ಈ ತರಕಾರಿಯ ಒಂಡು ತುಂಡನ್ನು ಅಂಗಾಲಿನ ಅಡಿ ಇಟ್ಟು ಮಲಗಿ.. ದೀರ್ಘ ಕಾಲದ ಕೆಮ್ಮಿಗೆ ರಾಮಬಾಣ, ಎದೆಯಲ್ಲಿ ಕಟ್ಟಿದ ಕಫ ಕೂಡ ಕಿತ್ತು ಹೊರ ಬರುವುದು !
Onion benefits: ಅಡುಗೆಮನೆಯಲ್ಲಿ ಈರುಳ್ಳಿ ಅತ್ಯಂತ ಸಾಮಾನ್ಯವಾಗಿ ಸಿಗುವ ತರಕಾರಿ. ಈರುಳ್ಳಿಯನ್ನು ಹಸಿಯಾಗಿ ತಿನ್ನುವುದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.
ಶೀತದ ದಿನಗಳಲ್ಲಿ ಈರುಳ್ಳಿಯನ್ನು ತಿನ್ನುವುದರಿಂದ ನೆಗಡಿ, ಕೆಮ್ಮಿನ ಸಮಸಮ್ಯೆಗಳು ದೂರವಾಗುತ್ತವೆ. ಆದರೆ ಈರುಳ್ಳಿ ತಿನ್ನುವ ಸರಿಯಾದ ವಿಧಾನ ತಿಳಿದಿರಬೇಕು.
ಪ್ರತಿದಿನ ಒಂದು ಮಧ್ಯಮ ಗಾತ್ರದ ಈರುಳ್ಳಿ ತಿನ್ನಬೇಕು . ಈರುಳ್ಳಿ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಗುಣಗಳನ್ನು ಹೊಂದಿದೆ. ಇದನ್ನು ತಿನ್ನುವುದರಿಂದ ನೆಗಡಿ, ಕೆಮ್ಮು ಮತ್ತು ಜ್ವರದಿಂದ ಮುಕ್ತಿ ದೊರೆಯುತ್ತದೆ.
ಈರುಳ್ಳಿಯನ್ನು ಅನೇಕ ವಿಧಗಳಲ್ಲಿ ಸೇವಿಸಬಹುದು. ದೀರ್ಘ ಕಾಲದ ಕೆಮ್ಮಿನಿಂದ ಬಳಲುತ್ತಿರುವವರು ಈರಳ್ಳಿಯ ರಸ ತೆಗೆದು ಅದಕ್ಕೆ ಚಿಟಿಕೆ ಕರಿಮೆಣಸಿನ ಪುಡಿ ಬೆರೆಸಿ ಕುಡಿಯಬೇಕು.
ಈರುಳ್ಳಿಯ ಒಂಡು ತುಂಡನ್ನು ಅಂಗಾಲಿನ ಅಡಿ ಇಟ್ಟು ಸಾಕ್ಸ್ ಧರಿಸಿ ಮಲಗಿದರೆ ಶೀತ, ಜ್ವರ, ಕೆಮ್ಮು ಗುಣವಾಗುತ್ತದೆ. ದೀರ್ಘ ಕಾಲದ ಒಣ ಕೆಮ್ಮಿಗೂ ಇದು ಮದ್ದಾಗಿದೆ.
ಈರುಳ್ಳಿಯನ್ನು ಜಜ್ಜಿ ಇದನ್ನು ಹಸಿಯಾಗಿ ತಿನ್ನಬೇಕು. ಇದರಿಂದ ಕೆಮ್ಮು ನಿವಾರಣಯಾಗುವುದು. ಜೊತೆಗೆ ಎದೆಯಲ್ಲಿ ಕಟ್ಟಿದ ಕಫ ಕೂಡ ಕಿತ್ತು ಹೊರಬರುವುದು.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.