ಮಲಗುವಾಗ ಸೊಳ್ಳೆ ಕಚ್ಚುತ್ತಿದೆಯೇ? ತಲೆದಿಂಬಿನ ಪಕ್ಕ ಈ ಎಲೆಯನ್ನು ಇಡಿ... ಅದರ ವಾಸನೆಗೆ ಓಡಿಹೋಗುತ್ತೆ! ಯಾವ ಪರದೆಯೂ ಬೇಕಿಲ್ಲ
ದೊಡ್ಡಪತ್ರೆ ಎಲೆಗಳ ಬಗ್ಗೆ ನಾವೆಲ್ಲರೂ ಕೇಳಿರುತ್ತೇವೆ. ಹಲವಾರು ಔಷಧೀಯ ಗುಣಗಳಿಂದ ತುಂಬಿರುವ ಈ ಎಲೆಯನ್ನು ಸಾಂಬಾರು, ಕಷಾಯ ಹೀಗೆ ಹಲವಾರು ರೀತಿಯಲ್ಲಿ ಬಳಕೆ ಮಾಡಲಾಗುತ್ತದೆ.
ದೊಡ್ಡಪತ್ರೆಯನ್ನು ಸಾಂಬ್ರಾಣಿ, ಸೆಲರಿ, ಅಜ್ವೈನ್ ಎಲೆ ಎಂದೆಲ್ಲಾ ಕರೆಯುತ್ತಾರೆ. ಅನೇಕ ಗುಣಗಳಿಂದ ಕೂಡಿರುವುದರಿಂದ ಇದನ್ನು ಸೂಪರ್ ಫುಡ್ ಎಂದರೂ ತಪ್ಪಾಗಲ್ಲ.
ಇದು ವಿಶೇಷವಾದ ಸುವಾಸನೆಯನ್ನು ಹೊಂದಿದ್ದು, ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಇದರ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ನೆಗಡಿ, ಕೆಮ್ಮು, ಶೀತ ಮುಂತಾದ ಕಾಯಿಲೆಗಳಿಂದ ಪರಿಹಾರ ದೊರೆಯುತ್ತದೆ. ಅಷ್ಟೇ ಅಲ್ಲ, ಇದರಲ್ಲಿರುವ ಥೈಮಾಲ್ ಎಂಬ ಅಂಶವು ಸೋಂಕುಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
ಎಲುಬುಗಳಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಂದ ಪರಿಹಾರ ಪಡೆಯಲು ದೊಡ್ಡಪತ್ರೆ ಎಲೆಗಳು ಸಹಾಯ ಮಾಡುತ್ತವೆ. ಜೊತೆಗೆ ದೇಹದಲ್ಲಿನ ಯಾವುದೇ ಬಾಹ್ಯ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇನ್ನು ಇದು ಆರೋಗ್ಯಕ್ಕಷ್ಟೇ ಅಲ್ಲದೆ, ಸೊಳ್ಳೆ ಓಡಿಸಲು ಕೂಡ ಬಹಳಷ್ಟು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಶೇಷವಾದ ಗುಣಗಳು ಮನೆಯೊಳಗೆ ಸೊಳ್ಳೆ ಬಾರದಂತೆ ಮಾಡಲು ಸಹಾಯಕ.
ಸಂಜೆ ವೇಳೆ ಅಥವಾ ರಾತ್ರಿ ಮಲಗಿರುವಾಗ ಹೆಚ್ಚಾಗಿ ಸೊಳ್ಳೆ ಕಾಟ ಇರುತ್ತದೆ. ಚೆನ್ನಾಗಿ ನಿದ್ದೆ ಮಾಡಲು ಸಹ ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ತಲೆದಿಂಬಿನ ಪಕ್ಕ ಒಂದೇ ಒಂದು ದೊಡ್ಡಪತ್ರೆ ಎಲೆಯನ್ನು ಇಡಿ. ಇದರಲ್ಲಿರುವ ಗಾಢ ವಾಸನೆಗೆ ಸೊಳ್ಳೆ ಕಾಟ ಇರುವುದಿಲ್ಲ. ಜೊತೆಗೆ ನಿದ್ದೆಯೂ ಚೆನ್ನಾಗಿ ಬರುತ್ತದೆ.
ಇನ್ನು ಸೊಳ್ಳೆ ಕಚ್ಚಿ ಮೈ ಮೇಲೆ ದದ್ದು ಆಗಿದ್ದರೆ ಸಹ ದೊಡ್ಡಪತ್ರೆಯ ರಸವನ್ನು ಹಚ್ಚಿ ಗುಣಪಡಿಸಬಹುದು. ಏಕೆಂದರೆ ಇದರಲ್ಲಿ ಆಂಟಿಸೆಪ್ಟಿಕ್ ಗುಣಗಳಿವೆ.
ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಪರ ವೈದ್ಯಕೀಯ ಸಲಹೆಯಾಗಿ ತೆಗೆದುಕೊಳ್ಳಬಾರದು. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