Pitru Paksha 2023: ಶ್ರಾದ್ಧದ ವೇಳೆ ಈ ವಸ್ತುಗಳನ್ನು ದಾನ ಮಾಡಿದ್ರೆ ಪಿತೃ ದೋಷದಿಂದ ಪರಿಹಾರ

Tue, 12 Sep 2023-9:59 pm,

ಪಿತೃ ಪಕ್ಷದ ಈ ದಿನಗಳಲ್ಲಿ ಪೂರ್ವಜರಿಗೆ ನೈವೇದ್ಯ ಮತ್ತು ಶ್ರಾದ್ಧವನ್ನು ಮಾಡಲಾಗುತ್ತದೆ. ಈ ಸಮಯದಲ್ಲಿ ಪೂರ್ವಜರು ಭೂಮಿಗೆ ಬಂದು ತಮ್ಮ ಕುಟುಂಬ ಸದಸ್ಯರನ್ನು ಆಶೀರ್ವದಿಸುತ್ತಾರೆಂಬ ನಂಬಿಕೆಯಿದೆ. ಶ್ರಾದ್ಧ ಪಕ್ಷದ ಸಮಯದಲ್ಲಿ ಕೆಲವು ವಸ್ತುಗಳನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಪಿತೃಪಕ್ಷದ ಸಮಯದಲ್ಲಿ ನಿರ್ಗತಿಕರಿಗೆ ಆಹಾರವನ್ನು ನೀಡಬೇಕು. ಹೀಗೆ ಮಾಡುವುದರಿಂದ ಪೂರ್ವಜರು ಸಂತುಷ್ಟರಾಗುತ್ತಾರೆ ಮತ್ತು ಪಿತೃ ದೋಷದಿಂದ ಮುಕ್ತಿ ಪಡೆಯುತ್ತಾರೆ.

ಪಿತೃ ಪಕ್ಷದ ಸಮಯದಲ್ಲಿ ವಸ್ತ್ರದಾನ ಮಾಡುವುದು ಕೂಡ ಮಂಗಳಕರ. ನೀವು ಅಗತ್ಯವಿರುವವರಿಗೆ ಧೋತಿ, ಕುರ್ತಾ, ಟವೆಲ್ ಮತ್ತು ಶೂಗಳನ್ನು ದಾನ ಮಾಡಬಹುದು. ಹೀಗೆ ಮಾಡುವುದರಿಂದ ರಾಹು-ಕೇತು ದೋಷದ ಜೊತೆಗೆ ಪಿತೃ ದೋಷದಿಂದ ಪರಿಹಾರ ಸಿಗುತ್ತದೆ.

ಪಿತೃಪಕ್ಷದ ಸಮಯದಲ್ಲಿ ಗೋವನ್ನು ದಾನ ಮಾಡುವುದರಿಂದ ಇಡೀ ಕುಟುಂಬದ ಪಾಪಗಳು ನಾಶವಾಗುತ್ತವೆ ಮತ್ತು ಪಿತೃ ದೋಷದಿಂದ ಮುಕ್ತಿ ಸಿಗುತ್ತದೆ.

ಪಿತೃಪಕ್ಷದ ಸಮಯದಲ್ಲಿ ಯಾವುದೇ ನಿರ್ಗತಿಕರಿಗೆ ಅಥವಾ ಬ್ರಾಹ್ಮಣರಿಗೆ ಕಪ್ಪು ಎಳ್ಳನ್ನು ದಾನ ಮಾಡಿದರೆ, ಪೂರ್ವಜರು ಸಂತುಷ್ಟರಾಗುತ್ತಾರೆ ಮತ್ತು ಶನಿದೇವರ ಆಶೀರ್ವಾದವೂ ಸಿಗುತ್ತದೆ.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link