Planet Transit 2021: ಡಿಸೆಂಬರ್ 2021ರವರೆಗೆ ಈ ಐದು ರಾಶಿಯ ಜನರ ಮೇಲಿರಲಿದೆ ಶ್ರೀಲಕ್ಷ್ಮಿಯ ವಿಶೇಷ ಕೃಪೆ, ಅಪಾರ ಧನವೃಷ್ಟಿ
1. ಮೇಷ ರಾಶಿ: ಮೇಷ ರಾಶಿಯ ಜನರ ಪಾಲಿಗೆ ಹಣ ಗಳಿಕೆಗೆ ಇದು ತುಂಬಾ ಉತ್ತಮ ಸಮಯವಾಗಿರಲಿದೆ. ಈ ಸಮಯ ಡಿಸೆಂಬರ್ 2021ರವರೆಗೆ ಇರಲಿದೆ. ಹೀಗಿರುವಾಗ ಅರ್ಥಪ್ರಾಪ್ತಿಗೆ ನೀವು ಮಾಡುವ ಯಾವುದೇ ಕಳಸದಿಂದ ನಿಮಗೆ ಉತ್ತಮ ಫಲ ಪ್ರಾಪ್ತಿಯಾಗಲಿದೆ. ಅರ್ಥಿಕ ಸ್ಥಿತಿ ತುಂಬಾ ಗಟ್ಟಿಯಾಗಿರಲಿದೆ. ವಾಹನ ಖರೀದಿಯ ಯೋಗವು ಇದೆ.
2. ತುಲಾ ರಾಶಿ: ಪ್ರಸ್ತುತ ತುಲಾ ರಾಶಿಯ ಜನರಿಗೆ ಆರ್ಥಿಕ ಸಮಸ್ಯೆಯಿಂದ ಮುಕ್ತಿ ಸಿಗಲಿದೆ. ದೇವಿ ಲಕುಮಿಯ (Goddess Lakshmi) ವಿಶೇಷ ಕೃಪೆ ಇವರ ಮೆಲಿರಲಿದೆ. ಡಿಸೆಂಬರ್ 2021ರವರೆಗೆ ನಿಮಗೆ ಧನ ಸಂಪಾದನೆಯ ಅಪಾರ ಅವಕಾಶಗಳು ಲಭಿಸಲಿವೆ. ಹೀಗಾಗಿ ಈ ಅವಧಿಯಲ್ಲಿ ಸಾಕಷ್ಟು ಶ್ರಮಿಸಿ. ಹಣ ಹೂಡಿಕೆಗೂ ಕೂಡ ಈ ಸಮಯ ತುಂಬಾ ಉತ್ತಮ ವಾಗಿದೆ.
3. ಕನ್ಯಾ ರಾಶಿ: ಕನ್ಯಾ ರಾಶಿಯ ಜಾತಕದವರ ಪಾಲಿಗೆ ಈ ಸಮಯ ತುಂಬಾ ಅನುಕೂಲಕರವಾಗಿದೆ. ಉತ್ತಮ ನೌಕರಿಯ ಅವಕಾಶ ಲಭಿಸಲಿದೆ. ಉತ್ತಮ ಉದ್ಯೋಗಾವಕಾಶ ದೊರೆತ ಬಳಿಕ ಪ್ರಸ್ತುತ ಇರುವ ನೌಕರಿಯ ಬದಲಾವಣೆ ಲಾಭ ತರಲಿದೆ. ಆದರೆ, ಧನಪ್ರಾಪ್ತಿಯ (Financial Income) ಜೊತೆಗೆ ವೆಚ್ಚವು ಅಧಿಕವಾಗಲಿದೆ. ಬಿಸ್ನೆಸ್ ನಲ್ಲಿರುವ ಜನರಿಗೆ ದೊಡ್ಡ ಕಂಸೈನ್ಮೆಂಟ್ ಸಿಗುವ ಅವಕಾಶ ಇದೆ.
4. ಸಿಂಹ ರಾಶಿ: ಸಿಂಹ ರಾಶಿಯ ಜಾತಕದವರ ಆರ್ಥಿಕ ದೃಷ್ಟಿಯಿಂದ ಈ ಸಮಯ ತುಂಬಾ ಉತ್ತಮವಾಗಿರಲಿದೆ. ಆರ್ಥಿಕ ವಿಷಯದಲ್ಲಿ ತುಂಬಾ ಯೋಚಿಸಿ ನಿರ್ಧಾರ ಕೈಗೊಳ್ಳಿ. ಇದರಿಂದ ಸಂಭಾವ್ಯ ಹಾನಿ ತಪ್ಪಲಿದೆ ಮತ್ತು ದೊಡ್ಡ ಲಾಭ ಸಿಗಲಿದೆ. ಡಿಸೆಂಬರ್ ತಿಂಗಳು ಹಣ ಹೂಡಿಕೆಗಾಗಿ ಉತ್ತಮ ಸಮಯವಾಗಿರಲಿದೆ.
5. ಕುಂಭ ರಾಶಿ: ಕುಂಭ ರಾಶಿಯ ಜಾತಕದವರ ಪಾಲಿಗೆ ಮುಂದಿನ ಕೆಲ ತಿಂಗಳುಗಳು ಉತ್ತಮವಾಗಿರಲಿವೆ. ದೇವಿ ಲಕುಮಿಯ ಕೃಪೆ ನಿಮ್ಮ ಮೆಲಿರಲಿದ್ದು, ಧನವೃಷ್ಟಿಯಾಗಲಿದೆ. ಉದ್ಯೋಗ-ನೌಕರಿಗೆ ಸಂಬಂಧಿಸಿದ ಜನರಿಗೆ ಬಡ್ತಿ ಸಿಗುವ ಸಕಲ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ನೀವು ಮಾಡುವ ಎಲ್ಲಾ ಕಾರ್ಯಗಳಲ್ಲಿ ನಿಮಗೆ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ.