ಮನೆಯ ಮುಖ್ಯದ್ವಾರದ ಬಳಿ ಈ ಎಲೆ ಇಡಿ: ಮಳೆಗಾಲದಲ್ಲಿ ಮನೆ ತುಂಬಾ ಹಾರಾಡುವ ಈಚಲು ಹುಳ ಓಡಿ ಹೋಗುತ್ತೆ! ಮತ್ತೆಂದೂ ಬರೋದೇ ಇಲ್ಲ
ಮಳೆಗಾಲ ಬಂತೆಂದರೆ ಸಾಕು ಕೀಟಗಳು ಮನೆಗಳಿಗೆ ನುಗ್ಗುವುದು ಸಾಮಾನ್ಯ. ಅದರಲ್ಲೂ ಈಚಲು ಹುಳ (ಕೆಲವೆಡೆ ಇದನ್ನು ಈಸುಳ್ಳಿ ಎಂದೂ ಕರೆಯುತ್ತಾರೆ) ಮನೆ ತುಂಬಾ ಹಾರಾಡುತ್ತಾ ತೊಂದರೆಯನ್ನುಂಟು ಮಾಡುತ್ತವೆ.
ಅಂತಹ ಕೀಟಗಳಿಂದ ಮುಕ್ತಿ ನೀಡಲು ಕೆಲವೊಂದು ಪರಿಹಾರಗಳನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು. ಇದು ಯಾವುದೇ ಅಡ್ಡಪರಿಣಾಮವನ್ನುಂಟು ಮಾಡದೆ, ಕೀಟಗಳನ್ನು ಮನೆಯಿಂದ ದೂರವಿಡುತ್ತವೆ. ಅಂತಹ ಟಿಪ್ಸ್ʼಗಳ ಬಗ್ಗೆ ಮುಂದೆ ತಿಳಿಯೋಣ.
ಮನೆಯ ಮುಖ್ಯದ್ವಾರದ ಬಳಿ ಬೇವಿನ ಎಲೆಯನ್ನು ಕಿವುಚಿ ಇಡಿ. ಇದರ ವಾಸನೆಗೆ ಯಾವ ಕೀಟಗಳು ಸಹ ಮನೆಯೊಳಗೆ ಬರುವುದಿಲ್ಲ. ಇನ್ನು ಬೇವಿನ ಎಣ್ಣೆ, ಪುದೀನಾ ಎಣ್ಣೆ ಮತ್ತು ನಿಂಬೆ ರಸದ ಪರಿಹಾರ ಕೂಡ ಕೀಟ ಓಡಿಸಲು ಸಹಾಯ ಮಾಡುತ್ತದೆ.
ಒಂದು ಕಪ್ ನೀರಿನಲ್ಲಿ ಎರಡು ನಿಂಬೆಹಣ್ಣು, ಅಡಿಗೆ ಸೋಡಾ ಮತ್ತು ಅರಿಶಿನವನ್ನು ಮಿಶ್ರಣ ಮಾಡಿ ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ. ನಂತರ ಅಡುಗೆ ಮನೆ, ಬಾತ್ರೂಮ್ ಮತ್ತು ಮಲಗುವ ಕೋಣೆಯಂತಹ ಕೀಟಗಳ ಹೆಚ್ಚಿನ ಅಪಾಯವಿರುವ ಸ್ಥಳಗಳಲ್ಲಿ ಇದನ್ನು ಸಿಂಪಡಿಸಿ.
ತೆಂಗಿನೆಣ್ಣೆ ಅಥವಾ ಬೇವಿನ ಎಣ್ಣೆಯಲ್ಲಿ ಫೀನೈಲ್ ಮಾತ್ರೆಗಳನ್ನು ಪುಡಿಮಾಡಿ ಮಿಶ್ರಣ ಮಾಡಿ. ಅದನ್ನು ಬಳಿಕ ನೀರಿನಲ್ಲಿ ಬೆರೆಸಿ ಕೀಟಗಳ ಮೇಲೆ ಸಿಂಪಡಿಸಿ. ಇದನ್ನು ಎರಡು ಮೂರು ದಿನಗಳ ಕಾಲ ನಿರಂತರವಾಗಿ ಮಾಡಿ. ಕೀಟಗಳು ಶಾಶ್ವತವಾಗಿ ಓಡಿಹೋಗುತ್ತವೆ.
ಮನೆಯ ಮೂಲೆಗಳಲ್ಲಿ ದಾಲ್ಚಿನ್ನಿ ಪುಡಿಯನ್ನು ಸಿಂಪಡಿಸಿ. ಮನೆಯ ಒಳಗೆ ಅಥವಾ ಹೊರಗೆ ಸಸ್ಯಗಳಲ್ಲಿ ನೀರು ನಿಲ್ಲಲು ಬಿಡಬೇಡಿ. ನಿಯಮಿತವಾಗಿ ಸಸ್ಯಗಳನ್ನು ಸ್ವಚ್ಛಗೊಳಿಸಿ. ಕಾಲಕಾಲಕ್ಕೆ ಒಳಾಂಗಣ ಸಸ್ಯಗಳನ್ನು ಸ್ವಚ್ಛಗೊಳಿಸಿ ಮತ್ತು ಅವುಗಳಿಗೆ ಕೀಟನಾಶಕಗಳನ್ನು ಸೇರಿಸಿ.
ಸಣ್ಣ ಕೀಟಗಳನ್ನು ಓಡಿಸಲು, ಲವಂಗದ ಪುಡಿಯನ್ನು ನೀರಿನಲ್ಲಿ ಬೆರೆಸಿ ಸಿಂಪಡಿಸಿ. ಅಥವಾ ಕೀಟಗಳನ್ನು ನಿವಾರಿಸಲು ಲವಂಗ ಮತ್ತು ದಾಲ್ಚಿನ್ನಿ ಬಳಸಿ.
ಸೂಚನೆ:ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.