ಮಲಗುವ ಮುನ್ನ ದಿಂಬಿನ ಕೆಳಗೆ ಈ ಮಸಾಲೆ ವಸ್ತು ಇಡಿ: ಕೇವಲ 5 ದಿನದಲ್ಲಿ ಬಿಳಿಕೂದಲು ಕಡುಕಪ್ಪಾಗುತ್ತೆ! ಮರಳಿ ಬರೋದೇ ಇಲ್ಲ
ಬಿಳಿ ಕೂದಲನ್ನು ತೊಡೆದುಹಾಕಲು ಹೇರ್ ಡೈ ಅಥವಾ ಕೂದಲ ರಕ್ಷಣೆಯ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಇದು ಕೂದಲಿನ ಮೇಲೆ ಅಡ್ಡ ಪರಿಣಾಮಗಳನ್ನು ಬೀರುತ್ತದೆ. ಹೀಗಿರುವಾಗ ಕೆಲ ಮನೆಮದ್ದುಗಳ ಸಹಾಯದಿಂದ, ಬಿಳಿ ಕೂದಲಿನ ಸಮಸ್ಯೆಯನ್ನು ತೊಡೆದುಹಾಕಬಹುದು.
ಬೆಳ್ಳುಳ್ಳಿಯ ಬಳಕೆಯು ಬಿಳಿ ಕೂದಲನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯನ್ನು ಮಲಗುವ ಮುನ್ನ ತಲೆದಿಂಬಿನ ಕೆಳಗಿಡ್ಡರೆ ಉತ್ತಮ. ಅದರ ಪರಿಮಳಕ್ಕೆ ನೆತ್ತಿಯಲ್ಲಿನ ರಕ್ತ ಸರಾಗವಾಗಿ ಸಂಚರಿಸುತ್ತವೆ. ಇದೇ ಕಾರಣದಿಂದ ಕೂದಲಿನ ಬೆಳವಣಿಗೆ ಉತ್ತಮವಾಗಿರುವುದಲ್ಲದೆ, ಬಿಳಿ ಕೂದಲಿದ್ದರೆ ಕಪ್ಪಾಗುತ್ತದೆ.
ಇದಲ್ಲದೆ, ಬೆಳ್ಳುಳ್ಳಿಯ ಎಸಳನ್ನು ಚೆನ್ನಾಗಿ ಪೇಸ್ಟ್ ಮಾಡಿ. ಅದಕ್ಕೆ 1 ಚಮಚ ಜೇನುತುಪ್ಪವನ್ನು ಸೇರಿಸಿ. ಈ ಹೇರ್ ಮಾಸ್ಕ್ ಅನ್ನು ಕೂದಲು ಮತ್ತು ನೆತ್ತಿಯ ಮೇಲೆ ಹಚ್ಚಿ. 30 ನಿಮಿಷಗಳ ಕಾಲ ಬಿಡಿ. ಬಳಿಕ ಕೂದಲನ್ನು ಚೆನ್ನಾಗಿ ತೊಳೆಯಿರಿ. ವಾರಕ್ಕೊಮ್ಮೆ ಈ ಹೇರ್ ಮಾಸ್ಕ್ ಬಳಸಿ.
ಇನ್ನು 4-5 ಬೆಳ್ಳುಳ್ಳಿಯನ್ನು ತೆಗೆದುಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ 2 ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಕೂದಲು ಮತ್ತು ನೆತ್ತಿಯ ಮೇಲೆ ಸಂಪೂರ್ಣವಾಗಿ ಹಚ್ಚಿ 15-20 ನಿಮಿಷಗಳ ಕಾಲ ಬಿಡಿ. ನಂತರ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ. ಇದು ಕೂದಲಿಗೆ ನೈಸರ್ಗಿಕ ಶಾಂಪೂ ರೀತಿಯಲ್ಲಿ ಕೆಲಸ ಮಾಡುತ್ತದೆ. ವಾರಕ್ಕೆ 2 ರಿಂದ 3 ಬಾರಿ ಹಚ್ಚಬೇಕು. ಈ ಪೇಸ್ಟ್ ಅನ್ನು ಬಳಸುವುದರಿಂದ ಕೂದಲಿನಿಂದ ತಲೆಹೊಟ್ಟು ಸಮಸ್ಯೆ ದೂರವಾಗುವುದಲ್ಲದೆ, ಕೂದಲು ಉದುರುವಿಕೆ ಕೂಡ ತಡೆಯುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)