ಸಾಮಾನ್ಯ ಶುಂಠಿಯಲ್ಲ ಈ ವಿಶೇಷ ಶುಂಠಿಯನ್ನು ಒಂದು ಬಾರಿ ಸೇವಿಸಿದರೆ ಸಾಕು ಹೈ ಬ್ಲಡ್ ಶುಗರ್ ಕೂಡಾ ನಾರ್ಮಲ್ ಆಗುವುದು !ಹಿತ್ತಲ ತುಂಬಾ ಬೆಳೆದಿರುತ್ತದೆ ಇದು !
ಮಧುಮೇಹ ಇದ್ದಾಗ ರಕ್ತದ ಸಕ್ಕರೆ ಹೆಚ್ಚಾಗದಂತೆ ತಡೆಯಲು ಆಹಾರದ ಬಗ್ಗೆ ಗಮನ ಹರಿಸಬೇಕು. ಇದರ ಜೊತೆ ಬ್ಲಡ್ ಶುಗರ್ ಕಡಿಮೆ ಮಾಡಲು ಸಹಾಯ ಮಾಡುವ ಆಹಾರದತ್ತ ಕೂಡಾ ಗಮನ ಹರಿಸಬೇಕು.
ನಮ್ಮ ಕಣ್ಣ ಮುಂದೆಯೇ ಇರುವ ಅನೇಕ ಪದಾರ್ಥಗಳು ಬ್ಲಡ್ ಶುಗರ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಬಗ್ಗೆ ನಮಗೆ ಅರಿವಿರುವುದಿಲ್ಲ ಅಷ್ಟೇ.
ಇಂಥ ಒಂದು ಪದಾರ್ಥವೆಂದರೆ ಮಾವು ಶುಂಠಿ. ಇದು ನೋಡುವುದಕ್ಕೆ ಶುಂಠಿ ರೀತಿಯೇ ಇದೆ. ಆದರೆ ಸಾಮಾನ್ಯ ಶುಂಠಿ ಅಲ್ಲ. ಇದರ ಬಳಕೆ ವಿಧಾನವೂ ಬೇರೆ.
ಈ ಮಾವು ಶುಂಠಿ ಹಿತ್ತಲಲ್ಲಿ ಅಲ್ಲಲ್ಲಿ ಬೆಳೆಯುತ್ತದೆ. ಎಷ್ಟೋ ಬಾರಿ ಇದು ಸಾಮಾನ್ಯ ಶುಂಠಿ ಅಲ್ಲ ಎಂದು ಇದರತ್ತ ಗಮನ ಹರಿಸದೇ ಇರುವುದೇ ಹೆಚ್ಚು.
ಆದರೆ ಈ ಮಾವು ಶುಂಠಿ ಮಧುಮೇಹಿಗಳಿಗೆ ಅಮೃತ ಇದ್ದ ಹಾಗೆ. ಇದು ಬ್ಲಡ್ ಶುಗರ್ ಅನ್ನ ತ್ವರಿತವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದರ ಸಾರವು ಮಧುಮೇಹದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ. ಇದನ್ನು ಆಂಟಿಡಯಾಬಿಟಿಕ್ ಏಜೆಂಟ್ ಆಗಿ ಪರಿಗಣಿಸಬಹುದು.
ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತವೆ, ಮಾತ್ರವಲ್ಲ ಗ್ಲೈಕೊಜೆನ್ ಮತ್ತು ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತವೆ ಎನ್ನುವುದು ಸಂಶೋಧನೆಯಿಂದಲೂ ಸಾಬೀತಾಗಿದೆ.
ಇದನ್ನು ಚೆನ್ನಾಗಿ ಅರೆದು ರಸ ತೆಗೆದು ಸೇವಿಸಬಹು, ನೀರಿನಲ್ಲಿ ಹಾಕಿ ಬೇಯಿಸಿ ಆ ನೀರನ್ನು ಕುಡಿಯಬಹುದು. ಅಥವಾ ಹಾಗೆಯೇ ಸಣ್ಣ ಪೀಸ್ ಅಗಿದು ತಿನ್ನಬಹುದು.