ಊಟಕ್ಕೂ ಮೊದಲು ಈ ಒಣಹಣ್ಣು ತಿಂದರೆ ಮುಂದಿನ 30 ದಿನಗಳವರೆಗೆ ನಾರ್ಮಲ್‌ ಆಗಿರುತ್ತದೆ ಬ್ಲಡ್‌ ಶುಗರ್!‌

Tue, 03 Sep 2024-4:02 pm,

ಒಣ ಹಣ್ಣುಗಳು ಸೂಪರ್ ಫುಡ್ ಸ್ಥಾನಮಾನವನ್ನು ಪಡೆದಿವೆ. ಗೋಡಂಬಿ, ಪಿಸ್ತಾ, ಬಾದಾಮಿ, ಒಣದ್ರಾಕ್ಷಿ, ವಾಲ್ನಟ್ಸ್, ಅಂಜೂರ ಹೀಗೆ ಹಲವಾರು ಬಗೆಯ ಒಣಹಣ್ಣುಗಳ ಬಗ್ಗೆ ನಾವೆಲ್ಲರು ಕೇಳಿರುತ್ತೇವೆ. ಇದರಲ್ಲಿ ವಿಟಮಿನ್ಗಳು, ಪ್ರೋಟೀನ್ಗಳು, ಖನಿಜಗಳು, ಮೆಗ್ನೀಸಿಯಮ್, ತಾಮ್ರ, ಫೋಲಿಕ್ ಆಮ್ಲ, ಬಿ-ಕಾಂಪ್ಲೆಕ್ಸ್, ಸತು ಇತ್ಯಾದಿಗಳು ಹೇರಳವಾಗಿ ಕಂಡುಬರುತ್ತವೆ. ಆದರೆ ಇವುಗಳಿಗಿಂತ ಹೆಚ್ಚು ಪ್ರಯೋಜನಕಾರಿ ಪೈನ್ ಬೀಜಗಳು ಇದನ್ನು ಪೈನ್ ನಟ್ಸ್ ಎಂದೂ ಕರೆಯುತ್ತಾರೆ.

 

ಗೋಡಂಬಿ ಮತ್ತು ಬಾದಾಮಿಯಂತೆ, ಕೊಂಚ ದುಬಾರಿಯಾದ ಈ ಒಣಹಣ್ಣಿನ ಬಗ್ಗೆ ಅನೇಕರಿಗೆ ಪರಿಚಯ ಇಲ್ಲ. ಈ ಕಾಯಿ ಕಂದು ಬಣ್ಣದ ಹಣ್ಣಿನ ಬೀಜವಾಗಿದೆ. ಈ ಬೀಜಗಳು ಉದ್ದವಾದ ಆಕಾರದಲ್ಲಿ ಬಿಳಿಯಾಗಿರುತ್ತವೆ. ಈ ಬೀಜಗಳನ್ನು ಹುರಿದು ತಿಂಡಿ, ಸ್ಮೂತಿ ಅಥವಾ ಸಲಾಡ್‌ʼಗೆ ಸೇರಿಸುವ ಮೂಲಕ ಸೇವಿಸಬಹುದು.

 

ಇವುಗಳನ್ನು ತಿನ್ನುವುದರಿಂದ ಮಧುಮೇಹ, ಬೊಜ್ಜು, ಕೊಲೆಸ್ಟ್ರಾಲ್ ಮೊದಲಾದ ಕಾಯಿಲೆಗಳು ಬರುವುದಿಲ್ಲ. ಇದರೊಂದಿಗೆ, ಮನಸ್ಸನ್ನು ಸಹ ಬಲಪಡಿಸುತ್ತದೆ. ಇದರ ಎಣ್ಣೆಯನ್ನು ಸಲಾಡ್ ಡ್ರೆಸ್ಸಿಂಗ್‌ʼನಲ್ಲಿಯೂ ಬಳಸಬಹುದು. ಇತರ ಒಣ ಹಣ್ಣುಗಳಿಗೆ ಹೋಲಿಸಿದರೆ ಈ ಒಣ ಹಣ್ಣು ಎಷ್ಟು ಪ್ರಯೋಜನಕಾರಿ ಎಂದು ಇಲ್ಲಿ ತಿಳಿಯೋಣ.

