ಆಗಸ್ಟ್ 2023 ರಲ್ಲಿ ದೊಡ್ಡ ಗ್ರಹಗಳ ರಾಶಿ ಗೋಚರದಿಂದ, ಈ ಜನರಿಗೆ ಆಕಸ್ಮಿಕ ಧನಲಾಭ-ಭಾಗ್ಯೋದಯ ಬಾಗ್ಯ!
1. ಶುಕ್ರ ಗೋಚರ- ಬರುವ ಆಗಸ್ಟ್ 7ರಂದು ಶುಕ್ರ ವಕ್ರ ಭಾವದಲ್ಲಿಯೇ ಕರ್ಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಅಕ್ಟೋಬರ್ 2, 2023ರವರೆಗೆ ಶುಕ್ರ ಅಲ್ಲಿಯೇ ಇರಲಿದ್ದಾನೆ. ಈ ಅವಧಿಯಲ್ಲಿ ಸೆಪ್ಟೆಂಬರ್ 4 ರಂದು ಆತ ಪುನಃ ತನ್ನ ನೇರ ನಡೆಯನ್ನು ಅನುಸರಿಸಲಿದ್ದಾನೆ. ಶುಕ್ರ ಗೋಚಾರದ ಅವಧಿ ಒಟ್ಟು 23 ದಿನಗಳದ್ದಾಗಿರುತ್ತದೆ. ವೃಷಭ ಹಾಗೂ ತುಲಾ ರಾಶಿಗಳ ಜಾತಕದವರಿಗೆ ಶುಕ್ರ ಅಧಿಪತಿ. ಶುಕ್ರನನ್ನು ಧನ,ಸಮೃದ್ಧಿ, ಸುಖ, ಆನಂದ, ಧನಲಾಭ, ಆಕರ್ಷಣೆ, ಸುಂದರತೆ, ಪ್ರೇಮ ಸಂಬಂಧ ಇತ್ಯಾದಿಗಳ ಕಾರಕ ಗ್ರಹ ಎಂದೂ ಕೂಡ ಹೇಳಲಾಗುತ್ತದೆ. ಹೀಗಿರುವಾಗ ಚಂದ್ರನ ರಾಶಿಯಾಗಿರುವ ಕರ್ಕ ರಾಶಿಯಲ್ಲಿ ಸೂರ್ಯನ ಗೋಚರದಿಂದ ಹಲವು ರಾಶಿಗಳ ಜನರಿಗೆ ವಿಶೇಷ ಲಾಭ ಸಿಗಲಿದೆ. ಅದರಲ್ಲಿಯೂ ವಿಶೇಷವಾಗಿ ಮಿಥುನ ಹಾಗೂ ವೃಶ್ಚಿಕ ರಾಶಿಗಳ ಜಾತಕದವರಿಗೆ ಧನಲಾಭ ಪ್ರಾಪ್ತಿಯಾಗಲಿದ್ದು, ಅವರ ಭಾಗ್ಯೋದಯ ನಿಶ್ಚಿತ ಎನ್ನಲಾಗಿದೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ.
2. ಶುಕ್ರ ಅಸ್ತ 2023: ವೈದಿಕ ಜೋತಿಷ್ಯ ಪಂಚಾಂಗದ ಪ್ರಕಾರ ಆಗಸ್ಟ್ 7, 2023 ರಂದು ಶುಕ್ರ ಕರ್ಕ ರಾಶಿಗೆ ಪ್ರವೇಶಿಸಲಿದ್ದಾನೆ. ಇದರ ಮಾರನೇ ದಿನ ಅಂದರೆ ಆಗಸ್ಟ್ 8 ರಂದು ಅದೇ ರಾಶಿಯಲ್ಲಿ ಅಸ್ತಮಿಸಲಿದ್ದಾನೆ. ಶುಕ್ರನ ಈ ಅಸ್ತದಿಂದ ಹಲವು ರಾಶಿಗಳಿಗೆ ಲಾಭ ಸಿಗಲಿದೆ. ಮಿಥುನ ರಾಶಿಯ ಜಾತಕದವರಿಗೆ ಮಿಶ್ರ ಫಲಿತಾಂಶಗಳು ಪ್ರಾಪ್ತಿಯಾಗಲಿದ್ದು ಕರ್ಕ ರಾಶಿಯ ಜಾತಕದವರಿಗೆ ವಿಶೇಷ ಲಾಭ ಸಿಗಲಿದೆ.
