ಕೆಲವೇ ದಿನಗಳಲ್ಲಿ ಅವರ ಮನೆ ಅಂಗಳದಲ್ಲಿ ಆಡುವುದನ್ನು ನೋಡಲು ಇಡೀ ಕುಟುಂಬವೇ ಕಾತುರದಿಂದ ಕಾಯುತ್ತಿದೆ. ಈ ಮಧ್ಯೆ ತುಂಬು ಗರ್ಭಿಣಿ ಮೇಘನ ರಾಜ್ ಅವರಿಗೆ ಸಾಂಪ್ರದಾಯಿಕವಾಗಿ ಸೀಮಂತ ಶಾಸ್ತ್ರ ಮಾಡಲಾಗಿದೆ. ಅದರ ನಂತರ ಚಿರು ಅವರ ಆಸೆಯಂತೆ ಅವರ ತಮ್ಮ ಧ್ರುವ ಸರ್ಜಾ ಅತ್ತಿಗೆಗೆ ಬೇಬಿ ಶವರ್ ಕೂಡ ಮಾಡಿಸಿದ್ದಾರೆ. ಬನ್ನಿ ಅವರ ಸಂಭ್ರಮದಲ್ಲಿ ನಾವೂ ಭಾಗಿಯಾಗೋಣ... ಅವರ ಸೀಮಂತ ಹಾಗೂ ಬೇಬಿ ಶವರ್ ಸಮಾರಂಭದ ಕೆಲವು ಚಿತ್ರಗಳನ್ನು ನೋಡೋಣ...
ನಟಿ ಮೇಘನಾ ರಾಜ್ ಅವರ ಕುಟುಂಬಸ್ಥರು ಸೀಮಂತ ಆಚರಿಸಿದ ಸಂದರ್ಭದಲ್ಲಿ ಗುಲಾಬಿ ಬಣ್ಣದ ಬಾರ್ಡರ್ ಹೊಂದಿರುವ ಹಸಿರು ಸೀರೆಯನ್ನು ಧರಿಸಿದ್ದರು. ಮೇಘನಾ ಅವರ ಕುಟುಂಬ ಸದಸ್ಯರೊಂದಿಗೆ ವೇದಿಕೆಯಲ್ಲಿ ಕಾಣಿಸಿಕೊಂಡರು.
ಈ ಸಮಾರಂಭದಲ್ಲಿ ಮೇಘನ ಕುಳಿತಿರುವ ಖುರ್ಚಿಯ ಪಕ್ಕದಲ್ಲಿ ಅವರ ಅಗಲಿದ ಪತಿ ಚಿರು ಸರ್ಜಾ ಅವರ ಕಟೌಟ್ ಇರುವುದನ್ನು ಕಾಣಬಹದು. ಇಂತಹ ಸಂದರ್ಭ ಎಂತಹವರನ್ನೂ ಭಾವುಕರನ್ನಾಗಿಸುತ್ತದೆ.
ಚಿರು ಸರ್ಜಾ ಅವರು ಪ್ರೀತಿಯ ಮಡದಿ ಗರ್ಭಿಣಿ ಎಂದು ತಿಳಿದೊಡನೆ ಮೇಘನಾ ಅವರಿಗೆ ಸೀಮಂತದ ಬಳಿಕ ಬೇಬಿ ಶವರ್ ಮಾಡಿಸುವ ಕನಸು ಕಂಡಿದ್ದರಂತೆ.
ಮನೆಯವರು ಸೀಮಂತ ಆಚರಿಸಿದ ಬಳಿಕ ಮೇಘನ ಅವರ ಮೈದುನ ಹಾಗೂ ಚಿರು ಅವರ ಪ್ರೀತಿಯ ತಮ್ಮ ಅಣ್ಣನ ಆಸೆಯಂತೆ ಅತ್ತಿಗೆಗಾಗಿ ಬೇಬಿ ಶವರ್ ಕೂಡ ಮಾಡಿಸಿದ್ದಾರೆ.