 

ಪೈನ್ ಬೀಜಗಳಲ್ಲಿ ಕಂಡುಬರುವ ಕೊಬ್ಬಿನಾಮ್ಲಗಳು ತೂಕ ನಿರ್ವಹಣೆಗೆ ಸಂಬಂಧಿಸಿವೆ. ಇದರಲ್ಲಿ ಪ್ರೋಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳಿವೆ, ಇದು ದೀರ್ಘಕಾಲದವರೆಗೆ ಹೊಟ್ಟೆಯನ್ನು ತುಂಬಿರುವಂತೆ ಮಾಡುತ್ತದೆ. ಅಷ್ಟೇ ಅಲ್ಲದೆ, ಈ ಒಣಹಣ್ಣು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿದ್ದರೂ, ಅವುಗಳನ್ನು ತಿನ್ನುವುದರಿಂದ ತೂಕ ಹೆಚ್ಚಾಗುವುದಿಲ್ಲ.

 

ಪೈನ್ ಬೀಜಗಳು ಮೆದುಳು-ಉತ್ತೇಜಿಸುವ ಒಮೆಗಾ-3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ, ಇದು ಬುದ್ಧಿಮಾಂದ್ಯತೆ ಮತ್ತು ಖಿನ್ನತೆಯ ಲಕ್ಷಣಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪೈನ್ ನಟ್ಸ್ ಪ್ರತಿ ಔನ್ಸ್ ಗೆ 31.4 ಮಿಗ್ರಾಂ ಒಮೆಗಾ 3 ಅನ್ನು ಹೊಂದಿರುತ್ತದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ಮಹಿಳೆಯರು 1.1 ಗ್ರಾಂ ಮತ್ತು ಪುರುಷರು 1.6 ಗ್ರಾಂ ಒಮೆಗಾ 3 ಅನ್ನು ಪ್ರತಿದಿನ ಸೇವಿಸಬೇಕು.

 

ಪೈನ್ ಬೀಜಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸುಧಾರಿಸುತ್ತದೆ. ಜೊತೆಗೆ ಇದರ ರಸವನ್ನು ಸೇವಿಸಿದರೆ ಒಂದು ತಿಂಗಳವರೆಗೆ ಮಧುಮೇಹ ನಿಯಂತ್ರಣದಲ್ಲಿರುತ್ತದೆ. 28 ಗ್ರಾಂ ಪೈನ್ ಬೀಜಗಳು ನಿಮ್ಮ ದೈನಂದಿನ ಮ್ಯಾಂಗನೀಸ್ ಮೌಲ್ಯದ 109% ಅನ್ನು ಒದಗಿಸುತ್ತದೆ. ಇದುವೇ ಮಧುಮೇಹದ ಅಪಾಯವನ್ನು ಕಡಿಮೆ ಮಾಡುವುದು.

 

ಪೈನ್ ನಟ್ಸ್ ಸೇವನೆಯಿಂದ ಯಾರಿಗೂ ಯಾವುದೇ ವಿಶೇಷ ಸಮಸ್ಯೆ ಉಂಟಾಗುವುದಿಲ್ಲವಾದರೂ, ಕೆಲವರಿಗೆ ಡ್ರೈ ಫ್ರೂಟ್ಸ್ ನಿಂದ ಅಲರ್ಜಿ ಇದ್ದರೆ, ಪೈನ್ ನಟ್ಸ್ ಸೇವನೆ ಮಾಡಬಾರದು. ಇದನ್ನು ಸೇವಿಸುವುದರಿಂದ ಪೈನ್ ಮೌತ್ ಸಿಂಡ್ರೋಮ್ ಉಂಟಾಗಬಹುದು. ಈ ಸಂದರ್ಭದಲ್ಲಿ, ನಾಲಿಗೆ ಮತ್ತು ತುಟಿಗಳ ಮೇಲೆ ಗುಳ್ಳೆಗಳು ಬೀಳುವ ಸಾಧ್ಯತೆ ಇದೆ.

 

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿ ಮತ್ತು ಮನೆಮದ್ದುಗಳ ಸಲಹೆಗಳನ್ನು ಪಾಲಿಸುವ ಮೊದಲು ನೀವು ಕಡ್ಡಾಯವಾಗಿ ವೈದ್ಯರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದಕ್ಕೆ ಯಾವುದೇ ರೀತಿ ಹೊಣೆಯಾಗಿರುವುದಿಲ್ಲ.)  

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link