ಧಂತೇರಸ್‌ನಲ್ಲಿ ಚಿಟಿಕೆ ಉಪ್ಪು ಬದಲಿಸುತ್ತೆ ಅದೃಷ್ಟ, ಮನೆಗೆ ಲಕ್ಷ್ಮಿಯ ಆಗಮನ ಧನವೃಷ್ಟಿ
ಧಂತೇರಸ್‌ನಲ್ಲಿ ಮನೆಗೆ ಕೆಲವು ವಸ್ತುಗಳನ್ನು ತರುವುದರಿಂದ ಲಕ್ಷ್ಮಿಯ ಆಗಮನವಾಗುತ್ತದೆ ಎಂಬ ನಂಬಿಕೆಯಿದೆ. ಆದರೆ, ವಸ್ತುಗಳನ್ನು ತರುವುದರಿಂದಷ್ಟೇ ಅಲ್ಲ ಕೆಲವು ಪರಿಹಾರಗಳಿಂದಲ್ಲೂ ಲಕ್ಷ್ಮಿ ಕೃಪೆಗೆ ಪಾತ್ರರಾಗಬಹುದು.
ಧಂತೇರಸ್‌ನಲ್ಲಿ ಚಿಟಿಕೆ ಉಪ್ಪಿನಿಂದ ಮಾಡುವ ಪರಿಹಾರವು ವ್ಯಕ್ತಿಯ ಅದೃಷ್ಟವನ್ನೇ ಬದಲಾಯಿಸುತ್ತದೆ.
ಉಪ್ಪು ಸಂಪತ್ತಿನಕಾರಕ ಶುಕ್ರನಿಗೆ ಸಂಬಂಧಿಸಿದ್ದು, ಇದು ಸಂಪತ್ತು-ಸಮೃದ್ಧಿಯನ್ನು ಸಂಕೇಸ್ಟಿಸುತ್ತದೆ. ಧಂತೇರಸ್‌ನಲ್ಲಿ ಉಪ್ಪು ಖರೀದಿಸಿ ಕೈಗೊಳ್ಳುವ ಪರಿಹಾರದಿಂದ ಅಂತಹ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ.
ಧಂತೇರಸ್‌ನಲ್ಲಿ ಮನೆಯ ಪೂರ್ವ ದಿಕ್ಕಿನ ಮೂಲೆಯಲ್ಲಿ ಒಂದು ಗಾಜಿನ ಬಟ್ಟಲಿನಲ್ಲಿ ಉಪ್ಪು ಇಡುವುದರಿಂದ ಮನೆಯಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ಪರಿಹಾರ ದೊರೆಯುತ್ತದೆ.
ಧಂತೇರಸ್‌ನಲ್ಲಿ ನೀರಿನಲ್ಲಿ ಉಪ್ಪು ಬೆರೆಸಿ ಮನೆಯನ್ನು ಶುಚಿಗೊಳಿಸುವುದರಿಂದ ದುಷ್ಟ ಶಕ್ತಿಗಳ ನಿವಾರಣೆಯಾಗಿ ಸಕಾರಾತ್ಮಕತೆ ಮನೆಯನ್ನು ತುಂಬುತ್ತದೆ. ಇದರಿಂದ ಮನೆ ಯಜಮಾನನ ಅದೃಷ್ಟವೇ ಬದಲಾಗುತ್ತದೆ.
ಧಂತೇರಸ್ ದಿನದಂದು ಕಲ್ಲು ಉಪ್ಪನ್ನು ಖರೀದಿಸಿ ಇದನ್ನು ಲಕ್ಷ್ಮಿ ಪೂಜೆಯಲ್ಲಿ ನೇವೇದ್ಯವಾಗಿ ಅರ್ಪಿಸಿದರೆ ಮನೆಯಲ್ಲಿ ಸಂಕಷ್ಟಗಳು ದೂರವಾಗಿ ಲಕ್ಷ್ಮಿ ಕೃಪೆಯಿಂದ ಸಂಪತ್ತು ವೃದ್ಧಿಯಾಗುತ್ತದೆ.
ಧಂತೇರಸ್‌ನಲ್ಲಿ ಉಪ್ಪಿನ ಮೂಟೆಯನ್ನು ಕಚೇರಿಯ ಈಶಾನ್ಯ ಮೂಲೆಯಲ್ಲಿ ಇಡುವುದರಿಂದ ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ ಉಂಟಾಗಲಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.