3. ಸೂರ್ಯ ಗೋಚರ 2023: ವೈದಿಕ ಪಂಚಾಂಗದ ಪ್ರಕಾರ ಆಗಸ್ಟ್ 17, 2023 ರಂದು ಮಧ್ಯಾಹ್ನ 1 ಗಂಟೆ 23 ನಿಮಿಷಕ್ಕೆ ಗ್ರಹಗಳ ರಾಜ ಸೂರ್ಯ ತನ್ನದೇ ಆದ ಸಿಂಹ ರಾಶಿಯಲ್ಲಿ ಪ್ರವೇಶಿಸಲಿದ್ದಾನೆ. ಸೂರ್ಯನ ಈ ಸ್ವರಾಶಿ ಗೋಚರ ಹಲವು ರಾಶಿಗಳಿಗೆ ವಿಶೇಷ ಲಾಭವನ್ನು ತಂದುಕೊಡಲಿದೆ. ಸೂರ್ಯನ ಈ ಗೋಚರದಿಂದ ಸಮಾಜದಲ್ಲಿ ಅವರ ಸ್ಥಾನಮಾನ ಹೆಚ್ಚಾಗಲಿದೆ. ರಚನಾತ್ಮಕ ಕಲೆ, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಇದರಿಂದ ಲಾಭ ಸಿಗಲಿದೆ. ಏಕಾಗ್ರತೆ, ಶಕ್ತಿ, ಬುದ್ಧಿಯಲ್ಲಿ ಸಾಕಷ್ಟು ವೃದ್ದಿಯಾಗಲಿದೆ.
4. ಮಂಗಳ ಗೋಚರ 2023: ಸಾಹಸ ಹಾಗೂ ಶಕ್ತಿಯ ಕಾರಕನಾಗಿರುವ ಮಂಗಳ ಆಗಸ್ಟ್ 18ರಂದು ಮಧ್ಯಾಹ್ನ 3 ಗಂಟೆ 14 ನಿಮಿಷಕ್ಕೆ ಕನ್ಯಾ ರಾಶಿಯಲ್ಲಿ ಪ್ರವೇಶಿಸಲಿದ್ದಾನೆ. ಮಂಗಳನ ಈ ಗೋಚರ ಮೇಷ, ಮಿಥುನ, ಕರ್ಕ, ವೃಷಿಕ ರಾಶಿಗಳು ಸೇರಿದಂತೆ ಇತರ ರಾಶಿಗಳಿಗೆ ವಿಶೇಷ ಲಾಭ ಸಿಗಲಿದೆ.
5. ಶುಕ್ರ ಉದಯ 2023: ಆಗಸ್ಟ್ 8 ರಂದು ಕರ್ಕ ರಾಶಿಯಲ್ಲಿ ಅಸ್ತಮಿಸಿದ ಶುಕ್ರ ಆಗಸ್ಟ್ 18ರಂದು ಸಂಜೆ 7 ಗಂಟೆ 17 ನಿಮಿಷಕ್ಕೆ ಕರ್ಕ ರಾಶಿಯಲ್ಲಿ ಉದಯಿಸಲಿದ್ದಾನೆ. ಇದರಿಂದ ಶುಕ್ರನ ಶುಭ ದೆಸೆಯಿಂದ ಹಲವು ರಾಶಿಗಳ ಜಾತಕದವರ ಜೀವನದಲ್ಲಿ ಭೌತಿಕ ಸುಖದ ಜೊತೆಗೆ ವೈವಾಹಿಕ ಸುಖ, ಭೋಗಗಳು ಪ್ರಾಪ್ತಿಯಾಗಲಿವೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)